ಬೆಂಗಳೂರು: ತಪಾಸಣೆ ಕಡಿಮೆಗೊಳಿಸುವ ಮೂಲಕ ರಾಜ್ಯ ಸರ್ಕಾರ ಕೊರೊನ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಕೊರೊನಾ ಟೆಸ್ಟ್ಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಿ ಕೊರೊನಾ ಸೋಂಕಿತರು ಕಡಿಮೆ ಪತ್ತೆಯಾಗುತ್ತಿದ್ದಾರೆ ಎಂದು ತೋರಿಸುವ ವಿಫಲ ಯತ್ನ ನಡೆಸುತ್ತಿದೆ. ತಾವು ಜಾರಿ ಮಾಡಿರೋ ಲಾಕ್ಡೌನ್ ಪರಿಣಾಮ ಬೀರುತ್ತಿದೆ ಎಂದು ಬಿಂಬಿಸಲು ಬಿಜೆಪಿ ಸರ್ಕಾರ ಟೆಸ್ಟ್ ಕಡಿಮೆ ಮಾಡುವ ಅಡ್ಡದಾರಿಗಿಳಿದಿದೆ. ಇದು ಅಕ್ಷಮ್ಯ, ನಿನ್ನೆ ಇಡೀ ರಾಜ್ಯದಲ್ಲಿ 1.2 ಲಕ್ಷ ಟೆಸ್ಟ್ ಮಾಡಲಾಗಿದೆ. ಸರ್ಕಾರದ ಲೆಕ್ಕದ ಪ್ರಕಾರ ಪ್ರತೀ 100 ಜನರಿಗೆ ಟೆಸ್ಟ್ ಮಾಡಿದರೆ 32 ಜನರಿಗೆ ಪಾಸಿಟಿವ್ ಬರುತ್ತಿದೆ. ಅಂದ್ರೆ ಸೋಂಕು ಪತ್ತೆಯಾಗುತ್ತಿರೋ ದರ ಶೇ.32ರಷ್ಟಿದೆ. ಸೋಂಕು ವ್ಯಾಪಕವಾಗ ಹರಡುತ್ತಿರುವಾಗ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟ್ ಮಾಡುವ ಬದಲು ಈ ಸಂಖ್ಯೆಯನ್ನು ಇಳಿಸಿದ್ಯಾಕೆ..? ಎಂದು ಪ್ರಶ್ನಿಸಿದ್ದಾರೆ.
-
ಮುಖ್ಯಮಂತ್ರಿಗಳೇ @BSYBJP, ಆರೋಗ್ಯ ಸಚಿವರೇ @MLA_Sudhakar ಅವರೇ ಟೆಸ್ಟ್ ಗಳನ್ನು ಕಡಿಮೆ ಮಾಡಿ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುವ ಅವಶ್ಯಕತೆ ಏನಿದೆ..? ನಿಮ್ಮ ವೈಫಲ್ಯದ ಫಲವನ್ನು ಈಗ ಇಡೀ ರಾಜ್ಯ ಅನುಭವಿಸುತ್ತಿದೆ. ಇಂಥಾ ನಾಟಕ ಬಿಟ್ಟು ಕೊರೊನಾ ಟೆಸ್ಟ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಎಂದು ಆಗ್ರಹಿಸುತ್ತೇನೆ.8/8
— S R Patil (@srpatilbagalkot) May 11, 2021 " class="align-text-top noRightClick twitterSection" data="
">ಮುಖ್ಯಮಂತ್ರಿಗಳೇ @BSYBJP, ಆರೋಗ್ಯ ಸಚಿವರೇ @MLA_Sudhakar ಅವರೇ ಟೆಸ್ಟ್ ಗಳನ್ನು ಕಡಿಮೆ ಮಾಡಿ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುವ ಅವಶ್ಯಕತೆ ಏನಿದೆ..? ನಿಮ್ಮ ವೈಫಲ್ಯದ ಫಲವನ್ನು ಈಗ ಇಡೀ ರಾಜ್ಯ ಅನುಭವಿಸುತ್ತಿದೆ. ಇಂಥಾ ನಾಟಕ ಬಿಟ್ಟು ಕೊರೊನಾ ಟೆಸ್ಟ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಎಂದು ಆಗ್ರಹಿಸುತ್ತೇನೆ.8/8
— S R Patil (@srpatilbagalkot) May 11, 2021ಮುಖ್ಯಮಂತ್ರಿಗಳೇ @BSYBJP, ಆರೋಗ್ಯ ಸಚಿವರೇ @MLA_Sudhakar ಅವರೇ ಟೆಸ್ಟ್ ಗಳನ್ನು ಕಡಿಮೆ ಮಾಡಿ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುವ ಅವಶ್ಯಕತೆ ಏನಿದೆ..? ನಿಮ್ಮ ವೈಫಲ್ಯದ ಫಲವನ್ನು ಈಗ ಇಡೀ ರಾಜ್ಯ ಅನುಭವಿಸುತ್ತಿದೆ. ಇಂಥಾ ನಾಟಕ ಬಿಟ್ಟು ಕೊರೊನಾ ಟೆಸ್ಟ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಎಂದು ಆಗ್ರಹಿಸುತ್ತೇನೆ.8/8
— S R Patil (@srpatilbagalkot) May 11, 2021
ಲಾಕ್ಡೌನ್ ನಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ಬಿಂಬಿಸಲು ಸರ್ಕಾರ ಟೆಸ್ಟ್ಗಳ ಸಂಖ್ಯೆ ಕಡಿಮೆ ಮಾಡಿದೆ. ನಿನ್ನೆ ಬೆಂಗಳೂರಿನಲ್ಲಿ ಕೇವಲ 32,862 ಟೆಸ್ಟ್ಗಳನ್ನಷ್ಟೇ ಮಾಡಲಾಗಿದ್ದು 16,747 ಕೇಸ್ ಪತ್ತೆಯಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಅಂದ್ರೆ ಬೆಂಗಳೂರಿನಲ್ಲಿ ಶೇ.50 ರಷ್ಟು ಪಾಸಿಟಿವಿಟಿ ರೇಟ್ ಇದೆ. ಬೆಂಗಳೂರಿನಲ್ಲಿ ಪ್ರತೀ ಇಬ್ಬರಿಗೆ ಟೆಸ್ಟ್ ಮಾಡಿದರೆ ಒಬ್ಬರಿಗೆ ಪಾಸಿಟಿವ್ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಟೆಸ್ಟ್ ಸಂಖ್ಯೆಯನ್ನು ಕಡಿಮೆ ಮಾಡಿದ್ದೇಕೆ? ಬೆಂಗಳೂರಲ್ಲಿ ಮೊದಲು ಪ್ರತಿದಿನ 65 ರಿಂದ 75 ಸಾವಿರ ಟೆಸ್ಟ್ ಮಾಡಲಾಗುತ್ತಿತ್ತು. ಲಾಕ್ಡೌನ್ ನಿಂದ ಕೊರೊನಾ ನಿಯಂತ್ರಿಸಿದ್ದೇವೆ ಎಂದು ತೋರಿಸಲು ಟೆಸ್ಟ್ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಾವಿನ ಸಂಖ್ಯೆ ಮುಚ್ಚಿಟ್ಟಿತ್ತು
ಈ ಮೊದಲು ಕೊರೊನಾ ಸೋಂಕಿತರ ಸಾವಿನ ಸಂಖ್ಯೆಗಳನ್ನು ಮುಚ್ಚಿಟ್ಟು ರಾಜ್ಯದ ಜನರ ಮುಂದೆ ಬೆತ್ತಲಾಗಿತ್ತು. ಈಗ ಟೆಸ್ಟ್ಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಕೊರೊನಾ ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಬಿಂಬಿಸಲು ಹೊರಟಿದೆ. ಇದು ಅತ್ಯಂತ ನಾಚಿಕೆಗೇಡಿನ ವಿಷಯ. ಕೊರೊನಾದಿಂದ ಎಷ್ಟು ಜನ ಸತ್ತರೂ ಪರವಾಗಿಲ್ಲ ಎಂದು ಭಾವಿಸಿದೆ ಈ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರು ಸೋಂಕಿತರ ಸಂಖ್ಯೆ ಹೆಚ್ಚಿದರೂ ಚಿಂತಿಯಿಲ್ಲ, ಟೆಸ್ಟ್ ಸಂಖ್ಯೆ ಹೆಚ್ಚಿಸಿ ಎಂದು ಸೂಚಿಸಿದ್ದರು. ಆದ್ರೆ ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಪ್ರಧಾನಿಗಳ ಮಾತಿಗೆ, ತಜ್ಞರ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಟೆಸ್ಟ್ ಕಡಿಮೆ ಮಾಡಿ ಸೋಂಕಿತರ ಸಂಖ್ಯೆ ಕಡಿಮೆ ತೋರಿಸಿದರೆ ಕೊರೊನಾ ನಿಯಂತ್ರಣಕ್ಕೆ ಬಂದಂತಾಗುತ್ತಾ..? ಎಂದಿದ್ದಾರೆ.
ಆರು ದಿನಗಳಲ್ಲಿ 2,834 ಸೋಂಕಿತರು ಮೃತ
6 ದಿನಗಳಲ್ಲಿ ಕರ್ನಾಟಕದಲ್ಲಿ 2,834 ಸೋಂಕಿತರು ಮೃತರಾಗಿದ್ದಾರೆ. ಮನೆಗಳಲ್ಲಿ ಸತ್ತವರು, ಬೆಡ್ ಸಿಗದೇ ಬೀದಿಗಳಲ್ಲಿ ಸತ್ತವರ ಸಂಖ್ಯೆ ಇನ್ನೂ ದೊಡ್ಡದಿದೆ. ರಾಜ್ಯದಲ್ಲಿ ಸೋಂಕಿತರ ಮಾರಣಹೋಮವೇ ನಡೆಯುತ್ತಿದೆ. ಇಂಥಾ ಸಂದರ್ಭದಲ್ಲಿ ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ರಾಜ್ಯ ಸರ್ಕಾರ ಕೊರೊನಾ ಟೆಸ್ಟ್ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ, ಆರೋಗ್ಯ ಸಚಿವ ಸುಧಾಕರ್ ಅವರೇ ಟೆಸ್ಟ್ಗಳನ್ನು ಕಡಿಮೆ ಮಾಡಿ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುವ ಅವಶ್ಯಕತೆ ಏನಿದೆ ? ನಿಮ್ಮ ವೈಫಲ್ಯದ ಫಲವನ್ನು ಈಗ ಇಡೀ ರಾಜ್ಯ ಅನುಭವಿಸುತ್ತಿದೆ. ಇಂಥಾ ನಾಟಕ ಬಿಟ್ಟು ಕೊರೊನಾ ಟೆಸ್ಟ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಎಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಬಡ ಜನರಿಗೆ 10 ಸಾವಿರ ಪರಿಹಾರ ಕೊಡಿ
ಕೊರೊನಾ ಲಾಕ್ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ 10 ಸಾವಿರ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ನಾಯಕರೆಲ್ಲರೂ ಒತ್ತಾಯಿಸಿದ್ದೆವು. ಅದಕ್ಕೆ ಉತ್ತರವಾಗಿ ಸಚಿವ ಕೆಎಸ್ ಈಶ್ವರಪ್ಪ ಅವರು ನಾವೇನು ನೋಟ್ ಪ್ರಿಂಟ್ ಮಾಡ್ತಿದ್ದೀವಾ ಎಂದು ಪ್ರಶ್ನಿಸಿದ್ದಾರೆ. ಸಂವೇದನೆಯೇ ಇಲ್ಲದ ಇಂಥಾ ಸಚಿವರು ಈ ರಾಜ್ಯಕ್ಕೆ ಬೇಕಾ ? ಈಶ್ವರಪ್ಪನವರೇ ಲಾಕ್ಡೌನ್ ನಿಂದ ದುಡಿಯವ ಕೈಗಳಿಗೆ ಕೆಲಸವಿಲ್ಲ. ಬಡವರು, ಕೂಲಿ ಕಾರ್ಮಿಕರು ಜೀವನ ನಡೆಸಲು ಪರದಾಡುತ್ತಿದ್ದಾರೆ. ಪ್ರಿಂಟಿಂಗ್ ಮಷಿನ್ ಇಲ್ಲಾಂತ ಹೇಳ್ತೀರಲ್ಲ, ಶಾಸಕರನ್ನು ಖರೀದಿಸಲು ನಿಮ್ಮ ಬಳಿ ಪ್ರಿಂಟಿಂಗ್ ಮಷಿನ್ ಇತ್ತಾ ? ನಾಚಿಕೆಯಾಗಬೇಕು ನಿಮಗೆ ಮತ್ತು ನಿಮ್ಮ ಸರ್ಕಾರಕ್ಕೆ ಎಂದಿದ್ದಾರೆ.
ಕೋಟಿ ಕೋಟಿ ನೀಡಿ ಶಾಸಕರ ಖರೀದಿ ಮಾಡಿದ್ರಲ್ಲ
ಅಕ್ರಮವಾಗಿ ಶಾಸಕರಿಗೆ ಕೋಟಿ ಕೋಟಿ ದುಡ್ಡು ಕೊಟ್ಟು ಪಕ್ಷಕ್ಕೆ ಕರೆತಂದು ಸರ್ಕಾರ ರಚಿಸುವಾಗ ಈ ಮಾತು ನೆನಪು ಆಗಲಿಲ್ಲವೇ ಈಶ್ವರಪ್ಪನವರೇ ? ಜನರಿಗೆ ಸಹಾಯ ಮಾಡ್ರಿ ಅಂದ್ರೆ ಇಂತಹ ಅಸಡ್ಡೆಯ ಮಾತುಗಳನ್ನು ಹೇಳ್ತಾ ಬರೀ ಕಾಲಹರಣ ಮಾಡ್ತಿದ್ದೀರಾ ಈಶ್ವರಪ್ಪನವರೇ ? ಹಾಗಾದರೆ ಕೇರಳ, ತಮಿಳುನಾಡು, ಆಂಧ್ರ, ದೆಹಲಿ ಸರ್ಕಾರಗಳು ಪ್ರಿಂಟಿಂಗ್ ಮಷಿನ್ ಇಟ್ಟುಕೊಂಡಿವೆಯೇ? ಆ ರಾಜ್ಯಗಳು ಆರ್ಥಿಕ ಸಹಾಯ, ಉಚಿತ ಪಡಿತರ, ಉಚಿತ ಕೋವಿಡ್ ವಿಮೆ ಜಾರಿ ಮಾಡಿವೆಯಲ್ಲ. ಆ ರಾಜ್ಯಗಳಲ್ಲಿ ಇದು ಸಾಧ್ಯವಾಗುವುದಾದರೆ ನಿಮ್ಮ ಡಬಲ್ ಇಂಜಿನ್ ಸರ್ಕಾರಕ್ಕೆ ಸಾಧ್ಯವಿಲ್ಲವಾ? ಗ್ರಾಮೀಣ ಜನರ ಕಷ್ಟವೇ ಗೊತ್ತಿಲ್ಲದ ನಿಮಗೆ ಗ್ರಾಮೀಣಾಭಿವೃದ್ಧಿ ಖಾತೆ ಸಿಕ್ಕಿದೆ. ನಿಮ್ಮ ಮನೆಯ ಹಣ ತಂದು ಜನರಿಗೆ ಸಹಾಯ ಮಾಡಿ ಎಂದು ಯಾರೂ ಕೇಳಿಲ್ಲ. ಜನ ತೆರಿಗೆ ಕಟ್ಟಿರುವ ದುಡ್ಡಿನಿಂದ ಪರಿಹಾರ ಕೊಡಿ. ದುಡಿಯುವ ವರ್ಗದವರ ಮತ ಬೇಕು, ಅವರ ತೆರಿಗೆ ಬೇಕು. ಆದ್ರೆ ಅವರ ಕಷ್ಟ ಮಾತ್ರ ಬೇಡ ಎಂದಿದ್ದಾರೆ.
ಕೊರೊನಾ ನಿರ್ವಹಿಸುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯದ ಜನರಿಗೆ ಉಳಿದಿರೋ ಆಶಾಕಿರಣ ಅಂದ್ರೆ ಅದು ಕರ್ನಾಟಕ ಹೈಕೋರ್ಟ್ ಮಾತ್ರ. ಕೊರೊನಾ ಸಂದಿಗ್ಧ ಕಾಲದಲ್ಲಿ ಜನರ ಪರ ನಿಂತಿರುವ ನ್ಯಾಯಾಂಗ ವ್ಯವಸ್ಥೆಗೆ ನನ್ನ ಅನಂತ ಗೌರವ ಸೂಚಿಸುತ್ತೇನೆ. ಕರ್ನಾಟಕಕ್ಕೆ ಆಕ್ಸಿಜನ್ ಕೊಡಲು ಹಿಂದೇಟು ಹಾಕಿದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುವಂತೆ ತಾಕೀತು ಮಾಡಿತ್ತು ಕರ್ನಾಟಕ ಹೈಕೋರ್ಟ್.
ಕೇಂದ್ರಕ್ಕೆ ಹೈಕೋರ್ಟ್ ಎಚ್ಚರಿಸಬೇಕಾಯ್ತಲ್ಲ:
ಸುಪ್ರೀಂ ಕೋರ್ಟ್ನಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆ ತರಲು ನರೇಂದ್ರ ಮೋದಿ ಸರ್ಕಾರ ಪ್ರಯತ್ನಿಸಿದರೂ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಕರ್ನಾಟಕದಲ್ಲಿ ಉಂಟಾಗಿರುವ ತೀವ್ರ ವ್ಯಾಕ್ಸಿನ್ ಕೊರತೆಯ ಬಗ್ಗೆ ಹೈಕೋರ್ಟ್ ಇಂದು ತೀವ್ರ ಕಳವಳ ವ್ಯಕ್ತಪಡಿಸಿದೆ. ತುರ್ತಾಗಿ ವ್ಯಾಕ್ಸಿನೇಶನ್ ಅಭಿಯಾನ ಹೆಚ್ಚಸಲು ಕ್ರಮ ಕೈಗೊಳ್ಳದಿದ್ದರೆ ಇಡೀ ಅಭಿಯಾನವೇ ವಿಫಲವಾಗಲಿದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಸರ್ಕಾರದ ಪ್ರತೀ ವೈಫಲ್ಯಗಳನ್ನು ಎತ್ತಿ ಹಿಡಿಯುತ್ತಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.
ಪೊಲೀಸರು ಸಾರ್ವಜನಿಕರನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ ಲಾಕ್ಡೌನ್ ಜಾರಿ ಸರಿ, ಆದರೆ ಲಾಠಿ ಚಾರ್ಜ್ ಮಾಡುವಂತಿಲ್ಲ ಎಂದು ಆದೇಶ ಮಾಡಿದೆ. ಪೊಲೀಸ್ ರಾಜ್ಯವನ್ನಾಗಿ ಮಾಡಲು ಹೊರಟಿದ್ದ ರಾಜ್ಯ ಸರ್ಕಾರಕ್ಕೆ ಕೋರ್ಟ್ ಆದೇಶ ಪಾಠವಾಗಲಿ ಎಂದು ಸಲಹೆ ನೀಡಿದ್ದಾರೆ.