ETV Bharat / city

ಬೆಂಗಳೂರಿನಲ್ಲಿ ಇನ್ಮುಂದೆ 24/7 ಹೋಟೆಲ್​ಗಳು ಓಪನ್

ಸರ್ಕಾರದ ಆದೇಶ ಸ್ವಾಗತಿಸಿರುವ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ, ಪೊಲೀಸ್ ಇಲಾಖೆಯ ಅನುಮತಿಗೆ ಕಾಯುತ್ತಿವೆ. ಈ ಕುರಿತಂತೆ ಪೊಲೀಸ್ ಇಲಾಖೆಗೆ ಅನುಮತಿ ಕೋರಿ ಹೋಟೆಲ್‌ ಸಂಘದಿಂದ ಪತ್ರ ಬರೆಯಲಾಗಿದೆ‌. ಪೊಲೀಸ್ ಇಲಾಖೆಯ ಅನುಮತಿ ಸಿಕ್ಕ ತಕ್ಷಣವೇ ಹೋಟೆಲ್‌ಗಳಲ್ಲಿ 24/7 ಸೇವೆ ಆರಂಭವಾಗಲಿದೆ..

ಹೋಟೆಲ್​​ಗಳಿಗೆ ರಾಜ್ಯ ಸರ್ಕಾರ ಹೊಸ ಆದೇಶ
ಹೋಟೆಲ್​​ಗಳಿಗೆ ರಾಜ್ಯ ಸರ್ಕಾರ ಹೊಸ ಆದೇಶ
author img

By

Published : Apr 19, 2022, 5:03 PM IST

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇನ್ಮುಂದೆ ದಿನದ 24 ಗಂಟೆಯೂ ಹೋಟೆಲ್​ಗಳು ತೆರೆಯಲಿವೆ. ಇಡೀ ರಾತ್ರಿ ಹೊತ್ತು ಊಟ-ತಿಂಡಿ ಸಿಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, 24/7 ಎಲ್ಲ ಹೋಟೆಲ್, ಬೇಕರಿ, ಸ್ವೀಟ್ಸ್ ಸ್ಟಾಲ್, ಐಸ್‌‌ಕ್ರಿಂ ಶಾಪ್ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ರಾಜಧಾನಿಯಲ್ಲಿ ಹಗಲು-ರಾತ್ರಿ ಎಂಬ ವ್ಯತ್ಯಾಸವಿರದೇ ದುಡಿಯುವ ಮಂದಿ ತುಂಬಾ. ಆದರೆ, ರಾತ್ರಿ 11 ಗಂಟೆಯಾದರೆ ಊಟ ಸಿಗುವುದು ಕಷ್ಟವಾಗಿತ್ತು. ರಾತ್ರಿ ವೇಳೆ ಹೋಟೆಲ್​ಗಳು ತೆರೆಯಲು ಅವಕಾಶವೇ ಇರಲಿಲ್ಲ. ಆದರೆ, ಈಗ 24/7 ಹೋಟೆಲ್ ತೆರೆಯಲು ಸರ್ಕಾರದಿಂದ ಅವಕಾಶ ಸಿಕ್ಕಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಅನುಕೂಲಕ್ಕಾಗಿ ಈ ವ್ಯವಸ್ಥೆ ಜಾರಿ ಮಾಡ್ಲಾಗಿದೆ.

ಸರ್ಕಾರದ ಆದೇಶ ಸ್ವಾಗತಿಸಿರುವ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ, ಪೊಲೀಸ್ ಇಲಾಖೆಯ ಅನುಮತಿಗೆ ಕಾಯುತ್ತಿವೆ. ಈ ಕುರಿತಂತೆ ಪೊಲೀಸ್ ಇಲಾಖೆಗೆ ಅನುಮತಿ ಕೋರಿ ಹೋಟೆಲ್‌ ಸಂಘದಿಂದ ಪತ್ರ ಬರೆಯಲಾಗಿದೆ‌. ಪೊಲೀಸ್ ಇಲಾಖೆಯ ಅನುಮತಿ ಸಿಕ್ಕ ತಕ್ಷಣವೇ ಹೋಟೆಲ್‌ಗಳಲ್ಲಿ 24/7 ಸೇವೆ ಆರಂಭವಾಗಲಿದೆ.

ಇದನ್ನೂ ಓದಿ : ಕಾರವಾರದಲ್ಲೊಂದು ಮಕ್ಕಳ ಸಂತೆ: ಗ್ರಾಹಕರ ಖರೀದಿ ಬಲುಜೋರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.