ಬೆಂಗಳೂರು: ಇಂದು ಗೃಹ ಕಚೇರಿ ಕೃಷ್ಣಾದಲ್ಲಿ 25ಕ್ಕೂ ಹೆಚ್ಚು ಸ್ವಾಮಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಗೆ ಕಾಯುತ್ತಿದ್ದಾರೆ.
ತಿಪಟೂರಿನ ರುದ್ರಾಮುನಿ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವದಲ್ಲಿ ಬೆಳ್ಳಾವೆ ಶ್ರೀಕಾರದ ವೀರಬಸವ ಮಹಾಸ್ವಾಮೀಜಿಗಳು ಸೇರಿದಂತೆ 25ಕ್ಕೂ ಹೆಚ್ಚು ಮಠಾಧೀಶರುಗಳು ಸಿಎಂ ಭೇಟಿಗಾಗಿ ಆಗಮಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದಿವರೆಯಲು ಒತ್ತಡ ಹೇರಲು ನಿರ್ಧರಿಸಿದ್ದು, ಕರ್ನಾಟಕದ ವೀರಶೈವ ಹಾಗೂ ಲಿಂಗಾಯತ ಮಠದ ಸ್ವಾಮಿಗಳು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ ಬಿಎಸ್ವೈ ಪುತ್ರ ವಿಜಯೇಂದ್ರ ಅನೇಕ ಮಠಗಳಿಗೆ ತೆರಳಿ, ಮಠಾಧೀಶರ ಜೊತೆ ಚರ್ಚೆ ನಡೆಸಿದ್ದರು.