ಬೆಂಗಳೂರು: ಮಳೆ ಹಾನಿ ಹಾಗು ನೆರೆ ಪೀಡಿತ ಸಂತ್ರಸ್ತರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ಬೆಳಗಾವಿ, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ 12 ಜಿಲ್ಲೆಗಳಲ್ಲಿ ಕಂಟ್ರೋಲ್ ರೂಂ ಗಳನ್ನು ತೆರೆದಿದೆ.
ರಾಜ್ಯ ಸರ್ಕಾರದಿಂದ ಸಹಾಯ ಮತ್ತು ಮಳೆಯಿಂದ, ನದಿಗಳ ಪ್ರವಾಹದಿಂದ ಸಂಕಷ್ಟಕ್ಕೆ ಸಾರ್ವಜನಿಕರು, ಪ್ರಾಣಿಗಳು ಸಿಲುಕಿದ್ದರೆ, ಮನೆಗಳು ಕುಸಿದಿದ್ದರೆ, ರಸ್ತೆ ಹಾಳಾಗಿದ್ದರೆ ತಕ್ಷಣ ಮಾಹಿತಿ ನೀಡಲು ಈ ಕಂಟ್ರೋಲ್ ರೂಂ ಆರಂಭಿಸಲಾಗಿದೆ.
- ಬೆಳಗಾವಿ ಕಂಟ್ರೋಲ್ ರೂಂ - 0831- 2407290
- ವಿಜಯಪುರ ಕಂಟ್ರೋಲ್ ರೂಂ - 08352- 221261
- ಬಾಗಲಕೋಟೆ ಕಂಟ್ರೋಲ್ ರೂಂ- 08354 - 236240
- ರಾಯಚೂರು ಕಂಟ್ರೋಲ್ ರೂಂ- 08532- 226383
- ಯಾದಗಿರಿ ಕಂಟ್ರೋಲ್ ರೂಂ -08473- 253771
- ಶಿವಮೊಗ್ಗ ಕಂಟ್ರೋಲ್ ರೂಂ - 08182- 271101
- ದಕ್ಷಿಣ ಕನ್ನಡ ಕಂಟ್ರೋಲ್ ರೂಂ - 0824- 2442590
- ಉಡುಪಿ ಕಂಟ್ರೋಲ್ ರೂಂ - 0820- 2574802
- ಉತ್ತರ ಕನ್ನಡ ಕಂಟ್ರೋಲ್ ರೂಂ - 08382-229857
- ಕೊಡಗು ಕಂಟ್ರೋಲ್ ರೂಂ - 08272- 221077
- ಹಾಸನ ಕಂಟ್ರೋಲ್ ರೂಂ - 08172- 261111
- ಚಿಕ್ಕಮಗಳೂರು ಕಂಟ್ರೋಲ್ ರೂಂ - 08262- 238950
ಕಂಟ್ರೋಲ್ ರೂಮ್ಗಳಲ್ಲದೇ ಸಾರ್ವಜನಿಕರು ದೂರು ನೀಡಲು " ರಾಜ್ಯ ತುರ್ತು ಸೇವಾ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ದೂರವಾಣಿ 080- 1070, 080- 22340676. ವಾಟ್ಸಾಪ್ ನಂ-9008405955.
ಇನ್ನು ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಒದಗಿಸಲು ಪ್ರವಾಹ ನಿಯಂತ್ರಣ ರೂಂ ಆರಂಭಿಸಿದ್ದು , 080- 25573333, ವಾಟ್ಸಾಪ್ ನಂ-9513749080. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಕಂಟ್ರೋಲ್ ರೂಂ ನಂಬರ್ಗಳನ್ನು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.