ETV Bharat / city

ಕೋವಿಡ್-19 ವಿಶೇಷ ಸರ್ವೇಕ್ಷಣಾ ಚಟುವಟಿಕೆ : ಬಿಬಿಎಂಪಿಯಿಂದ ಟೀಂ ರೆಡಿ

ಪಾಲಿಕೆ ವ್ಯಾಪ್ತಿಯಲ್ಲಿರುವ ಲ್ಯಾಬ್​​ಗಳು ಹಾಗೂ ಆಸ್ಪತ್ರೆಗಳು ಕೋವಿಡ್ ಪಾಸಿಟಿವ್ ನೆಗಟಿವ್ ವರದಿಯನ್ನು ನೇರವಾಗಿ ಕೊಡುತ್ತಿವೆ. ಈ ಹಿನ್ನಲೆಯಲ್ಲಿ ವರದಿಯನ್ನು ಪಾಲಿಕೆ ಮತ್ತು ಐಸಿಎಂಆರ್ ಪೋರ್ಟಲ್​​ಗೆ ಅಪ್ಡೇಟ್​​ ಮಾಡಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ..

BBMP
ಬಿಬಿಎಂಪಿ
author img

By

Published : Aug 1, 2021, 11:00 PM IST

ಬೆಂಗಳೂರು : ಕೋವಿಡ್-19 ವಿಶೇಷ ಸರ್ವೇಕ್ಷಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಬಿಬಿಎಂಪಿ ಸಿದ್ಧಗೊಂಡಿದೆ. ಪ್ರಸ್ತುತ ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಸರ್ವೇಕ್ಷಣಾ ಚಟುವಟಿಕೆಯನ್ನು ಹಮ್ಮಿಕೊಳ್ಳಲು ತಯಾರಿ ನಡೆದಿದೆ.

Bangalore
ಪಾಲಿಕೆ ಸುತ್ತೋಲೆ

ಪಾಲಿಕೆಯ ವಲಯ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳ ಸೂಚನೆಯಂತೆ ತಂಡ-1 ಕಂದಾಯ ಇಲಾಖೆಯ ತಂಡ 72 ಗಂಟೆಯೊಳಗೆ ಮಾಡಿಸಿದ ಆರ್‌ಟಿಪಿಆರ್ ನೆಗಟಿವ್ ವರದಿಯನ್ನು ಹೊಂದಿರುವ ಪ್ರಯಾಣಿಕರನ್ನು ತಪಾಸಣೆ ನಡೆಸುವ ಕೆಲಸ ವಹಿಸಲಾಗಿದೆ. ಹಾಗೇ ತಂಡ-2 ಆರೋಗ್ಯ ಇಲಾಖೆಯ ಪರೀಕ್ಷಾ ತಂಡವು ಕೋವಿಡ್-19 ಆರ್‌ಟಿಪಿಸಿಆರ್ ಪರೀಕ್ಷೆಗೆ ಪ್ರಯಾಣಿಕರನ್ನ ಒಳಪಡಿಸಬೇಕು.

ಎಲ್ಲಿಲ್ಲಿ ತಂಡ ಇರಲಿದೆ?:

  • ತಂಡ-1: ಕಂದಾಯ ಇಲಾಖೆಯ ತಪಾಸಣಾ ತಂಡ
    1.ಮೆಜೆಸ್ಟಿಕ್ ರೈಲ್ವೆ ನಿಲ್ದಾಣ
    2. ಮೆಜೆಸ್ಟಿಕ್ ಬಸ್ ನಿಲ್ದಾಣ
    3.ಮೈಸೂರು ರೋಡ್ ಸ್ಯಾಟಲೈಟ್ ಬಸ್ ನಿಲ್ದಾಣ
    4. ಯಶವಂತಪುರ ಬಸ್ ನಿಲ್ದಾಣ
    5. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ
    6. ಶಾಂತಿನಗರ ಸ್ಯಾಟಲೈಟ್ ಬಸ್ ನಿಲ್ದಾಣ
  • ತಂಡ-2: ಆರೋಗ್ಯ ಇಲಾಖೆಯ ಪರೀಕ್ಷಾ ತಂಡ
    1. ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣ
    2. ಯಶವಂತಪುರ ರೈಲ್ವೆ ನಿಲ್ದಾಣ
    3. ಕೆಆರ್​ಪುರಂ ರೈಲ್ವೆ ನಿಲ್ದಾಣ

ಪಾಸಿಟಿವ್ ಪ್ರಕರಣಗಳ ವರದಿ ಕಡ್ಡಾಯ:

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕೋವಿಡ್ ಸೋಂಕಿತರಿಗೆ ಕಡ್ಡಾಯವಾಗಿ ಫಿಸಿಕಲ್ ಟ್ರಯಾಜ್ ಸೆಂಟರ್ ಮೂಲಕ ಚಿಕಿತ್ಸೆ ನೀಡಬೇಕು. ಲ್ಯಾಬ್ ಮತ್ತು ಖಾಸಗಿ ಆಸ್ಪತ್ರೆಗಳು ಪಾಸಿಟಿವ್ ಪ್ರಕರಣಗಳ ವರದಿಯನ್ನು ಪಾಲಿಕೆಗೆ ಕಡ್ಡಾಯವಾಗಿ ತಿಳಿಸಬೇಕು ಎಂದು ಪಾಲಿಕೆ ಸುತ್ತೋಲೆ ಹೊರಡಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ಲ್ಯಾಬ್​​ಗಳು ಹಾಗೂ ಆಸ್ಪತ್ರೆಗಳು ಕೋವಿಡ್ ಪಾಸಿಟಿವ್ ನೆಗಟಿವ್ ವರದಿಯನ್ನು ನೇರವಾಗಿ ಕೊಡುತ್ತಿವೆ. ಈ ಹಿನ್ನಲೆಯಲ್ಲಿ ವರದಿಯನ್ನು ಪಾಲಿಕೆ ಮತ್ತು ಐಸಿಎಂಆರ್ ಪೋರ್ಟಲ್​​ಗೆ ಅಪ್ಡೇಟ್​​ ಮಾಡಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ.

ಕಳೆದ ಹತ್ತು ದಿನಗಳಲ್ಲಿ ನಗರದಲ್ಲಿ ವಲಯವಾರು ಕೊರೊನಾ ಪ್ರಕರಣಗಳು ಇಂತಿವೆ:

ಕಂಟೈನ್ಮೆಂಟ್ ಪ್ರದೇಶಗಳು- ಪ್ರಕರಣಗಳ ಸಂಖ್ಯೆ

  • ಮಹಾದೇವಪುರ - 720 - 42
  • ಬೊಮ್ಮನಹಳ್ಳಿ - 666 - 29
  • ಪೂರ್ವ ವಲಯ - 548 - 28
  • ಆರ್.ಆರ್ ನಗರ - 433 - 11
  • ಯಲಹಂಕ - 341 - 9
  • ದಕ್ಷಿಣ ವಲಯ - 384 - 10
  • ಪಶ್ಚಿಮ ವಲಯ - 364 - 5
  • ದಾಸರಹಳ್ಳಿ - 93 - 2

ಇದನ್ನೂ ಓದಿ: ದೇಶದಲ್ಲಿ 41,831 ಜನರಿಗೆ ಕೊರೊನಾ ದೃಢ; ಚೇತರಿಕೆ ಪ್ರಮಾಣ ಶೇ 97.36

ETV Bharat Logo

Copyright © 2024 Ushodaya Enterprises Pvt. Ltd., All Rights Reserved.