ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನ ಪಡೆಯಲು ಸ್ವಾಮೀಜಿಗಳು, ರಾಜಕಾರಣಿಗಳು ಸೇರಿದಂತೆ ಅಭಿಮಾನಿಗಳ ಮಹಾಪೂರವೇ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಕಡೆ ಹರಿದು ಬರುತ್ತಿದೆ.
ಪುನೀತ್ ರಾಜ್‍ಕುಮಾರ್ ರಾಜ್ಯದ ಉನ್ನತ ನಟ. ಕೇವಲ ಸಿನಿಮಾ ಪ್ರಪಂಚ ಅಲ್ಲದೇ ಸಾಮಾಜಿಕ ಕಳಕಳಿ ಉಳ್ಳವರು. ಶಿಕ್ಷಣಕ್ಕೂ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಬಹಳ ನೋವನ್ನುಂಟುಮಾಡಿದೆ. ಈ ಮಧ್ಯವಯಸ್ಸಿನಲ್ಲೇ ಅಕಾಲಿಕ ಮರಣ ಕುಟುಂಬಕ್ಕಷ್ಟೇ ಅಲ್ಲ ನಮಗೂ ತುಂಬಲಾರದ ನಷ್ಟ. ಎಲ್ಲರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಉಳಿಸಿಹೋಗಿದ್ದಾರೆ. ರಾಜ್ ಕುಮಾರ್ ಅವರ ಆದರ್ಶ, ಅವರ ಸೇವೆ, ಸಾಧನೆ ಶಾಶ್ವತವಾಗಿ ಉಳಿಸಿ ಹೋಗಿದ್ದಾರೆ ಸಿದ್ದಗಂಗಾ ಶ್ರೀಗಳು ತಿಳಿಸಿದ್ದಾರೆ.
ಶಾಸಕ ವೈ ನಾರಾಯಣಸ್ವಾಮಿ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ಸಾವು ಎಲ್ಲರಿಗೂ ದಿಗ್ಭ್ರಮೆ ಉಂಟುಮಾಡಿದೆ. ಅವರ ಸಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಕಾಲಿಕ ಮರಣ ಚಿತ್ರರಂಗವನ್ನು ತಬ್ಬಲಿ ಮಾಡಿದೆ. ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಆಸೆ ಪಟ್ಟವರು ಅವರು. ಅವರ ಸಾವಿನಿಂದ ಕುಟುಂಬದಷ್ಟೇ ದುಃಖ ನಮಗೂ ಆಗಿದೆ ಎಂದರು.
ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಶ್ರೀಶೈಲ ಶ್ರೀಗಳಿಂದ ಸಂತಾಪ
ಇನ್ನೂ ಶಾಸಕ ರಾಜುಗೌಡ ಮಾತನಾಡಿ, ಅತಿಯಾಗಿ ವರ್ಕೌಟ್ ಮಾಡುತ್ತಿರಲಿಲ್ಲ. ಬಹಳ ನೀಟಾಗಿ ಮಾಡ್ತಿದ್ರು. ಅವರ ಬಳಿ ಪಾಸಿಟಿವ್ ಎನರ್ಜಿ ಇರುತ್ತಿತ್ತು. ಬೇರೆಯವರ ಬಗ್ಗೆ ಒಳ್ಳೆಯದನ್ನೇ ಮಾತನಾಡುತ್ತಿದ್ದರು ಎಂದು ಸ್ಮರಿಸಿದರು.