ETV Bharat / city

Watch video: ಬೆಂಗಳೂರಲ್ಲಿ 3 ಅಂತಸ್ತಿನ ಮತ್ತೊಂದು ಕಟ್ಟಡ ಕುಸಿತ... ಪ್ರತ್ಯಕ್ಷದರ್ಶಿ ಹೇಳಿದ್ದೇನು?

author img

By

Published : Sep 28, 2021, 10:45 AM IST

Updated : Sep 28, 2021, 1:06 PM IST

ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

building collapse
building collapse

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಟ್ಟಡ ಕುಸಿದಿದೆ. ಡೈರಿ ವೃತ್ತ ಬಳಿಯ ಕೆಎಂಎಫ್​ ಕ್ವಾಟರ್ಸ್​​​ನಲ್ಲಿರುವ ಮೂರು ಅಂತಸ್ತಿನ ಕಟ್ಟಡ ಭಾಗಶಃ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಈ ಹಳೆಯ ಕ್ವಾಟರ್ಸ್​ನಲ್ಲಿ 18 ಮನೆಗಳಿವೆ.

ಸ್ಥಳೀಯ ನಿವಾಸಿ ಬಾಲಕೃಷ್ಣ ಪ್ರತಿಕ್ರಿಯೆ

'ಕಟ್ಟಡ ಕುಸಿಯುವ ಬಗ್ಗೆ ಇಂದು ಬೆಳಿಗ್ಗೆ ಇಂಜಿನಿಯರ್ ಅವರಿಗೆ ತಿಳಿಸಲಾಗಿತ್ತು. ಅವ್ರು ಬಂದು ತಕ್ಷಣವೇ ಎಲ್ಲರೂ ಮನೆಯಿಂದ ಆಚೆ ಬರುವಂತೆ ಸೂಚಿಸಿದರು. ನಾವೆಲ್ಲರೂ ಮನೆಯಿಂದ ಹೊರಗೆ ಓಡಿಬಂದ 5 ನಿಮಿಷದಲ್ಲಿ 9:30ರ ಸುಮಾರಿಗೆ ಕಟ್ಟಡ ಕುಸಿಯಿತು. ನಮ್ಮ ಸಾಮಾನುಗಳೆಲ್ಲ ಮನೆಯೊಳಗೇ ಇವೆ' ಎಂದು ಕಟ್ಟಡದಲ್ಲಿ ವಾಸವಿರುವ ಬಾಲಕೃಷ್ಣ ಎಂಬುವವರು ಈಟಿವಿ ಭಾರತ​ಕ್ಕೆ ತಿಳಿಸಿದ್ದಾರೆ.

ನಿನ್ನೆಯಷ್ಟೇ ವಿಲ್ಸನ್ ಗಾರ್ಡನ್ ಬಳಿಯ ಲಕ್ಕಸಂದ್ರದಲ್ಲಿ ಇದ್ದಕ್ಕಿದ್ದಂತೆ ಮೂರು ಅಂತಸ್ತಿನ ಕಟ್ಟಡ ಕುಸಿದ ಘಟನೆ ನಡೆದಿತ್ತು. ಆ ಬೆನ್ನಲ್ಲೇ ಇಂದು ಮತ್ತೊಂದು ಕಟ್ಟಡ ಕುಸಿದಿದೆ. ಕಳೆದ ಒಂದು ವಾರದಿಂದ ಬೆಂಗಳೂರಲ್ಲಿ ಒಂದಲ್ಲ ಒಂದು ಅನಾಹುತಗಳು ನಡೆಯುತ್ತಲೇ ಇವೆ.

(Live video: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿತ.. ಸ್ವಲ್ಪದರಲ್ಲೇ ತಪ್ಪಿದ ಅನಾಹುತ)

Last Updated : Sep 28, 2021, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.