ETV Bharat / city

ದೂರವಾಣಿ ಮೂಲಕ ಜಮೀರ್ ಅಹ್ಮದ್​​​ಗೆ ಸುರ್ಜೇವಾಲಾ ಕ್ಲಾಸ್.. ಅಷ್ಟೇ ಖಡಕ್ ಪ್ರತ್ಯುತ್ತರ ಕೊಟ್ಟ ಮಾಜಿ ಸಚಿವರು

author img

By

Published : Jun 22, 2021, 5:53 PM IST

ನಾನು ಪಕ್ಷದ ಅವಹೇಳನ ಮಾಡಿಲ್ಲ. ಜನರ ಅಭಿಪ್ರಾಯ ಇದು ಎಂದು ತಿಳಿಸುವ ಕಾರ್ಯ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ್ದೇನೆ, ಜೆಡಿಎಸ್ ಪರವಾಗಿ ಮಾಡಿಲ್ಲ. ಬೇಕಾದರೆ ಈ ವಿಚಾರವನ್ನು ಪರಾಮರ್ಶಿಸಿ..

-jamir-ahmed-statement-issue
ಜಮೀರ್ ಅಹ್ಮದ್​​​ಗೆ ಕ್ಲಾಸ್ ತೆಗೆದುಕೊಂಡ ಸುರ್ಜೆವಾಲಾ

ಬೆಂಗಳೂರು : ರಾಜ್ಯ ಕಾಂಗ್ರೆಸ್​​​ನಲ್ಲಿ ಮುಂದಿನ ಸಿಎಂ ವಿಚಾರ ಪ್ರಸ್ತಾಪಿಸಿದ ಹಿನ್ನೆಲೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್‌ರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿವಿಧ ವೇದಿಕೆಗಳಲ್ಲಿ ಜಮೀರ್ ಅಹ್ಮದ್ 'ಮುಂದಿನ ಸಿಎಂ ಸಿದ್ದರಾಮಯ್ಯ' ಎಂಬ ವಿಚಾರ ಪ್ರಸ್ತಾಪಿಸಿ ಗೊಂದಲ ನಿರ್ಮಿಸಿದ್ದರು.

ಓದಿ: ಕಾಂಗ್ರೆಸ್ ಮುಸುಕಿನ ಗುದ್ದಾಟ ನಿಂತಿಲ್ಲ ; ಕೆಲ ದಿನ ಕ್ವಾರಂಟೈನ್‌ನಲ್ಲಿತ್ತಷ್ಟೇ..

ಕಾಂಗ್ರೆಸ್ ಪಕ್ಷದ ಸಂಪ್ರದಾಯದಲ್ಲಿ ಮುಂದಿನ ಸಿಎಂ ಯಾರು ಎಂಬ ವಿಚಾರವಾಗಿ ಚರ್ಚಿಸುವಂತೆ ಇಲ್ಲ. ಅಲ್ಲದೆ ಪಕ್ಷ ಅಧಿಕಾರಕ್ಕೆ ಬಂದರೆ ಯಾರನ್ನು ಸಿಎಂ ಮಾಡಬೇಕೆಂಬ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು. ರಾಜ್ಯದಲ್ಲಿ ಸದ್ಯ ಮೂರ್ನಾಲ್ಕು ಮಂದಿ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಿದ್ದಾರೆ.

ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಯಾರ ಪರಿಶ್ರಮ ಎಷ್ಟಿದೆ ಎಂಬುದನ್ನು ಪರಿಗಣಿಸಿ ಪಕ್ಷದ ಹೈಕಮಾಂಡ್ ಸಿಎಂ ಸ್ಥಾನವನ್ನು ನಿರ್ಧರಿಸಲಿದೆ. ಆದರೆ, ಈ ಮಧ್ಯೆ ಚುನಾವಣೆಗೆ ಎರಡು ವರ್ಷ ಇರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಜಮೀರ್ ಅಹ್ಮದ್ ಪದೇಪದೆ ಹೇಳಿರುವುದು ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ.

ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿರುವ ಸುರ್ಜೇವಾಲಾ, ಮಾಜಿ ಸಚಿವ ಜಮೀರ್ ಅಹ್ಮದ್‌ರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ತತ್ವ ಸಿದ್ಧಾಂತವನ್ನು ಅರಿತು ಮಾತನಾಡಿ, ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ಇಲ್ಲಿನ ನಿಯಮಗಳನ್ನ ಅರ್ಥ ಮಾಡಿಕೊಂಡು ಮಾತನಾಡುವುದು ಸೂಕ್ತ. ಅನಗತ್ಯವಾಗಿ ನಿಮ್ಮ ಆಸಕ್ತಿಯ ವಿಚಾರವನ್ನು ಬಹಿರಂಗ ವೇದಿಕೆಯಲ್ಲಿ ಬಳಸಿಕೊಳ್ಳಬೇಡಿ. ನಿಮ್ಮ ಅಭಿಪ್ರಾಯ ಅಥವಾ ಹೇಳಿಕೆಯನ್ನು ಪಕ್ಷದ ವೇದಿಕೆಯಲ್ಲಿ ನೀಡಿ ಎಂದು ಸೂಚನೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಮೀರ್ ಅಹ್ಮದ್, ನಾನು ಪಕ್ಷದ ಅವಹೇಳನ ಮಾಡಿಲ್ಲ. ಜನರ ಅಭಿಪ್ರಾಯ ಇದು ಎಂದು ತಿಳಿಸುವ ಕಾರ್ಯ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ್ದೇನೆ, ಜೆಡಿಎಸ್ ಪರವಾಗಿ ಮಾಡಿಲ್ಲ. ಬೇಕಾದರೆ ಈ ವಿಚಾರವನ್ನು ಪರಾಮರ್ಶಿಸಿ.

ನಾನು ಕುಮಾರಸ್ವಾಮಿ ವಿರುದ್ಧ ನೀಡಿದ ಹೇಳಿಕೆಗೆ ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ಸಮಸ್ಯೆ ಎದುರಾಯಿತು, ಇದನ್ನು ನಂತರ ಬಗೆಹರಿಸಿ ಕೊಂಡಿದ್ದೇನೆ. ಈ ಸಂದರ್ಭ ನೀಡಿದ ಕೆಲ ಹೇಳಿಕೆಗಳು ಪಕ್ಷದ ಅಧ್ಯಕ್ಷರಿಗೆ ಬೇಸರ ತಂದಿದೆ. ಅದಕ್ಕೆ ಅವರು ವಿವರಣೆ ಕೇಳಿದ್ದು ಮಾಹಿತಿ ಒದಗಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗೃತವಾಗಿ ಇರಲಿದ್ದೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.