ಬೆಂಗಳೂರು: ಕೊರೊನಾ ತೀವ್ರತೆ ಹಿನ್ನೆಲೆ ಎಸ್ಎಸ್ಎಲ್ಸಿ(SSLC) ಪರೀಕ್ಷೆ ಬರೆಯಲು ಹಲವಾರು ವಿದ್ಯಾರ್ಥಿಗಳು ಹಿಂದೇಟು ಹಾಕಿದ್ದರು. ಹೀಗಾಗಿ ಮತ್ತೆ ಪರೀಕ್ಷೆ ಬರೆಯಲು ಇಲಾಖೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಅದರಂತೆ ಸೆಪ್ಟೆಂಬರ್ 27-29 ರಂದು ರಾಜ್ಯಾದ್ಯಂತ 352 ಪರೀಕ್ಷಾ ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಡೆಸಲಾಗಿತ್ತು.
ಹೊಸ ಹಾಗು ಖಾಸಗಿ ವಿದ್ಯಾರ್ಥಿಗಳು ಎಲ್ಲ ಸೇರಿ ಒಟ್ಟು 53,125 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಕೇವಲ 11 ದಿನದಲ್ಲಿಯೇ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಫಲಿತಾಂಶವನ್ನ ಇಲಾಖೆ ಇಂದು ಪ್ರಕಟಿಸುತ್ತಿದೆ.
ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆ:
ಈ ಹಿಂದೆ ನಡೆಸಿದ್ದಂತೆ MCQ (Multiple Choice Question) ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆಯನ್ನು ನಡೆಸಲಾಗಿದೆ. ಪ್ರತಿ ವಿಷಯಕ್ಕೆ ಗರಿಷ್ಠ 40 ಅಂಕಗಳಿಗೆ ಸೀಮಿತಗೊಳಿಸಿ, ಒಟ್ಟು 03 ಕೋರ್ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆ ಪತ್ರಿಕೆ (ಪತ್ರಿಕೆ-1), ಭಾಷಾ ವಿಷಯಗಳನ್ನ ಒಳಗೊಂಡ ಪತ್ರಿಕೆ-2 ಪರೀಕ್ಷೆ ನಡೆದಿದೆ. ಪರೀಕ್ಷೆ ಬರೆದವರನ್ನ ಫ್ರೆಶರ್ಸ್ ಎಂದೇ ಪರಿಗಣಿಸಲಾಗುತ್ತದೆ.
ಈ ವೆಬ್ನಲ್ಲಿ ಫಲಿತಾಂಶ ಲಭ್ಯ:
ಪರೀಕ್ಷೆಯ ಫಲಿತಾಂಶ https://Sslc.Karnataka.gov.in ಹಾಗೂ www.karresults.nic.in ನಲ್ಲಿ ಲಭ್ಯವಾಗಲಿದೆ. ಹಾಗೇ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಫಲಿತಾಂಶ ದೊರೆಯಲಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಮುಕ್ತಾಯ