ETV Bharat / city

ಪರಿಷತ್​​​​​​​​​​​ ಕಲಾಪ: ವಿದೇಶಿ ಪ್ರಜೆಗಳು, ಅಕ್ರಮ ವಲಸಿಗರ ಮೇಲೆ ಕಣ್ಗಾವಲು; ಗೃಹ ಸಚಿವರ ಸ್ಪಷ್ಟನೆ

ವಿದೇಶಿ ಪ್ರಜೆಗಳು, ಅಕ್ರಮ ವಲಸಿಗರು ರಾಜ್ಯದಲ್ಲಿ ಯಾವುದೇ ಅಕ್ರಮಗಳನ್ನು ನಡೆಸುವುದರ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ವಿಧಾನ ಪರಿಷತ್‌ ಕಲಾಪದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

Surveillance against foreign nationals, illegal immigrants - minister araga jnanendra
ವಿದೇಶಿ ಪ್ರಜೆಗಳು, ಅಕ್ರಮ ವಲಸಿಗರ ಮೇಲೆ ಕಣ್ಗಾವಲು; ಪರಿಷತ್‌ಗೆ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ
author img

By

Published : Sep 16, 2021, 12:49 PM IST

ಬೆಂಗಳೂರು: ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಧರ್ಮಛತ್ರವಾಗಲು ಬಿಡುವುದಿಲ್ಲ, ಅಕ್ರಮ ವಲಸಿಗರು ಏನು ಮಾಡಬೇಕಾದರೂ ಮಾಡಬಹುದು ಎನ್ನುವ ದಿನಗಳು ಮುಗಿದಿವೆ, ಎಲ್ಲವನ್ನು ನಿಯಂತ್ರಿಸಲು ವಿಶೇಷ ಕಾರ್ಯಪಡೆ ರಚಿಸಿ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿದೇಶಿ ಪ್ರಜೆಗಳು, ಅಕ್ರಮ ವಲಸಿಗರ ಮೇಲೆ ಕಣ್ಗಾವಲು; ಪರಿಷತ್‌ಗೆ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಮುನಿರಾಜುಗೌಡ, ಅನಧಿಕೃತ ಬಾಂಗ್ಲಾ, ರೋಹಿಂಗ್ಯಾ ಮುಸಲ್ಮಾರನ ಗುರುತಿಸಲಾಗಿದೆಯಾ? ಕಸ ಆಯುವವರಿಂದ ಹಿಡದು ಹೋಟೆಲ್ ಇತ್ಯಾದಿ ಎಲ್ಲಾ ಕಡೆ ಬಾಂಗ್ಲಾದ ಕೆಲಸಗಾರರೇ ಇದ್ದಾರೆ. ನಗರದ ಹಲವು ಬಡಾವಣೆಗಳಲ್ಲಿ ರೋಹಿಂಗ್ಯಾ, ಬಾಂಗ್ಲಾ ಮುಸಲ್ಮಾನರು ಇದ್ದಾರೆ ಎನ್ನುವ ವರದಿ ಪತ್ರಿಕೆಗಳಲ್ಲಿ ವರದಿಯಾಗಿದೆ.
ನಕಲಿ ಮತದಾರರ ಗುರಿತಿನ‌ ಚೀಟಿ ಮಾಡಿಕೊಂಡು ಸ್ಥಳೀಯರ ಉದ್ಯೋಗ ಕಸಿಯುತ್ತಿದ್ದಾರೆ. ಉಗ್ರ ಕಸಬ್‌ಗೂ ಇಲ್ಲಿನ ಮತದಾರರ ಗುರುತಿನ‌ ಚೀಟಿ ಇತ್ತು ಎನ್ನುವುದು ಬಹಿರಂಗವಾಗಿದೆ. ದೇಶದ್ರೋಹಿ ಚಟುವಟಿಕೆ ನಡೆಯುತ್ತಿದ್ದರೂ ಕ್ರಮವಿಲ್ಲ. ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆ ಇದೆ. ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರಿದ್ದಾರೆ. ಅವರನ್ನು ಹೊರಹಾಕಬೇಕು, ಇಂದು ದೇವಾಲಯ ಒಡೆಯುತ್ತಿದ್ದಾರೆ, ನಮ್ಮ ಮುಂದಿನ ಪೀಳಿಗೆಗೆ ಈ ಅಕ್ರಮ ವಲಸಿಗರಿಂದ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಬದ್ಧತೆ ಇದೆ.. ಆರಗ ಸಮರ್ಥನೆ
ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರಕ್ಕೆ ಬದ್ದತೆ ಇದೆ. ಅಕ್ರಮ ವಲಸಿಗರು ನೆಲಸಿದ್ದರೆ ಕಣ್ಗಾವಲು ಇಡಲು‌ ಸೂಚಿಸಲಾಗಿದೆ. ರೋಹಿಂಗ್ಯಾ ಸಮುದಾಯದವರನ್ನು ಹೊರಹಾಕಲು ಕೇಂದ್ರದ ಮಾರ್ಗಸೂಚಿ ಇನ್ನೂ ಬಂದಿಲ್ಲ. ಅವರೆಲ್ಲಾ ಆರು ಕ್ಯಾಂಪ್‌ಗಳಲ್ಲಿ 190 ಜನ ನೆಲಸಿದ್ದಾರೆ. ವಿದೇಶಿಗರ ಚಲನವಲನ ಗಮನಿಸಲು ಸೂಚಿಸಲಾಗಿದೆ. ಅಂತರಿಕ‌ ಭದ್ರತಾ ಅಧಿಕಾರಿಗಳು ವಲಸಿಗರ ವಸತಿ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.
ವಿದೇಶಿಗರಿಂದ ಅಕ್ರಮ‌ ಚಟುವಟಿಕೆ ನಡೆಯಲು ಬಿಡುವುದಿಲ್ಲ, ವೀಸಾ ಮುಗಿದಿದ್ದರೆ ಏನು ಮಾಡಬೇಕು ಎಂದು ಪರಿಶೀಲಿಸಲಾಗುತ್ತಿದೆ. ಸಿವಿಲ್ ಡಿಟೆನ್ಷನ್ ಸೆಂಟರ್ ಇದೆ. ಅಲ್ಲಿ ಆಫ್ರಿನ್ ಪ್ರಜೆಗಳನ್ನು ಇರಿಸಿದ್ದೇವೆ. ಅವರ ಬಗ್ಗೆಯೂ ಕಣ್ಗಾವಲು ಇಡಲಾಗಿದೆ. ಕೆಲವರ ವಿರುದ್ಧ ಮೊಕದ್ದಮೆಗಳಿವೆ, ಅವು ಮುಗಿಯದೇ ವಾಪಸ್ ಕಳಿಸಲು ಸಾಧ್ಯವಿಲ್ಲ, ಸರ್ಕಾರ ಎಚ್ಚರಿಕೆ ವಹಿಸಿದೆ ಎಂದು ಹೇಳಿದರು.
ಕರ್ನಾಟಕ ಧರ್ಮಛತ್ರವಲ್ಲ
ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಧರ್ಮಛತ್ರವಾಗಲು ಬಿಡುವುದಿಲ್ಲ, ಅಕ್ರಮ ವಲಸಿಗರು ಏನು ಮಾಡಬೇಕಾದರೂ ಮಾಡಬಹುದು ಎನ್ನುವ ದಿನಗಳು ಮುಗಿದಿವೆ. ಎಲ್ಲವನ್ನು ನಿಯಂತ್ರಿಸಲು ವಿಶೇಷ ಕಾರ್ಯಪಡೆ ರಚಿಸಿ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲಾಗುತ್ತದೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಿದ್ದೇವೆ. ಯಾವುದೇ ಕಾರಣಕ್ಕೂ ವಿದೇಶಿಗರ ಅಕ್ರಮ ಚಟುವಟಿಕೆಗೆ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.