ETV Bharat / city

ಟಿ-20 ಕ್ರಿಕೆಟ್ ನೋಡಿ ಬಂದ್ಮೇಲೆ ಹೆದರಬೇಡಿ: ಮನೆ ತಲುಪಿಸಲಿದೆ 'ನಮ್ಮ ಮೆಟ್ರೋ' - ಬೆಂಗಳೂರಲ್ಲಿ ಐಸಿಸಿ ಟಿ-20 ಕ್ರಿಕೆಟ್ ಪಂದ್ಯ

ಬೆಂಗಳೂರಲ್ಲಿ ಭಾನುವಾರ ಭಾರತ- ದಕ್ಷಿಣ ಆಪ್ರಿಕಾ ಮಧ್ಯೆ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ, ರೈಲು ಓಡಾಟದ ಸಮಯ ವಿಸ್ತರಿಸಿದೆ.

ನಮ್ಮ ಮೆಟ್ರೋ
author img

By

Published : Sep 21, 2019, 10:45 PM IST

ಬೆಂಗಳೂರು: ಭಾನುವಾರ ಭಾರತ-ದ.ಆಫ್ರಿಕಾ ನಡುವೆ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದೆ. ಕ್ರಿಕೆಟ್ ನೋಡಿ‌ ಹೊರಗೆ ಬಂದ ಮೇಲೆ ಹೇಗಾಪ್ಪಾ ಮನೆಗೆ ಹೋಗೋದು? ಅನ್ನೋ ಟೆನ್ಷನ್ ಬೇಡವೇ ಬೇಡ. ಯಾಕೆಂದರೆ ನಿಮಗಾಗಿ 'ನಮ್ಮ ಮೆಟ್ರೋ' ರೈಲು ಓಡಾಟದ ಸಮಯವನ್ನು ವಿಸ್ತರಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮವು, ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ ಹಾಗೂ ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಿಂದ ಕ್ರಮವಾಗಿ ವಾಣಿಜ್ಯ ಸಂಚಾರ ಸೇವೆಯನ್ನು ರಾತ್ರಿ 11:30 ಗಂಟೆಯವರೆಗೆ ವಿಸ್ತರಿಸಿದೆ. ಕೊನೆಯ ರೈಲು ಸಂಚಾರವು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್​ನಿಂದ ರಾತ್ರಿ 11-45 ಗಂಟೆಯ ವರೆಗೆ ನಾಲ್ಕು ದಿಕ್ಕುಗಳಲ್ಲಿ ಲಭ್ಯವಿರುತ್ತದೆ. ಐಸಿಸಿ ಟಿ20 ಪಂದ್ಯಾವಳಿಯ ಸಮಯದಲ್ಲಿ ನಾಳೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಲಭ್ಯವಿರುತ್ತದೆ.

ಪಂದ್ಯಾವಳಿಯ ನಂತರ ರಾತ್ರಿ 10 ಗಂಟೆಯಿಂದ ವಿಸ್ತರಿಸಲಾದ ಕಾಲಾವಧಿಯವರೆಗೆ, ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಹಿಂದಿರುಗಲು ಪೇಪರ್ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್​ ಬಳಸಬಹುದಾಗಿದೆ. ಇನ್ನು ಟೋಕನ್‌ಗಳನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 10‌ ಗಂಟೆಯ ನಂತರ ಮಾರಾಟ ಮಾಡಲಾಗುವುದಿಲ್ಲ ಅಂತ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಯಾಣಿಕರು ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ನಮ್ಮ ಮೆಟ್ರೋ ಮನವಿ ಮಾಡಿದೆ.

Intro:ಟಿ-20 ಕ್ರಿಕೆಟ್ ನೋಡಿ ಹೊರಗೆ ಬಂದ್ಮೆಲೆ ಡೋಂಟ್ ವರಿ; ಮನೆ ತಲುಪಲು ನಿಮಗಾಗಿಯೇ ಇದೆ ನಮ್ಮ‌‌ ಮೆಟ್ರೋ..

ಬೆಂಗಳೂರು: ಉದ್ಯಾನನಗರೀಯಲ್ಲಿ ನಾಳೆ ಐಸಿಸಿ ಟಿ20 ಕ್ರಿಕೆಟ್ ಪಂದ್ಯ ನಡೆಯಲಿದೆ...‌ಕ್ರಿಕೆಟ್ ನೋಡಿ‌ ಹೊರಗೆ ಬಂದ್ಮೆಲೆ ಹೇಗಾಪ್ಪಾ ಮನೆಗೆ ಹೋಗೋದು ಅನ್ನೋ ಟೆನ್ಷನ್ ಬೇಡವೇ ಬೇಡ..‌ಯಾಕೆಂದರೆ ನಿಮಗಾಗಿ ನಮ್ಮ ಮೆಟ್ರೋ, ರೈಲು ಓಡಾಟದ ಸಮಯವನ್ನ ವಿಸ್ತರಿಸಿದೆ..

ಬೆಂಗಳೂರು ಮೆಟ್ರೋ ರೈಲು ನಿಗಮವು, ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ ಹಾಗೂ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಗಳಿಂದ ಕ್ರಮವಾಗಿ ವಾಣಿಜ್ಯ ಸಂಚಾರ ಸೇವೆಯನ್ನು ರಾತ್ರಿ 11:30 ಗಂಟೆಯವರೆಗೆ ವಿಸ್ತರಿಸಿದೆ..‌

ಕೊನೆಯ ರೈಲು ಸಂಚಾರವು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ರಾತ್ರಿ 11-45 ಗಂಟೆಯವರೆಗೆ ನಾಲ್ಕು ದಿಕ್ಕುಗಳಲ್ಲಿ ಲಭ್ಯವಿರುತ್ತದೆ. ಮೆಟ್ರೋ ರೈಲು ನಿಲ್ದಾಣ ಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ, ಕಬ್ಬನ್ ಪಾರ್ಕ್
ಮೆಟ್ರೋ ನಿಲ್ದಾಣ ದಿಂದ ಯಾವುದೇ ಮೆಟ್ರೋ ನಿಲ್ದಾಣ ವನ್ನು ತಲುಪಲು ರಾತ್ರಿ 10 ಗಂಟೆಯ ನಂತರ ರೂ.50 ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ಖರೀದಿಸ ಬಹುದಾಗಿರುತ್ತದೆ..

ಐಸಿಸಿ ಟಿ20 ಪಂದ್ಯಾವಳಿಯ ಸಮಯದಲ್ಲಿ ನಾಳೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆ ಯವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ, ರಿರ್ಟನ್ ಜರ್ನಿ ಪೇಪರ್ ಟಿಕೆಟ್ ಲಭ್ಯವಿರುತ್ತದೆ.

ಇನ್ನು ಪಂದ್ಯಾವಳಿಯ ನಂತರ ರಾತ್ರಿ 10 ಗಂಟೆಯಿಂದ ವಿಸ್ತರಿಸಲಾದ ಕಾಲವಧಿಯವರೆಗೆ, ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಹಿಂದಿರುಗಲು ಪೇಪರ್ ಟಿಕೆಟ್ ಅನ್ನು ಬಳಸಬಹುದಾಗಿದೆ.. ಇನ್ನು ನಾಳೆ ಟೋಕನ್‌ಗಳನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 10‌ ಗಂಟೆಯ ನಂತರ ಮಾರಾಟ ಮಾಡಲಾಗುವುದಿಲ್ಲ ಅಂತ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.. ‌

ಯಾವುದೇ ಮೆಟ್ರೋ ರೈಲು ನಿಲ್ದಾಣದಿಂದ ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್
ಹಾಗೂ ಟೋಕನ್ ಗಳನ್ನು ಉಪಯೋಗಿಸಿ ಪ್ರಯಾಣಿಸಬಹುದು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ರಾತ್ರಿ10 ಗಂಟೆಯ ನಂತರ ಯಾವುದೇ ಮೆಟ್ರೋ ನಿಲ್ದಾಣವನ್ನು ತಲುಪಲು ಪೇಪರ್ ಟಿಕೇಟ್ ಅಥವಾ ಸ್ಮಾರ್ಟ್ ಕಾರ್ಡನ್ನು ರಿರ್ಟನ್ ಜರ್ನಿಗೆ ಉಪಯೋಗಿಸಬಹುದಾಗಿದೆ.
ಹೀಗಾಗಿ ಪ್ರಯಾಣಿಕರ ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದೆ..‌

KN_BNG_05_NAM_METEO_ CRICKET_SCRIPT_7201801
Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.