ಬೆಂಗಳೂರು : ಕರ್ನಾಟಕ ಕಂಟ್ರೋಲ್ ರೂಂಗೆ ಬಂದಿರುವ ಮಾಹಿತಿ ಪ್ರಕಾರ ಉಕ್ರೇನ್‌ನಲ್ಲಿ ರಾಜ್ಯದ 454 ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆವರೆಗೂ ಕರ್ನಾಟಕದ 37 ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ. ರಾತ್ರಿ ಉಡುಪಿ ಮೂಲದ ವಿದ್ಯಾರ್ಥಿ ಬಂದಿದ್ದಾರೆ. ಇಂದು ಸಂಜೆ ಏರ್ ಏಷ್ಯಾ ಮೂಲಕ 6 ಜನ ವಿದ್ಯಾರ್ಥಿಗಳು ಬರ್ತಾರೆ.
ಇಂದು ರಾತ್ರಿ ಒಂದು ಫ್ಲೈಟ್ ಬರ್ತಿದೆ, ನಾಳೆ ಮುಂಬೈಗೆ ಒಂದು ಫ್ಲೈಟ್ ಬರುತ್ತೆ. ಅದರಲ್ಲಿ ಎಷ್ಟು ಕನ್ನಡಿಗರು ಇದ್ದಾರೆ ಅಂತಾ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳನ್ನು ಸಂಪರ್ಕಿಸಿ ತಿಳಿಸಲಾಗುವುದು. ಸದ್ಯ ಈಗ ಉಕ್ರೇನ್‌ನಲ್ಲಿ 3 ಕಡೆ ಕರ್ಫ್ಯೂ ಇದೆ ಎಂದರು.
ವಿದ್ಯಾರ್ಥಿಗಳು ಅಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸೂಚನೆಗಳನ್ನು ಪಾಲಿಸಿ. ಏನೇ ಇದ್ದರೂ ರಾಯಭಾರ ಕಚೇರಿಯನ್ನು ಸಂಪರ್ಕಿಸಿ. ಬೇರೆ ಎಲ್ಲೂ ಕೂಡ ಸಂಚಾರ ಮಾಡೋದು ಬೇಡ. ವಿದ್ಯಾರ್ಥಿಗಳ ನೆರವಿಗಾಗಿ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಉಕ್ರೇನ್ನಿಂದ ಭಾರತಕ್ಕೆ ಬಂದಿಳಿದ 5ನೇ ವಿಮಾನ: ಮತ್ತೆ 249 ಭಾರತೀಯರ ರಕ್ಷಣೆ
ರಕ್ಷಣೆ ಕೆಲಸ ನಡೆಯುತ್ತಿದೆ. ಇದನ್ನು ಯಾರು ನೋಡಿಲ್ಲ, ನೋಡೋಕು ಆಗಲ್ಲ. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಧೈರ್ಯ ಕೊಡುವ ಕೆಲಸ ವನ್ನು ಕರ್ನಾಟಕದಿಂದ ಮಾಡಬೇಕು. ಉಕ್ರೇನ್ ಕರ್ನಾಟಕ ಟೆಕ್ ವೆಬ್ಸೈಟ್ ಫಾಲೋ ಮಾಡಿ. ಎಲ್ಲಾ ರೀತಿಯ ಮಾಹಿತಿಗಳು ಸಿಗುತ್ತೆ ಎಂದು ವಿವರಿಸಿದರು.