ETV Bharat / city

ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾ ಮಾಡಿದ ಅಧಿಕಾರಿಗೆ 25 ಸಾವಿರ ರೂ. ದಂಡ: ಹೈಕೋರ್ಟ್ ಆದೇಶ

ಹೆರಿಗೆ ರಜೆ ಕೊಡದೇ ತಮ್ಮನ್ನು ಸೇವೆಯಿಂದ ವಜಾಗೊಳಿಸಿದ ಪೌರಾಡಳಿದ ನಿರ್ದೇಶನಾಲಯದ ಆದೇಶವನ್ನು ಹೈಕೋರ್ಟ್ ಪೀಠ ರದ್ದು ಪಡಿಸಿದೆ.

author img

By

Published : Feb 19, 2021, 11:33 PM IST

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಗುತ್ತಿಗೆ ಆಧಾರದ ಮೇಲೆ ಯೋಜನಾ ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆ ಮನವಿ ಮಾಡಿದರೂ ಹೆರಿಗೆ ರಜೆ ನೀಡದ ಹಾಗೂ ಸೇವೆಯಿಂದ ವಜಾಗೊಳಿಸಿದ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗೆ ಹೈಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೇ ಕರ್ತವ್ಯಕ್ಕೆ ಮರು ನಿಯೋಜಿಸಿಕೊಳ್ಳುವಂತೆ ಇಲಾಖೆಗೆ ಆದೇಶಿಸಿದೆ.

ಹೆರಿಗಾಗಿ ತೆರಳಿದ ಕಾರಣಕ್ಕೆ ತಮ್ಮನ್ನು ಸೇವೆಯಿಂದ ವಜಾಗೊಳಿಸಿರುವ ಪೌರಾಡಳಿತ ನಿರ್ದೇಶನಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಬಿ.ಎಸ್.ರಾಜೇಶ್ವರಿ ಎಂಬುವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಮಹಿಳಾ ಉದ್ಯೋಗಿಗೆ ಹೆರಿಗೆ ರಜೆ ಕೇಳುವ ಹಕ್ಕನ್ನು ಸಂವಿಧಾನದ ಪರಿಚ್ಛೇದ 42 ಕಲ್ಪಿಸಿಕೊಟ್ಟಿದೆ. ಹೆರಿಗೆ ರಜೆ ನೀಡುವ ಮೂಲಕ ಆಕೆಯ ಹಕ್ಕನ್ನು ಸರ್ಕಾರ ಕಾಪಾಡಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರ ಮಹಿಳೆಗೆ ಹೆರಿಗೆ ರಜೆ ನೀಡಿಲ್ಲ. ಸಾಲದ್ದಕ್ಕೆ ಸೇವೆಯಿಂದ ವಜಾಗೊಳಿಸಲಾಗಿದೆ. ಈ ಮೂಲಕ ಮಹಿಳೆಗೆ ಸಂವಿಧಾನದತ್ತವಾಗಿ ದೊರೆತ ಹಕ್ಕು ಮತ್ತು ಮಾನವ ಹಕ್ಕುಗಳನ್ನು ಅಧಿಕಾರಿಗಳು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಪೌರಾಡಳಿತ ನಿರ್ದೇಶನಾಲಯ 2019ರ ಆ.29ರಂದು ಬಿ.ಎಸ್.ರಾಜೇಶ್ವರಿ ಅವರನ್ನು ಸೇವೆಯಿಂದ ವಜಾಗೊಳಿಸಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಿರುವ ಪೀಠ, ನ್ಯಾಯಾಲಯದ ಆದೇಶದ ಪ್ರತಿ ದೊರೆತ ದಿನದಿಂದ ಎರಡು ವಾರದೊಳಗೆ ಅರ್ಜಿದಾರರನ್ನು ಸೇವೆಗೆ ಮರು ನಿಯೋಜಿಸಬೇಕು. ಸೇವೆಯಿಂದ ವಜಾಗೊಳಿಸಿದ ದಿನದಿಂದ ಮರು ನಿಯೋಜನೆ ಮಾಡುವ ದಿನದವರೆಗೂ ಶೇ.50ರಷ್ಟು ಹಿಂಬಾಕಿ ಪಾವತಿಸಬೇಕು. ಸೇವೆಯಿಂದ ವಜಾಗೊಳಿಸಿ ತೊಂದರೆ ನೀಡಿದ ಕಾರಣಕ್ಕೆ ಅರ್ಜಿದಾರರಿಗೆ 25 ಸಾವಿರ ರೂ. ದಂಡ ಪಾವತಿಸಬೇಕು. ಈ ಹಣವನ್ನು ಆದೇಶ ಹೊರಡಿಸಿದ ಅಧಿಕಾರಿಯಿಂದ ವಸೂಲಿ ಮಾಡಬೇಕು ಎಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.

ಪ್ರಕರಣದ ಹಿನ್ನೆಲೆ :
ಪೌರಾಡಳಿತ ನಿರ್ದೇಶನಾಲಯವು ತಾಂತ್ರಿಕ ವಿಭಾಗದ ಎಂಐಎಸ್ ಪರಿಣಿತೆ ಹಾಗೂ ಯೋಜನಾ ಮಾಹಿತಿ ಅಧಿಕಾರಿ ಹುದ್ದೆಗೆ 2019ರಲ್ಲಿ ರಾಜೇಶ್ವರಿ ಅವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿತ್ತು. ಹೆರಿಗೆ ರಜೆ ನೀಡಲು ಕೋರಿ ಅರ್ಜಿದಾರ ಮಹಿಳೆ 2019ರ ಜೂ.11ರಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಮಾನ್ಯ ಮಾಡದ ನಿರ್ದೇಶನಾಲಯ, ನೋಟಿಸ್ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಹೆರಿಗೆಗೆ ತೆರಳಿದ್ದರಿಂದ ಮಹಿಳೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಆ ಬಳಿಕ ಅಧಿಕಾರಿಗಳು ಸೇವೆಯಿಂದ ವಜಾ ಮಾಡಿ 2019ರ ಆ.29ರಂದು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ರದ್ದುಮಾಡುವಂತೆ ಕೋರಿ ರಾಜೇಶ್ವರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.