ETV Bharat / city

ಹಗಲು ಆಟೋ ಓಡಿಸಿ ದುಡಿಮೆ, ಕತ್ತಲಾಗ್ತಿದ್ದಂತೆ ಮನೆಗಳ್ಳತನ: ಬೆಂಗಳೂರಿನಲ್ಲಿ ಖದೀಮ ಅರೆಸ್ಟ್​​ - ರಾಜಾಜಿನಗರ ಮನೆಗಳ್ಳತನ ಪ್ರಕರಣ

ರಾತ್ರಿ ಅಥವಾ ಮುಂಜಾನೆ 4 ಗಂಟೆಯ ಸುಮಾರಿಗೆ ಮನೆ/ಅಂಗಡಿಯ ಬೀಗ ಮುರಿದು ಅಲ್ಲಿ ಸಿಗುವ ಹಣ ಹಾಗು ಆಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Accused arrested in Rajajinagar theft case
ರಾಜಾಜಿನಗರ ಮನೆಗಳ್ಳತನ ಪ್ರಕರಣ : ಆರೋಪಿಯ ಬಂಧನ
author img

By

Published : Nov 28, 2021, 7:19 AM IST

ಬೆಂಗಳೂರು: ಹಗಲು ಹೊತ್ತು ಆಟೋ ಓಡಿಸುತ್ತಾ ಬೀಗ ಹಾಕಿದ ಮನೆ ಹಾಗು ಅಂಗಡಿಗಳನ್ನು ಗುರುತಿಸಿ, ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುರುಬರಹಳ್ಳಿ ನಿವಾಸಿ ವರದರಾಜು ಬಂಧಿತ ಆರೋಪಿ. ಕೆಲವು ದಿನಗಳ ಹಿಂದೆ ರಾಜಾಜಿನಗರ ವ್ಯಾಪ್ತಿಯಲ್ಲಿ ಹಾಡಹಗಲೇ ಮನೆ ಬೀಗ ಮುರಿದು ಕಳವು ಮಾಡಲಾಗಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ಪಾಟೀಲ್ ತಿಳಿಸಿದರು.

ಆರೋಪಿ ವೃತ್ತಿಯಲ್ಲಿ ಆಟೋ ಚಾಲಕ. ಹಲವು ವರ್ಷಗಳಿಂದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗ್ತಿದೆ. ತಾನು ಓಡಾಡಿದ ರಸ್ತೆಯಲ್ಲಿ ಬೀಗ ಹಾಕಿದ ಮನೆ ಹಾಗು ಅಂಗಡಿಗಳಿಗೆ ರಾತ್ರಿ ಅಥವಾ ಮುಂಜಾನೆ 4 ಗಂಟೆಯ ಸುಮಾರಿಗೆ ತೆರಳಿ ಬೀಗ ಮುರಿದು ಮನೆ ಅಥವಾ ಅಂಗಡಿಯಲ್ಲಿ ಸಿಗುವ ಹಣ ಹಾಗು ಆಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಈ ಹಿಂದೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳವು ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದ ಈತ ಮತ್ತೆ‌ ಅದೇ ಹಳೆ ಚಾಳಿ ಮುಂದುವರೆಸಿದ್ದಾನೆ. 25 ಲಕ್ಷ ರೂ. ಮೌಲ್ಯದ 455 ಗ್ರಾಂ ಚಿನ್ನಾಭರಣ ಹಾಗು 12 ಸಾವಿರ ರೂ. ನಗದನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಕಚೇರಿ ಸಿಬ್ಬಂದಿ ಜೊತೆ ಚೆಲ್ಲಾಟ ಪ್ರಕರಣ : ವೈದ್ಯಾಧಿಕಾರಿ ಎರಡು ದಿನ ಪೊಲೀಸ್ ಕಸ್ಟಡಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.