ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾಗೆ ಬರೋಬ್ಬರಿ 67 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 13,008ಕ್ಕೆ ಏರಿಕೆ ಆಗಿದೆ.
8,778 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,83,647ಕ್ಕೆ ಏರಿಕೆ ಆಗಿದೆ. 6,079 ಮಂದಿ ಗುಣಮುಖರಾಗಿದ್ದು, 9,92,003 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 78,617ಕ್ಕೆ ಏರಿದ್ದು, 474 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಶೇಕಡಾವಾರು 7.20ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.76ರಷ್ಟು ಇದೆ.
ಸಾವಿನ ರುದ್ರ ನರ್ತನ
ಏಪ್ರಿಲ್ ತಿಂಗಳಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಇನ್ನಷ್ಟು ಆತಂಕ ಹೆಚ್ಚಿಸುತ್ತಿದೆ. ಒಂದು ಕಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಐಸಿಯು ಸೇರುವವರ ಸಂಖ್ಯೆ ಏರಿಕೆ ಆಗಿದೆ.
9 ದಿನದಲ್ಲೇ 383 ಸೋಂಕಿತರು ಬಲಿ
ತಿಂಗಳು ಮತ್ತು ದಿನ | ಮೃತರ ಸಂಖ್ಯೆ |
ಏಪ್ರಿಲ್- 5 | 32 ಸಾವು |
ಏಪ್ರಿಲ್ -6 | 39 ಸಾವು |
ಏಪ್ರಿಲ್- 7 | 35 ಸಾವು |
ಏಪ್ರಿಲ್- 8 | 36 ಸಾವು |
ಏಪ್ರಿಲ್- 9 | 46 ಸಾವು |
ಏಪ್ರಿಲ್ -10 | 36 ಸಾವು |
ಏಪ್ರಿಲ್ -11 | 40 ಸಾವು |
ಏಪ್ರಿಲ್- 12 | 52 ಸಾವು |
ಏಪ್ರಿಲ್ -13 | 67 ಸಾವು |