ಬೆಂಗಳೂರು : ಮದ್ಯದ ಅಮಲಿನಲ್ಲಿ ಪದೇ ಪದೇ ಕಿರಿಕ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಜೀವನ್ ಭಿಮಾ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಸಾಗರ್ ಹಾಗೂ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ.
ಜೂನ್ 13 ರಂದು ಜೀವನ್ ಭಿಮಾ ನಗರದ ಬಿಡಿಎ ಲೇಔಟಿನಲ್ಲಿ ನೇಪಾಳ ಮೂಲದ ಸುಶೀಲ್ ಎಂಬಾತನ ಕೊಲೆ ನಡೆದಿತ್ತು. ಬ್ಯಾಂಕ್ ಸೀಜ್ ಮಾಡಿದ್ದ ಕಟ್ಟಡದಲ್ಲಿ ಸುಶೀಲ್ ಶವ ಪತ್ತೆಯಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಜೀವನ್ ಭಿಮಾ ನಗರ ಠಾಣಾ ಪೊಲೀಸರು ಸೆಕ್ಯುರಿಟಿ ಗಾರ್ಡ್ ಆಗಿದ್ದ ಸಾಗರ್ ಹಾಗೂ ಮತ್ತಿಬ್ಬರು ಅಪ್ರಾಪ್ತ ಆರೋಪಿಗಳ್ನು ಬಂಧಿಸಿದ್ದಾರೆ.
ಸುಶೀಲ್ ಆಗಾಗ ಸಾಗರ್ ನಿಯೋಜನೆಯಾಗಿದ್ದ ಕಟ್ಟಡದಲ್ಲಿ ಬಂದು ಕಳ್ಳತನ ಮಾಡಡುತ್ತಿದ್ದಿದ್ದರಿಂದ ಆರೋಪ ಸಾಗರ್ ಮೇಲೆ ಬರುತ್ತಿತ್ತು. ಪ್ರಶ್ನಿಸಿದಾಗ ಸುಶೀಲ್ ಉಡಾಫೆ ಉತ್ತರ ನೀಡಿದ್ದರಿಂದ ಸಿಟ್ಟಿಗೆದ್ದ ಆರೋಪಿಗಳು ಸುಶೀಲ್ನ ಕೈಕಾಲುಕಟ್ಟಿ ದೊಣ್ಣೆಯಿಂದ ಹೊಡೆದ ಕೊಂದಿರುವುದ್ಆಗಿ ಒಪ್ಪಿಕೊಂಡಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಮುಂದುವರೆದ ಹಿಂಸಾಚಾರ: ಪೊಲೀಸರ ಮೇಲೆ ಕಲ್ಲು ತೂರಾಟ, ಹಲ್ಲೆ