ETV Bharat / city

ದಿಶಾ ರವಿ ಬಂಧನ ಪ್ರಕರಣವನ್ನು ದೆಹಲಿ ಪೊಲೀಸರು ನ್ಯಾಯಸಮ್ಮತವಾಗಿ ನಡೆಸಲಿ; ಎಸ್.ಆರ್. ಪಾಟೀಲ್ - ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್

ದಿಶಾ ರವಿ ಬಂಧನ ಪ್ರಕರಣವನ್ನು ದೆಹಲಿ ಪೊಲೀಸರು ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕು. ನಿಜವಾಗಿಯೂ ಆಕೆ ಖಲಿಸ್ತಾನಿ ಗುಂಪುಗಳ ಜತೆ ಸೇರಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಆದರೆ, ರೈತರಿಗೆ ಬೆಂಬಲ ಕೊಟ್ಟಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ದಿಶಾ ರವಿ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಸಿಲುಕಿಸಬಾರದು ಎಂದು ಎಸ್ ಆರ್​ ಪಾಟೀಲ್ ಆಗ್ರಹಿಸಿದ್ದಾರೆ.

SR Patil
ಎಸ್.ಆರ್. ಪಾಟೀಲ್
author img

By

Published : Feb 16, 2021, 11:51 AM IST

ಬೆಂಗಳೂರು: ದಿಶಾ ರವಿ ಬಂಧನ ಪ್ರಕರಣವನ್ನು ದೆಹಲಿ ಪೊಲೀಸರು ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕು. ನಿಜವಾಗಿಯೂ ಆಕೆ ಖಲಿಸ್ತಾನಿ ಗುಂಪುಗಳ ಜತೆ ಸೇರಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ದಿಶಾ ರವಿ ಬಂಧನ ಪ್ರಕರಣವನ್ನು ದೆಹಲಿ ಪೊಲೀಸರು ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕು. ನಿಜವಾಗಿಯೂ ಆಕೆ ಖಲಿಸ್ತಾನಿ ಗುಂಪುಗಳ ಜತೆ ಸೇರಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಆದರೆ ರೈತರಿಗೆ ಬೆಂಬಲ ಕೊಟ್ಟಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ದಿಶಾ ರವಿ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಸಿಲುಕಿಸಬಾರದು. #DishaRaviArrested

    — S R Patil (@srpatilbagalkot) February 15, 2021 " class="align-text-top noRightClick twitterSection" data=" ">

ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ದೆಹಲಿ ಪೊಲೀಸರು ಆದಷ್ಟು ಬೇಗ ದಿಶಾ ರವಿ ಬಂಧನದ ಕೇಸ್​ನ ತನಿಖೆ ಮುಗಿಸಿ, ಆಕೆಗೆ ಖಲಿಸ್ತಾನಿ ಹೋರಾಟಗಾರರ ಜತೆ ಯಾವುದೇ ಸಂಪರ್ಕ ಇರದಿದ್ದರೆ ಆಕೆಯನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ರೈತ ಹೋರಾಟದ ಬೆಂಬಲಕ್ಕೆ ನಿಂತ ಯಾರನ್ನೂ ದುರುದ್ದೇಶದಿಂದ ಟಾರ್ಗೆಟ್ ಮಾಡಬಾರದು ಎಂದರು.

ದಿಶಾ ರವಿ ಬಂಧನ ಪ್ರಕರಣವನ್ನು ದೆಹಲಿ ಪೊಲೀಸರು ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕು. ನಿಜವಾಗಿಯೂ ಆಕೆ ಖಲಿಸ್ತಾನಿ ಗುಂಪುಗಳ ಜತೆ ಸೇರಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಆದರೆ ರೈತರಿಗೆ ಬೆಂಬಲ ಕೊಟ್ಟಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ದಿಶಾ ರವಿ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಸಿಲುಕಿಸಬಾರದು. ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಕ್ಕೆ ಬೆಂಗಳೂರಿನ ದಿಶಾ ರವಿ ಎಂಬ ಪರಿಸರ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಬಂಧಿಸಿ ಆಕೆಯ ಮೇಲೆ ದೇಶದ್ರೋಹದ ಕೇಸ್ ಹಾಕಿದ್ದಾರೆ. ಈ ಬೆಳವಣಿಗೆ ಜನಸಮೂಹದಲ್ಲಿ ಸಂಶಯ ಬರುವಂತಾಗಿದೆ. ದುರುದ್ದೇಶದಿಂದ ದೇಶದ್ರೋಹದ ಕೇಸ್​ನಲ್ಲಿ ಆಕೆಯನ್ನು ಸಿಲುಕಿಸುವ ಪ್ರಯತ್ನವನ್ನು ಪೊಲೀಸರು ಮಾಡಬಾರದು ಎಂದು ಹೇಳಿದ್ದಾರೆ.

  • ಇವತ್ತಿನ ಪೆಟ್ರೋಲ್ ಬೆಲೆ ಲೀಟರ್ ಗೆ 91.70 ರೂ, ಡೀಸಲ್ ಬೆಲೆ 83.81 ರೂ. ಕೇಂದ್ರ ಸರ್ಕಾರ ನಿರಂತರವಾಗಿ ತೈಲ ದರವನ್ನು ಹೆಚ್ಚಿಸುತ್ತಲೇ ಇದೆ. ನರೇಂದ್ರ ಮೋದಿಯವರೇ ದೇಶದ ಜನರನ್ನು ಶತೃಗಳಂತೆ ನೋಡಬೇಡಿ, ಬಡವರ ಬದುಕು ಮೂರಾಬಟ್ಟೆಯಾಗುವ ಮೊದಲು ಬೆಲೆ ಇಳಿಸಿ. ೨/೨

ಬೆಲೆ ಏರಿಕೆ:

ಇಂಧನ ಬೆಲೆ ಏರಿಕೆ ಖಂಡಿಸಿರುವ ಅವರು, ಇವತ್ತಿನ ಪೆಟ್ರೋಲ್ ಬೆಲೆ ಲೀಟರ್ ಗೆ 91.70 ರೂ, ಡೀಸೆಲ್ ಬೆಲೆ 83.81 ರೂ. ಕೇಂದ್ರ ಸರ್ಕಾರ ನಿರಂತರವಾಗಿ ತೈಲ ದರವನ್ನು ಹೆಚ್ಚಿಸುತ್ತಲೇ ಇದೆ. ನರೇಂದ್ರ ಮೋದಿಯವರೇ ದೇಶದ ಜನರನ್ನು ಶತ್ರುಗಳಂತೆ ನೋಡಬೇಡಿ. ಬಡವರ ಬದುಕು ಮೂರಾಬಟ್ಟೆಯಾಗುವ ಮೊದಲು ಬೆಲೆ ಇಳಿಸಿ ಎಂದಿದ್ದಾರೆ.

  • ಯುಪಿಎ ಸರ್ಕಾರವಿದ್ದಾಗ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ 400 ರೂಪಾಯಿಯ ಆಸುಪಾಸಿನಲ್ಲಿತ್ತು. ಈಗ ಮೋದಿ ಸರ್ಕಾರದ ಅವಧಿಯಲ್ಲಿ 772 ರೂಪಾಯಿಗೆ ಏರಿಕೆಯಾಗಿದೆ.6 ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯನ್ನು ಎರಡು ಪಟ್ಟು ಏರಿಕೆ ಮಾಡಿ ತಮ್ಮ ಸರ್ಕಾರ ಶ್ರೀಮಂತರಿಗೆ ಮಾತ್ರ ಅನ್ನೋದನ್ನು ತೋರಿಸಿದ್ದಾರೆ @PMOIndia

ಅಡುಗೆ ಅನಿಲ

ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿರುವ ಪಾಟೀಲರು, ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಮತ್ತೆ 50 ರೂಪಾಯಿ ಹೆಚ್ಚಿಸಿದೆ. ನವೆಂಬರ್​ನಲ್ಲಿ 597 ರೂಪಾಯಿ ಇದ್ದ ಸಿಲಿಂಡರ್ 772 ರೂಪಾಯಿಗೆ ಬಂದು ನಿಂತಿದೆ. ಇದು 1 ಸಾವಿರ ರೂಪಾಯಿಗೆ ಮುಟ್ಟಿದರೂ ಅಶ್ಚರ್ಯವೇನಿಲ್ಲ. ಯಾಕಂದ್ರೆ ನರೇಂದ್ರ ಮೋದಿ ಅವರದ್ದು ಅಚ್ಛೇ ದಿನ್ ಸರ್ಕಾರ. ಗೃಹ ಬಳಕೆ ಗ್ಯಾಸ್ ಸಿಲಿಂಡರ್​ಗೆ ಸಬ್ಸಿಡಿ ಕೊಡುತ್ತಿದ್ದ ಸರ್ಕಾರ ಈಗ ಅದನ್ನೂ ಕಿತ್ತುಕೊಂಡಿದೆ. ಬಡವರ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ಹಣ ಹಾಕ್ತೀವಿ ಅಂತ ಒಂದಷ್ಚು ದಿನ ನಾಟಕ ಮಾಡಿ ಈಗ ಬಡವರನ್ನೇ ಸುಲಿಗೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಇದೇನಾ ನೀವು ಹೇಳಿದ್ದ ಅಚ್ಛೇ ದಿನ್..? ಎಂದು ಕೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.