ETV Bharat / city

ಎಸ್​ಎಸ್ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ರು ಸಚಿವ ಸುರೇಶಕುಮಾರ್ - ಜುಲೈ 31 ರ ಒಳಗೆ ಎಸ್ಎಸ್ಎಲ್​ಸಿ ಫಲಿತಾಂಶ

ಜೂನ್​ ತಿಂಗಳಲ್ಲಿ ಪರೀಕ್ಷೆಗಳು ಮುಗಿದ ನಂತರ ಫಲಿತಾಂಶಗಳನ್ನು ಆದಷ್ಟು ಬೇಗ ಪ್ರಕಟಿಸುತ್ತೇವೆ. ಜುಲೈ 2 ನೇ ವಾರ ದ್ವಿತೀಯ ಪಿಯುಸಿ ಫಲಿತಾಂಶ ಹಾಗೂ ಜುಲೈ 31 ರೊಳಗೆ ಎಸ್ಎಸ್ಎಲ್​ಸಿ ಫಲಿತಾಂಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸುರೇಶ್ ಕುಮಾರ್
ಸುರೇಶ್ ಕುಮಾರ್
author img

By

Published : May 29, 2020, 3:36 PM IST

ಮೈಸೂರು: ಜುಲೈ 2 ನೇ ವಾರ ಪಿಯುಸಿ ಫಲಿತಾಂಶ ಹಾಗೂ ಜುಲೈ 31 ರ ರೊಳಗೆ ಎಸ್​ಎಸ್ಎಲ್​ಸಿ ಫಲಿತಾಂಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಹೇಳಿದ್ದಾರೆ.

ಪಿಯುಸಿ ಫಲಿತಾಂಶ ಕುರಿತು ಸುರೇಶಕುಮಾರ್ ಪ್ರತಿಕ್ರಿಯೆ

ಇಂದು ಮೈಸೂರು, ಮಂಡ್ಯ ಹಾಗೂ ಮಡಿಕೇರಿಯ ಶಿಕ್ಷಣಾಧಿಕಾರಗಳ ಸಭೆ ನಡೆಸಿದ ಬಳಿಕ ಈಟಿವಿ ಭಾರತದ ಜೊತೆ ಮಾತನಾಡಿದ ಸಚಿವರು, ಎಸ್ಎಸ್ಎಲ್​ಸಿ ಪರೀಕ್ಷೆ ಜುಲೈ 4 ರಂದು ಮುಗಿಯುತ್ತದೆ. ಈ ಪರೀಕ್ಷೆ ಮುಗಿದ 15 ದಿನಕ್ಕೆ ಪುನಃ ಕಾರಣಾಂತರಗಳಿಂದ ಪರೀಕ್ಷೆಗೆ ಹಾಜರಾಗದವರು ಮತ್ತು ಅನುತ್ತೀರ್ಣ ಆದವರಿಗೆ ಎಸ್ಎಸ್ಎಲ್​ಸಿ ಪೂರಕ ಪರೀಕ್ಷೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಈ ಬಾರಿಯ ಶೈಕ್ಷಣಿಕ ವರ್ಷ ಯಾವಾಗ ಆರಂಭವಾಗಬೇಕು ಎಂಬ ಬಗ್ಗೆ ಕೇಂದ್ರದಿಂದ ಗೈಡ್​ಲೈನ್​ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಈ ವರ್ಷ ಕೊರೊನಾ ವರ್ಷವಾಗಿರುವುದರಿಂದ ಶಾಲಾ-ಕಾಲೇಜುಗಳಲ್ಲಿ ಶುಲ್ಕವನ್ನು ಹೆಚ್ಚಿಸಬಾರದೆಂದು ಗೈಡ್​ಲೈನ್​ ನೀಡಲಾಗಿದೆ. ಮುಖ್ಯವಾಗಿ ಜೂನ್ 25 ರಿಂದ ಜುಲೈ 4 ವರೆಗೆ ನಡೆಯುವ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ 8,48,500 ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಗುವುದು. ಜೊತೆಗೆ ಪರೀಕ್ಷಾ ಕೊಠಡಿಗಳಲ್ಲಿ 24 ವಿದ್ಯಾರ್ಥಿಗಳಿಗೆ ಬದಲಾಗಿ 18 ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ ಸಾಮಾಜಿಕ ಅಂತರದಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು ಎಂದರು.

ಈ ಬಾರಿ ಸುರಕ್ಷತೆ ಹಾಗೂ ಆತ್ಮವಿಶ್ವಾಸದ ಪರಿಕಲ್ಪನೆಯಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ಇದೇ ವೇಳೆ ಶಿಕ್ಷಣ ಸಚಿವರು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.