ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸಜಾಬಂಧಿಗಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಿದ ಆರೋಪವೂ ಕೇಳಿ ಬಂದಿದೆ.
ಜೈಲಿನ ಮಾನ್ಯೂವೆಲ್ ಪ್ರಕಾರ ಸಜಾಬಂಧಿಗಳಿಗೆ ಇಂತಿಷ್ಟೇ ಪ್ರಮಾಣದಲ್ಲಿ ಆಹಾರ ಪದಾರ್ಥ ಬಳಸಿ ಅಡುಗೆ ತಯಾರಿಸಬೇಕು. ಆದರೆ, ಆಹಾರ ಸಾಮಗ್ರಿ ಹಾಗೂ ಉಪಯೋಗಿಸುವ ಪದಾರ್ಥಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ.
ಇದಕ್ಕೆ ಪೂರಕವಾಗಿ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಿಬ್ಬಂದಿಯೇ ಆಹಾರ ಪದಾರ್ಥ ಮಾರಾಟ ಬಗ್ಗೆ ಸಜಾಬಂಧಿ ಬಳಿ ಹಣ ಕೊಡುವಂತೆ ಮಾತುಗಳು ಆಡಿದ್ದಾರೆ.
ಈ ಬಗ್ಗೆ ಕಾರಾಗೃಹಗಳ ಡಿಜಿಪಿ ಅಲೋಕ್ ಮೋಹನ್ ಪ್ರತಿಕಿಯಿಸಿ, ವೈರಲ್ ವಿಡಿಯೋ ವಿಚಾರವಾಗಿ ಗೃಹ ಸಚಿವರು ಈಗಾಗಲೇ ತನಿಖೆಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ಮಾಡಲಾಗುವುದು.
ಈ ಹಿಂದೆಯೂ ಸಹ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಈಗಲೂ ಯಾರು ತಪ್ಪಿತಸ್ಥರು ಇದ್ದಾರೋ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕ
ಕೇವಲ ಕೈದಿಗಳ ವಿರುದ್ಧ ಮಾತ್ರವಲ್ಲದೆ ಇದರಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೂ ಕೇಸ್ ಹಾಕಲಾಗುವುದು. ಜೈಲಿನ ಮ್ಯಾನುಯಲ್ ಬದಲಾವಣೆಗೂ ತಯಾರಿ ನಡೆಯುತ್ತಿದ್ದೂ, ಅದಷ್ಟೂ ಬೇಗ ಮ್ಯಾನುಯಲ್ ಬದಲಾವಣೆ ಮಾಡಲಾಗುವುದು.
ವಿಡಿಯೋದಲ್ಲಿ ಕೆಲವು ಅಧಿಕಾರಗಳ ಮೇಲೆ ಆರೋಪ ಮಾಡಲಾಗಿದೆ. ಎಲ್ಲರ ಪಾತ್ರದ ಬಗ್ಗೆಯೂ ವಿಚಾರಣೆ ಮಾಡಲಾಗುತ್ತೆ ಎಂದಿದ್ದಾರೆ. ಈ ಹಿಂದೆ ತಮಿಳುನಾಡಿನ ವಿ.ಶಶಿಕಲಾ ಅವರಿಗೂ ಜೈಲಿನಲ್ಲಿದ್ದಾಗ ರಾಜಾತಿಥ್ಯ ನೀಡಲಾಗಿತ್ತು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ