ETV Bharat / city

ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಅನುಮೋದನೆ: ಮನೆ ಮಾಲೀಕರಿಗೇಕೆ ಬೇಸರ? - ಬೆಂಗಳೂರು

ಈಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾದರಿ ಬಾಡಿಗೆ ಕಾಯ್ದೆ-2021ಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೊಸ ಕಾಯ್ದೆಯಲ್ಲಿ ಬಾಡಿಗೆಯ ಮುಂಗಡ ಹಣ ಎರಡು ತಿಂಗಳಿಗೆ ಮೀರಬಾರದು ಎಂದು ಹೇಳಿರುವುದಕ್ಕೆ ಮನೆ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಾಡಿಗೆದಾರರಿಗೆ ಕೊಂಚ ರಿಲೀಫ್‌ ನೀಡಿದಂತಾಗಿದೆ. ಆದರೆ ಕಾಯ್ದೆ ಜಾರಿ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.

The Model Tenancy Act 2021: Owners thumbs down: tenants thumbs up
ಮಾದರಿ ಬಾಡಿಗೆ ಕಾಯ್ದೆ-2021 ಕೇಂದ್ರ ಅನುಮೋದನೆ; ಮನೆ ಮಾಲೀಕರಿಗೇಕೆ ಬೇಸರ?
author img

By

Published : Jul 15, 2021, 8:26 PM IST

ಬೆಂಗಳೂರು: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾದರಿ ಬಾಡಿಗೆ ಕಾಯ್ದೆ-2021 ಅನ್ನು ಅನುಮೋದನೆ ನೀಡಲಾಗಿದೆ. ಹೊಸದಾಗಿ ರೂಪುಗೊಂಡ ಕಾಯಿದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಬಾಡಿಗೆಯ ಮುಂಗಡವು ಎರಡು ತಿಂಗಳುಗಳನ್ನು ಮೀರಬಾರದು ಎಂಬುದು ಮಾಲೀಕರು ಮತ್ತು ಬಾಡಿಗೆದಾರರು ಇಬ್ಬರೂ ನಡುವಿನ ಪ್ರಮುಖ ಅಂಶ.

ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕರು, ಬಾಡಿಗೆಯ ಮುಂಗಡ ಕಡಿತಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಕ್ರೆಡೈ ಅಧ್ಯಕ್ಷ ಸುರೇಶ್ ಪ್ರಭು, ಕೇಂದ್ರ ಸರ್ಕಾರ ಸರ್ಕಾರ ಅನುಮೋದನೆ ನೀಡಿ ಮಾದರಿ ಬಾಡಿಗೆ ಕಾಯ್ದೆ ಜಾರಿ ಮಾಡುವುದನ್ನು ರಾಜ್ಯಗಳಿಗೆ ಬಿಟ್ಟಿರುವ ನಿರ್ಧಾರವೂ ಮಿಶ್ರ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮಾದರಿ ಬಾಡಿಗೆದಾರಿಕೆ ಕಾಯ್ದೆ ಜಾರಿಗೆ ಚಿಂತನೆ: ಪರ-ವಿರೋಧ ಪ್ರತಿಕ್ರಿಯೆ ಹೀಗಿದೆ..

ಕಠಿಣವಾದುದನ್ನು ಸರಳಗೊಳಿಸಿದ್ದಾರೆ. ಒಳ್ಳೆಯ ಚಿಂತನೆಯಾಗಿದೆ. ಆದರೆ ಈ ಬಗ್ಗೆ ಇರುವ ವಿವಾದಗಳನ್ನು ಎಷ್ಟು ವೇಗವಾಗಿ ಪರಿಹರಿಸಲಾಗುವುದು ಎಂಬುದನ್ನು ಕಾದು ನೋಡಬೇಕಾಗಿದೆ. ಎರಡು ತಿಂಗಳ ಬಾಡಿಗೆ ಮಾಲೀಕರಿಗೆ ಜೀವನ ಕಷ್ಟಕರವಾಗುತ್ತದೆ. ಕೇಂದ್ರ ಕಾಯ್ದೆಯನ್ನು ಅಳವಡಿಸಿಕೊಳ್ಳುವಾಗ ರಾಜ್ಯಗಳು ಈ ಕಾಯ್ದೆಯನ್ನು ಸರಳೀಕರಿಸುವತ್ತ ಗಮನಹರಿಸಬೇಕು. ಆದರೆ ಹಳೆಯ ರೂಪದಲ್ಲಿ ಬಾಡಿಗೆ ಕಾಯ್ದೆ ಕಿರಿಕಿರಿಯುಂಟುಮಾಡುತ್ತದೆ. ಹೊಸ ಕಾನೂನು ಹೆಚ್ಚು ಸಮನಾಗಿರಬೇಕು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.