ಬೆಂಗಳೂರು: ಕೊರೊನಾ ಸೋಂಕು ಭೀತಿಯಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೀಗಾಗಿ, ಇದೀಗ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಪರೀಕ್ಷೆ ಬರೆಯದ ಮತ್ತು ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. ಪೂರಕ ಪರೀಕ್ಷೆಗಳು ಸೆಪ್ಟೆಂಬರ್ 21 ರಿಂದ ಆರಂಭವಾಗಿ 28 ರವರೆಗೆ ನಡೆಯಲಿವೆ. ಮುಖ್ಯ ಪರೀಕ್ಷೆಗೆ ಹಾಜರಾಗದವರು ಈ ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆದರೆ ಅವರನ್ನು ಪ್ರಥಮ ಎಂದು ಪರಿಗಣಿಸಲಾಗುತ್ತದೆ.
ವೇಳಾಪಟ್ಟಿ ಹೀಗಿದೆ:
- ಸೆ.21 : ಗಣಿತ ಮತ್ತು ಸಮಾಜ
- ಸೆ.22 : ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲfಷ್, ಸಂಸ್ಕೃತ (ಪ್ರಥಮ ಭಾಷೆ)
- ಸೆ.23 : ಸಮಾಜ ವಿಜ್ಞಾನ
- ಸೆ.24 : ಇಂಗ್ಲಿಷ್, ಕನ್ನಡ (ದ್ವಿತೀಯ ಭಾಷೆ)
- ಸೆ.25 : ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪಾರ್ಸಿ, ಉರ್ದು, ಸಂಸ್ಕೃತ, ಕೊಂಕಣಿ, ತುಳು (ತೃತೀಯ ಭಾಷೆ)
- ಸೆ.26: ಅರ್ಥಶಾಸ್ತ್ರ
- ಸೆ.28 : ವಿಜ್ಞಾನ