ETV Bharat / city

ಲಾಕ್​ಡೌನ್​​ನಿಂದ ಆರ್ಥಿಕತೆ ಕುಂಠಿತವಾಗಬಹುದು, ಕಠಿಣ ನಿರ್ಧಾರ ಬೇಡ: ಸರ್ಕಾರಕ್ಕೆ ಕಾಸಿಯಾ ಮನವಿ - ಲಾಕ್​ಡೌನ್​ ಬಗ್ಗೆ ಕಾಸಿಯಾ ಆತಂಕ

ಕೋವಿಡ್ ಸಾಂಕ್ರಮಿಕ ಸಂಬಂಧ ಸರ್ಕಾರವು ಘೋಷಿಸಿದ ಶಿಷ್ಟಾಚಾರಗಳನ್ನು ಸೂಕ್ಷ್ಮವಾಗಿ ಅನುಸರಿಸಲು ತನ್ನ ಸದಸ್ಯ-ಘಟಕಗಳಿಗೆ ಮತ್ತು ಎಂ.ಎಸ್.ಎಂ.ಇ. ಗಳಿಗೆ ಸೂಚಿಸುವುದಾಗಿ ಸ್ಪಷ್ಟಪಡಿಸಿದೆ.

Karnataka Small Industries Association
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ
author img

By

Published : Jan 3, 2022, 11:58 PM IST

ಬೆಂಗಳೂರು: ಪ್ರತಿದಿನ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ರಾಜ್ಯ ಸರ್ಕಾರ ಲಾಕ್‌ಡೌನ್ ಅಥವಾ ಇತರ ಕಠಿಣ ಕ್ರಮಗಳ ರೂಪದಲ್ಲಿ ಯಾವುದೇ ರೀತಿಯ ಕಠಿಣ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸರ್ಕಾರಕ್ಕೆ ವಿನಂತಿಸಿದೆ.

ಕೋವಿಡ್ 19 ಲಾಕ್ ಡೌನ್ ಕುರಿತು ಸೋಮವಾರ ಕಾಸಿಯಾ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾಂಕ್ರಾಮಿಕ ರೋಗದ ಮೊದಲ ಮತ್ತು ಎರಡನೆಯ ಅಲೆಯ ಬಿಕ್ಕಟ್ಟಿನ ಸಮಯದಲ್ಲಿ ಘೋಷಿಸಲಾದ ಲಾಕ್‌ಡೌನ್‌ಗಳ ವಿನಾಶಕಾರಿ ಪರಿಣಾಮಗಳಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಆರ್ಥಿಕವಾಗಿ ಅಷ್ಟು ಸಶಕ್ತ ಗೊಂಡಿಲ್ಲ . ಮತ್ತೆ ಲಾಕ್ ಡೌನ್ ಘೋಷಿಸಿದಲ್ಲಿ ಬಹುತೇಕ ಉದ್ದಿಮೆದಾರರು ಉದ್ಯಮಗಳ ಅಸ್ಥಿತ್ವ ಕಳೆದುಕೊಳ್ಳಲಿದೆ. ವಿಶೇಷವಾಗಿ ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳ ಅಸ್ಥಿತ್ವ ಏನಾಗಬಹುದು ಎಂಬ ಬಗ್ಗೆ ಚಿಂತೆ ಉಂಟಾಗಿದೆ ಎಂದು ಹೇಳಿದೆ.

ಕೈಗಾರಿಕೆಗಳನ್ನು ಮತ್ತು ಕಚ್ಚಾ ಸಾಮಗ್ರಿಗಳ ಮಳಿಗೆಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮುಚ್ಚುವ ಮತ್ತು ಕೈಗಾರಿಕೆಗಳಿಗೆ ಕೈಗಾರಿಕಾ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುವ ಬದಲು ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಾಮೂಹಿಕ ಸಭೆಗಳನ್ನು ನಡೆಸುವ ಕುರಿತು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಮುಖಗವುಸುಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಗಮನಹರಿಸಬೇಕು ಎಂದು ಕಾಸಿಯಾ ಸಲಹೆ ನೀಡಿದೆ.

ಎಂ.ಎಸ್.ಎಂ.ಇ. ಗಳಿಗೆ ಸೂಚನೆ:

ಕೋವಿಡ್ ಸಾಂಕ್ರಮಿಕ ಸಂಬಂಧ ಸರ್ಕಾರವು ಘೋಷಿಸಿದ ಶಿಷ್ಟಾಚಾರಗಳನ್ನು ಸೂಕ್ಷ್ಮವಾಗಿ ಅನುಸರಿಸಲು ತನ್ನ ಸದಸ್ಯ-ಘಟಕಗಳಿಗೆ ಮತ್ತು ಎಂ.ಎಸ್.ಎಂ.ಇ. ಗಳಿಗೆ ಸೂಚಿಸುವುದಾಗಿ ಸ್ಪಷ್ಟಪಡಿಸಿದೆ.

ಎರಡು ಲಾಕ್ ಡೌನ್​ಗಳಿಂದ ಉದ್ಯಮಗಳು ಶಾಶ್ವತವಾಗಿ ಬಂದ್:

ಕಳೆದ ಎರಡು ಲಾಕ್​ಡೌನ್​ಗಳ ಪರಿಣಾಮದಿಂದ ಈಗಾಗಲೇ ಸಾಕಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಿವೆ. ಇಂತಹ ಸಮಯದಲ್ಲಿ ಮತ್ತೊಂದು ಲಾಕ್ ಡೌನ್ ಘೋಷಿಸಿದಲ್ಲಿ ಮತ್ತಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಲು ಕಾರಣವಾಗುತ್ತದೆ. ಉತ್ಪಾದನೆಯನ್ನು ದೀರ್ಘಕಾಲದವರೆಗೆ ಸ್ಥಗಿತಗೊಳಿಸುವುದರಿಂದ ಬದುಕುಳಿಯಲು ಕಷ್ಟಸಾಧ್ಯವಾಗುವುದು. ಪೂರೈಕೆ ಸರಪಳಿಗಳ ಕೊಂಡಿಗಳು ಕಳಚಿಕೊಳ್ಳಲಿರುವುದರಿಂದ ಉದ್ಯಮಗಳು ವಿಶೇಷವಾಗಿ ಎಸ್.ಎಂ.ಇ.ಗಳು ಸಂಪೂರ್ಣವಾಗಿ ನಾಶವಾಗುವುದಲ್ಲದೆ ಕಾರ್ಮಿಕರು ಶಾಶ್ವತವಾಗಿ ಉದ್ಯೋಗ ಕಳೆದುಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ಉಂಟಾಗುತ್ತದೆ. ಹೀಗಾದರೆ ಯಾವುದೇ ಸಮಯದಲ್ಲಿ ಆರ್ಥಿಕತೆಯ ಕುಸಿತ ಮರುಕಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ: ಇಂದಿನ ಕೊರೊನಾ ಅಪ್​ಡೇಟ್​ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.