ETV Bharat / city

ರಿಂಗ್​ ರಸ್ತೆಗಳಲ್ಲಿ ಅಪಘಾತ ಹೆಚ್ಚಳ: ಟ್ರಾಮಾ ಕೇರ್ ಸೆಂಟರ್ ನಿರ್ಮಾಣಕ್ಕೆ ಒತ್ತು

ರಾಜ್ಯದಲ್ಲಿ ಟ್ರಾಮಾ ಕೇರ್ ಸೆಂಟರ್​​ಗೆ ವಿಶೇಷ ಗಮನ ಕೊಡಲಾಗುವುದು. ಅವುಗಳ ಸ್ಥಾಪನೆಗೆ ಯಾವ ಮಾರ್ಗಸೂಚಿ ಪಾಲಿಸಬೇಕು, ಎಷ್ಟು ಸೆಂಟರ್ ನಿರ್ಮಿಸಬೇಕು ಎಂಬುದನ್ನು ಆಯವ್ಯಯದಲ್ಲಿ ಕೇಂದ್ರ ಸರ್ಕಾರ ಮಂಡಿಸಿದೆ ಎಂದು ಸಚಿವ ಡಾ. ಕೆ.ಸುಧಾಕರ್ ಹೇಳಿದರು.

trauma-care-center
ಟ್ರಾಮಾ ಕೇರ್ ಸೆಂಟರ್
author img

By

Published : Feb 9, 2021, 10:42 PM IST

ಬೆಂಗಳೂರು: ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ನಗರದ ಹೊರವಲಯಗಳಲ್ಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಎಷ್ಟೋ ಪ್ರಕರಣಗಳಲ್ಲಿ ತುರ್ತು ಚಿಕಿತ್ಸೆ ದೊರೆತಿದ್ದರೆ ಜೀವ ಬದುಕುತ್ತಿತ್ತು ಎಂಬ ಮಾತುಗಳು ವೈದ್ಯರು ಹೇಳಿದ್ದೂ ಉಂಟು. ಟ್ರಾಮಾ ಕೇರ್​ ಸೆಂಟರ್​ಗಳ ಅವಶ್ಯಕತೆ ಎಷ್ಟಿದೆ ಎಂಬುದನ್ನೂ ಇದು ಸೂಚಿಸುತ್ತದೆ.

ತೆಲಂಗಾಣದ ಹೈದರಾಬಾದ್​​​ನಲ್ಲಿ ರಿಂಗ್ ರಸ್ತೆಗಳಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ಉಳಿಸಲು 10 ಟ್ರಾಮಾ ಕೇರ್ ಸೆಂಟರ್​ಗಳನ್ನು ಉದ್ಘಾಟಿಸಲಾಗಿದೆ. ಅದರಂತೆ ನಮ್ಮಲ್ಲೂ ಅಂತಹ ವ್ಯವಸ್ಥೆ ತರಲು ರಾಜ್ಯ ಸರ್ಕಾರ ಒಲವು ತೋರಿದೆ‌‌.

ಇದನ್ನೂ ಓದಿ...ಇಂಧನ ಬೆಲೆ ಏರಿಕೆಗೆ ವಿರೋಧ.. ಬೊಮ್ಮನಹಳ್ಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ಶವ ಯಾತ್ರೆ

ಈ ಸಂಬಂಧ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮಾತಾನಾಡಿದ್ದು, ರಾಜ್ಯದಲ್ಲಿ ಟ್ರಾಮಾ ಕೇರ್ ಸೆಂಟರ್​​ಗೆ ವಿಶೇಷ ಗಮನ ಕೊಡಲಾಗುವುದು. ಅವುಗಳ ಸ್ಥಾಪನೆಗೆ ಯಾವ ಮಾರ್ಗಸೂಚಿ ಪಾಲಿಸಬೇಕು, ಎಷ್ಟು ಸೆಂಟರ್ ನಿರ್ಮಿಸಬೇಕು ಎಂಬುದನ್ನು ಆಯವ್ಯಯದಲ್ಲಿ ಕೇಂದ್ರ ಸರ್ಕಾರ ಮಂಡಿಸಿದೆ. ಆ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಈ ಕುರಿತು ಕೆಲಸ ಮಾಡಲಾಗುವುದು ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್

ಇನ್ಪ್ರಾಸ್ಟ್ರಕ್ಚರ್​ ಅಂಡ್​ ಟೂರಿಸಂ ಕಮಿಟಿಯ ಮಾಜಿ ಅಧ್ಯಕ್ಷ ಪ್ರಕಾಶ್ ಮಾತಾನಾಡಿ, ಗಂಭೀರ ಸಂದರ್ಭದಲ್ಲಿ ತುರ್ತು ಆರೋಗ್ಯ ಸೇವೆ ಅಗತ್ಯವಾಗಿ ಬೇಕಾಗುತ್ತದೆ. ಅದಕ್ಕೆ ‌ತಾಜಾ ಉದಾಹರಣೆ ಎನ್ನುವಂತೆ ಧಾರವಾಡದಲ್ಲಿ ನಡೆದ ಬಸ್ ಅಪಘಾತವೇ ಸಾಕ್ಷಿ. 12ಕ್ಕೂ ಅಧಿಕ ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿದ್ದರು.‌ ಅಪಘಾತದ ಸಂದರ್ಭದಲ್ಲಿ ಒಂದೊಂದು ನಿಮಿಷವೂ ಬಹಳ ಅಮೂಲ್ಯ. ಹೀಗಾಗಿ ರಿಂಗ್ ​​ರೋಡ್, ಹೆದ್ದಾರಿಗಳಲ್ಲಿ ಆ್ಯಂಬುಲೆನ್ಸ್​ ಸೇವೆ ಒದಗಿಸುವುದು, ಟ್ರಾಮಾ ಕೇರ್ ಸೆಂಟರ್ ನಿರ್ಮಿಸುವುದು ಒಳಿತು ಎನ್ನುತ್ತಾರೆ.

ರಾಜ್ಯ ಸರ್ಕಾರ ಅದಷ್ಟು ಬೇಗ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಿದರೆ, ರಿಂಗ್​ ​ರೋಡ್​​ನಲ್ಲಾಗುವ ಅಪಘಾತದ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗಲಿದೆ. ಪ್ರಾಣ ಬಿಡುವ ರೋಗಿಗಳ ಪ್ರಾಣ ಉಳಿಸಿದಂತಾಗುತ್ತದೆ. ಹೆಚ್ಚು ಅಪಘಾತ ಸಂಭವಿಸಿದ ರಾಜ್ಯಗಳ ಪೈಕಿ 2017ರಲ್ಲಿ ಕರ್ನಾಟಕ 3ನೇ ಸ್ಥಾನ, 2018ರಲ್ಲಿ 4ನೇ ಸ್ಥಾನ‌ ಹೊಂದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.