ಬೆಂಗಳೂರು: ದಿನೇ ದಿನೆ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಕಾರಣ ಜನರಲ್ಲಿ ಆತಂಕ ಮೂಡುತ್ತಿದ್ದರೆ, ಮತ್ತೊಂದೆಡೆ ತಮ್ಮ ಜೀವದ ಹಂಗನ್ನ ತೊರೆದು ಪೊಲೀಸರು ಲಾಕ್ಡೌನ್ ಯಶಸ್ವಿಗೊಳಿಸಿ ಕೊರೊನಾವನ್ನ ಹೊಡೆದೊಡಿಸಲು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಲಿಕಾನ್ ಸಿಟಿಯ ಪ್ರತಿ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಸಿಬ್ಬಂದಿ ಉರಿ ಬಿಸಿಲಿನಲ್ಲೂ ಕಾರ್ಯನಿರ್ಹವಹಿಸಿ ಜನ ಮನೆಯಿಂದ ಹೊರಬಾರದಂತೆ ನೋಡಿಕೊಳ್ಳುತ್ತಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಗಳು ಕೂಡ ತಮ್ಮದೇಯಾದ ರೀತಿಯಲ್ಲಿ ಕೊರೊನಾವನ್ನು ಹೊಡೆದೊಡಿಸಲು ಸಜ್ಜಾಗಿದ್ದಾರೆ. ಅವರ್ಯಾರು ಅಂತ ನೀವೇ ನೋಡಿ...
1. ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಕಮಿಷನರ್
ರಾಜಧಾನಿಯ ಸಂಪೂರ್ಣ ಜವಾಬ್ದಾರಿ ಇವರ ಕೈಯಲ್ಲಿದೆ. ತನ್ನ ವ್ಯಾಪ್ತಿಯ ಡಿಸಿಪಿಗಳಾದ ಶಶಿಕುಮಾರ್ (ಉತ್ತರ ವಿಭಾಗ), ರಮೇಶ್ ಬಾನೋತ್ (ಪಶ್ಚಿಮ ವಿಭಾಗ), ರೋಹಿಣಿ ಕಟೋಚ್ (ದಕ್ಷಿಣಾ ವಿಭಾಗ), ಶರಣಪ್ಪ (ಪೂರ್ವ ವಿಭಾಗ), ಚೇತನ್ ಸಿಂಗ್ ರಾಥೋರ್ (ಕೇಂದ್ರ ವಿಭಾಗ), ಜೋಶಿ ಶ್ರೀನಾಥ್ (ಆಗ್ನೇಯ ವಿಭಾಗ), ಡಾ.ಭೀಮಾಶಂಕರ್ ಗುಳೇದ್ (ಈಶಾನ್ಯ ವಿಭಾಗ) ಅವರೊಂದಿಗೆ ಕೊರೊನಾ ಸೋಂಕು ಹರಡದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸುತ್ತಾರೆ. ಯಾವ ರೀತಿ ನಿಯಂತ್ರಣಕ್ಕೆ ತರಬೇಕು. ಜನರಿಗೆ ಆಹಾರ ಹಾಗೂ ಅಗತ್ಯ ಓಡಾಟಕ್ಕೆ ಸಮಸ್ಯೆಯಾಗದ ರೀತಿ ನೋಡಿಕೊಳ್ಳಬೇಕು ಎಂದು ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡುತ್ತಾರೆ.
-
With help of over 4000 police friends who are joined to us in 70 WhatsApp group.. Local help is provided to everyone.. interested persons may contact our community liaison nodal officers #ArrestCorona #Covid_19india @BlrCityPolice @bcpsouth pic.twitter.com/UIArncbCmo
— Dr. Rohini Katoch Sepat. IPS (@DCPSouthBCP) March 31, 2020 " class="align-text-top noRightClick twitterSection" data="
">With help of over 4000 police friends who are joined to us in 70 WhatsApp group.. Local help is provided to everyone.. interested persons may contact our community liaison nodal officers #ArrestCorona #Covid_19india @BlrCityPolice @bcpsouth pic.twitter.com/UIArncbCmo
— Dr. Rohini Katoch Sepat. IPS (@DCPSouthBCP) March 31, 2020With help of over 4000 police friends who are joined to us in 70 WhatsApp group.. Local help is provided to everyone.. interested persons may contact our community liaison nodal officers #ArrestCorona #Covid_19india @BlrCityPolice @bcpsouth pic.twitter.com/UIArncbCmo
— Dr. Rohini Katoch Sepat. IPS (@DCPSouthBCP) March 31, 2020
2. ಇಶಾ ಪಂತ್, ಐಪಿಎಸ್ ಅಧಿಕಾರಿ (ಕಮಾಂಡ್ ಸೆಂಟರ್ನಲ್ಲಿ ಡಿಸಿಪಿ)
ಇಶಾ ಪಂತ್ ಅವರು ಕಮಿಷನರ್ ಕಚೇರಿಯ ಕಮಾಂಡ್ ಸೆಂಟರ್ನಲ್ಲಿ ಮಹಿಳಾ ಡಿಸಿಪಿಯಾಗಿ ಕಾರ್ಯ ನಿರ್ವಸುತ್ತಿದ್ದಾರೆ. ಕೊರೊನಾ ತಡೆಗಟ್ಟಲು ಆರೊಗ್ಯ ಇಲಾಖೆ ಜೊತೆ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರದಲ್ಲಿ ಕೊರೊನಾ ಶಂಕೆ ವ್ಯಕ್ತಿಗಳ ಮತ್ತು ಹೋಮ್ ಕ್ವಾರಂಟೈನ್ ಇರುವವರ ಮೇಲೆ ನಿಗಾ ವಹಿಸುತ್ತಾರೆ. ಹಾಗೆ ಕಮಾಂಡ್ ಸೆಂಟರ್ನಲ್ಲಿರುವ ಸಹಾಯವಾಣಿಗೆ (100) ಬರುವ ತುರ್ತು ಕರೆಗಳನ್ನ ಆಲಿಸಿ, ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಾರೆ. ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
-
Come on @Google U can do better. It's a crisis situation after all. I'm sure,Govt would make payments & it's been just couple of days since App was launched and as reported in this news item, the App had good reviews& helpful .@sundarpichai . Painstaking effort had gone into it. https://t.co/SXZSioV2ks
— D Roopa IPS (@D_Roopa_IPS) March 31, 2020 " class="align-text-top noRightClick twitterSection" data="
">Come on @Google U can do better. It's a crisis situation after all. I'm sure,Govt would make payments & it's been just couple of days since App was launched and as reported in this news item, the App had good reviews& helpful .@sundarpichai . Painstaking effort had gone into it. https://t.co/SXZSioV2ks
— D Roopa IPS (@D_Roopa_IPS) March 31, 2020Come on @Google U can do better. It's a crisis situation after all. I'm sure,Govt would make payments & it's been just couple of days since App was launched and as reported in this news item, the App had good reviews& helpful .@sundarpichai . Painstaking effort had gone into it. https://t.co/SXZSioV2ks
— D Roopa IPS (@D_Roopa_IPS) March 31, 2020
3. ರವಿಕಾಂತೇಗೌಡ, ಬೆಂಗಳೂರು ನಗರ ಸಂಚಾರ ಪೊಲೀಸ್ ಜಂಟಿ ಆಯುಕ್ತ
ರವಿಕಾಂತೇಗೌಡ ಅವರು ತಮ್ಮ ಸಿಬ್ಬಂದಿ ಮುಖಾಂತರ ಕೊರೊನಾ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಬೀದಿ ನಾಟಕ, ರಸ್ತೆ ಬದಿಗಳಲ್ಲಿ ಜಾಗೃತಿ ಮೂಡಿಸುವ ಮಾಡುತ್ತಿದ್ದಾರೆ. ಹಾಗೆ, 'ಕೆಮ್ಮು ಬೇಡ, ಸೀನಬೇಡ, ಗುಂಪು ಗೂಡಬೇಡ, ಮುಸುಕು ಧರಿಸಬೇಡ, ಕಣ್ಣು ಮೂಗು ಮುಟ್ಟುತ್ತಲಿರಬೇಡ , ತೊಳೆಯುವುದು ಬಿಡಬೇಡ, ಇದೇ ಕೊರೊನಾ ಅಂತರಂಗ ಶುದ್ದಿ ಇದೇ ಕೊರೋನಾ ಬಹಿರಂಗ ಸುದ್ದಿ, ಇದೇ ಕೊರೊನಾ ಓಡಿಸುವ ಪರಿ' ಎಂಬ ಬರವಣಿಗೆಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ.
-
Hope you had your food at Home?
— Hemant Nimbalkar IPS (@IPSHemant) March 31, 2020 " class="align-text-top noRightClick twitterSection" data="
I just got some time to have it..
Hope you will allow me to have my food by not coming out of your home.
Or else I will be forced to leave my food and run to request you to #StayHomeStaySafeSaveLives #CoronoLockdown is National Duty 🙏 pic.twitter.com/aKC7OePYoB
">Hope you had your food at Home?
— Hemant Nimbalkar IPS (@IPSHemant) March 31, 2020
I just got some time to have it..
Hope you will allow me to have my food by not coming out of your home.
Or else I will be forced to leave my food and run to request you to #StayHomeStaySafeSaveLives #CoronoLockdown is National Duty 🙏 pic.twitter.com/aKC7OePYoBHope you had your food at Home?
— Hemant Nimbalkar IPS (@IPSHemant) March 31, 2020
I just got some time to have it..
Hope you will allow me to have my food by not coming out of your home.
Or else I will be forced to leave my food and run to request you to #StayHomeStaySafeSaveLives #CoronoLockdown is National Duty 🙏 pic.twitter.com/aKC7OePYoB
4. ಹೇಮಂತ್ ನಿಂಬಾಳ್ಕಾರ್, ಐಪಿಎಸ್ ಅಧಿಕಾರಿ
ಪೊಲೀಸ್ ಇಲಾಖೆಯ ಸಿಬ್ಬಂದಿ ಹಿತದೃಷ್ಟಿಯನ್ನು ನೋಡಿಕೊಂಡು ಶೂಟ್ ಕೊರೊನಾ ಅನ್ನೋ ಟ್ಯಾಗ್ನಡಿ ಜನರಿಗೋಸ್ಕರ ಅಭಿಯಾನ ನಡೆಸುತ್ತಿದ್ದಾರೆ.
5. ಸಂದೀಪ್ ಪಾಟೀಲ್, ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ
ಸಿಲಿಕಾನ್ ಸಿಟಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿರುವ ಇವರು, ನಕಲಿ ಸ್ಯಾನಿಟೈಸರ್, ಮಾಸ್ಕ್ಗಳ ಮಾರಾಟ ಮಾಡುವವರ ಹೆಡೆ ಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ಹಿತದೃಷ್ಟಿಯಿಂದ ನಕಲಿ ಹಾವಳಿಗೆ ಕಡಿವಾಣ ಹಾಕುತ್ತಿದ್ದಾರೆ.
-
ಶೂಟ್ ಕರೋನ
— Hemant Nimbalkar IPS (@IPSHemant) March 30, 2020 " class="align-text-top noRightClick twitterSection" data="
ನೆಮ್ಮದಿ ಪಡೆಯೋಣ...
Our Own Home Production for awareness on #CoronoLockdown
👏👏👏#StayHomeSaveLives pic.twitter.com/ggPQOWRFvb
">ಶೂಟ್ ಕರೋನ
— Hemant Nimbalkar IPS (@IPSHemant) March 30, 2020
ನೆಮ್ಮದಿ ಪಡೆಯೋಣ...
Our Own Home Production for awareness on #CoronoLockdown
👏👏👏#StayHomeSaveLives pic.twitter.com/ggPQOWRFvbಶೂಟ್ ಕರೋನ
— Hemant Nimbalkar IPS (@IPSHemant) March 30, 2020
ನೆಮ್ಮದಿ ಪಡೆಯೋಣ...
Our Own Home Production for awareness on #CoronoLockdown
👏👏👏#StayHomeSaveLives pic.twitter.com/ggPQOWRFvb
6. ನಿಶಾ ಜೇಮ್ಸ್, ಅಡ್ಮಿನ್ ವಿಭಾಗದ ಡಿಸಿಪಿ
ನಗರದ ಐಟಿ ವಿಭಾಗದಿಂದ ಜನರಿಗೆ ತೊಂದರೆಯಾಗದ ರೀತಿ ನಿಶಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿರುವ ಸ್ಥಳಕ್ಕೆ ತೆರಳಿ ಕೊರೊನಾ ತಡೆಯಲು ಏನು ಮಾಡಬೇಕು ಎಂಬುದರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
7. ದಿವ್ಯ ಸಾರಾ ಥಾಮಸ್, ಸಿಎಆರ್ ಡಿಸಿಪಿ
ಜನರಿಗೆ ಹಾಗೂ ಸಿಬ್ಬಂದಿಗೆ ಆಹಾರ ಸಮಸ್ಯೆ ಉಂಟಾದರೆ ಪೂರೈಸುವ ಕಾರ್ಯದಲ್ಲಿ ತೊಡಗಿದ್ದಾರೆ.
8. ಕುಲ್ ದೀಪ್ ಜೈನ್ & ರವಿ ಕುಮಾರ್ (ಡಿಸಿಪಿಗಳು)
ನಗರದಲ್ಲಿ ನಡೆಯುವ ಅಹಿತಕರ ಘಟನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದ್ದಾರೆ.