ETV Bharat / city

ಧ್ವನಿ ಮತದ ಮೂಲಕ ವಿಶ್ವಾಸಮತಯಾಚನೆಗೆ ವಿಧಾನಸಭೆಯಲ್ಲಿ ಸಮ್ಮತಿ!! - trust vote

ಪಿಪಿಇ ಕಿಟ್ ಹಾಕಿಕೊಂಡು ಸೋಂಕಿತ ಸದಸ್ಯರು ಸದನಕ್ಕೆ ಬರುವುದು ಬೇಡ. ಸಾಮಾಜಿಕ ಜವಾಬ್ದಾರಿ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಹಠ ಹಿಡಿಯುವುದಿಲ್ಲ. ಮನುಷ್ಯತ್ವ ಮುಖ್ಯ ಎಂದ ಸಿದ್ದರಾಮಯ್ಯ, ನಿಯಮ 69ರಡಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಬಗ್ಗೆ ನೋಟಿಸ್ ವಿಚಾರವನ್ನು ಸಹ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲೇ ಚರ್ಚೆ ಮಾಡಲಾಗುವುದು, ಇದು ಆತುರವಾಗಿ ಮಾಡುವುದಲ್ಲ..

Vidhana Sabha
ವಿಧಾನಸಭೆ
author img

By

Published : Sep 26, 2020, 3:45 PM IST

ಬೆಂಗಳೂರು : ಕೊರೊನಾ ಸೋಂಕಿತ ಶಾಸಕರನ್ನು ಸದನಕ್ಕೆ ಕರೆಸಲು ಸಾಧ್ಯವಿಲ್ಲ. ಆದರೆ, ವಿಶ್ವಾಸಮತಯಾಚನೆಗೆ ಎಲ್ಲ ಸದಸ್ಯರ ಸಹಕಾರ ಅಗತ್ಯವೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾವದ ಚರ್ಚೆ ಸಂದರ್ಭದಲ್ಲಿ ಹೇಳಿದರು.

ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾವದ ಚರ್ಚೆಯ ನಂತರ ಧ್ವನಿ ಮತದ ಮೂಲಕ ವಿಶ್ವಾಸಮತಕ್ಕೆ ಅವಕಾಶ ಮಾಡಿಕೊಡುವ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಮತ ವಿಭಜನೆ ಮಾಡುವ ಬದಲು ಧ್ವನಿ ಮತದ ಮೂಲಕ ನಿಷ್ಪಕ್ಷಪಾತ ತೀರ್ಮಾನ ಮಾಡಲು ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರನ್ನು ಸದನ ಕೋರಿದೆ.

ಇದಕ್ಕೂ ಮುನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸದನದ ಕಾರ್ಯಕಲಾಪಗಳ ತೀರ್ಮಾನದಂತೆ ಅಧಿವೇಶನದ ಕೊನೆಯ ದಿನ ನಾಲ್ಕು ಪ್ರಮುಖ ವಿಧೇಯಕಗಳ ಚರ್ಚೆಯಾಗಿ ಅಂಗೀಕಾರವಾಗಬೇಕಿದೆ. ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಚಾರಗಳಿವೆ, ಗಮನ ಸೆಳೆಯುವ ಸೂಚನೆಗಳಿವೆ. ಅಲ್ಲದೇ ಕೋವಿಡ್​ ಪಾಸಿಟಿವ್ ಬಂದವರಿಗೆ ಸದನ ಪ್ರವೇಶಿಸಲು ಅವಕಾಶವಿಲ್ಲ. ಪಿಪಿಇ ಕಿಟ್ ಹಾಕಿಕೊಂಡು ಬರುವ ಮಾಹಿತಿ ಇದೆ. ಅದಕ್ಕೂ ಅವಕಾಶವಿಲ್ಲ. 25ಕ್ಕೂ ಹೆಚ್ಚು ಶಾಸಕರು, 6-7 ಸಚಿವರಿಗೆ ಸೋಂಕು ತಗುಲಿದೆ. ಸಾಮಾಜಿಕ ಜವಾಬ್ದಾರಿ ಇದೆ. ಸದನದ ಘನತೆ, ಗೌರವ ಹೆಚ್ಚಿಸುವ ರೀತಿ ತೀರ್ಮಾನವಾಗಬೇಕು ಎಂದು ಕೋರಿದರು.

ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮಾತನಾಡಿ, ನಾವು ನಮ್ಮ ಸಂಖ್ಯೆಯನ್ನು ಸದನದಲ್ಲಿ ನಿರೂಪಿಸಬೇಕು. ಕೊರೊನಾ ಪಾಸಿಟಿವ್ ಬಂದ ಸದಸ್ಯರು ಪಿಪಿಇ ಕಿಟ್ ಹಾಕಿಸಿಕೊಂಡು ಸದನಕ್ಕೆ ಬರಲಾಗದು ಎಂದು ಹೇಳಿದ್ದೀರಿ, ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಾಗಲಿ. ಚರ್ಚೆ ನಂತರ ಮತ ವಿಭಜನೆ ಮಾಡದೇ ಧ್ವನಿ ಮತದ ಆಧಾರದ ಮೇಲೆ ನಿರ್ಧಾರ ಮಾಡಬಹುದು. ಇಲ್ಲದಿದ್ದರೆ ಸದಸ್ಯರನ್ನು ಕರೆಸುವ ತೀರ್ಮಾನ ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಹಲವು ಸಚಿವರು, ಶಾಸಕರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಈಗಾಗಲೇ ಈ ಸದನದ ಒಬ್ಬರು ಸದಸ್ಯರು, ಲೋಕಸಭೆಯ ಹಾಗೂ ರಾಜ್ಯಸಭೆಯ ಇಬ್ಬರು ಸದಸ್ಯರು ನಿಧನರಾಗಿದ್ದಾರೆ. ನಮಗೂ ಸಾಮಾಜಿಕ ಜವಾಬ್ದಾರಿ ಇದೆ. ಅವಿಶ್ವಾಸ ನಿರ್ಣಯದ ಚರ್ಚೆ ನಡೆಯಲಿ. ಈ ಹಿಂದೆಯೂ ಮತ ವಿಭಜನೆ ನಡೆದಿದೆ.

ಒಮ್ಮೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಅವಿಶ್ವಾಸ ನಿರ್ಣಯ ಮಂಡಿಸಿದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ವಿಶ್ವಾಸ ಮತಯಾಚನೆ ಮಾಡಿದ್ದಾರೆ. ಈಗ ನಾವು ಅವಿಶ್ವಾಸ ನಿರ್ಣಯವನ್ನು ಸರ್ಕಾರದ ವಿರುದ್ಧ ತಂದಿದ್ದೇವೆ. ಮಾನವೀಯತೆಯಿಂದ ಮತ ವಿಭಜನೆ ಬದಲು ಧ್ವನಿ ಮತದ ಮೂಲಕ ನಿಷ್ಪಕ್ಷಪಾತವಾಗಿ ನಿರ್ಧಾರ ಮಾಡಿ ಎಂದು ಮನವಿ ಮಾಡಿದರು.

ಪಿಪಿಇ ಕಿಟ್ ಹಾಕಿಕೊಂಡು ಸೋಂಕಿತ ಸದಸ್ಯರು ಸದನಕ್ಕೆ ಬರುವುದು ಬೇಡ. ಸಾಮಾಜಿಕ ಜವಾಬ್ದಾರಿ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಹಠ ಹಿಡಿಯುವುದಿಲ್ಲ. ಮನುಷ್ಯತ್ವ ಮುಖ್ಯ ಎಂದ ಸಿದ್ದರಾಮಯ್ಯ, ನಿಯಮ 69ರಡಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಬಗ್ಗೆ ನೋಟಿಸ್ ವಿಚಾರವನ್ನು ಸಹ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲೇ ಚರ್ಚೆ ಮಾಡಲಾಗುವುದು, ಇದು ಆತುರವಾಗಿ ಮಾಡುವುದಲ್ಲ. ಆರು ತಿಂಗಳಿಗೊಮ್ಮೆ ಸಿಗುವ ಅವಕಾಶ ಹೆಚ್ಚಾಗಿದೆ ಎಂದರು.

ನಿನ್ನೆ ಸಿಎಂ ಯಡಿಯೂರಪ್ಪನವರು ಅವಿಶ್ವಾಸ ನಿರ್ಣಯ ಮಂಡನೆಯಿಂದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಈಗ ಅವಿಶ್ವಾಸ ನಿರ್ಣಯ ತರಲಾಗಿದೆ ಎಂದು ಇದೇ ವೇಳೆ ಹಾಸ್ಯ ಚಟಾಕಿ ಹಾರಿಸಿದರು. ನಂತರ ಸ್ಪೀಕರ್ ಮಾತನಾಡಿ, ಆಡಳಿತ- ಪ್ರತಿಪಕ್ಷ ನಿರ್ಧಾರ ಸಂಸದೀಯ ಪ್ರಬುದ್ಧತೆಯ ನಿದರ್ಶನವಾಗಿದೆ. ಮಾನವೀಯತೆ ಸಾಮಾಜಿಕ ಜವಾಬ್ದಾರಿ ಮುಖ್ಯ ಎಂಬುದನ್ನು ತೋರಿಸಿದಂತಾಗಿದೆ. ರಾಜ್ಯದ ಹಿತ ಕಾಪಾಡಲು ಇದರಿಂದ ಸಾಧ್ಯ. ರಾಜಕಾರಣ ಇದ್ದೇ ಇರುತ್ತದೆ. ರಾಜಕೀಯಕ್ಕಿಂತ ರಾಜ್ಯದ ಹಿತವೇ ಮುಖ್ಯ ಎಂದ ಸ್ಪೀಕರ್‌, ಸದಸ್ಯರ ಒಮ್ಮತಕ್ಕೆ ಅಭಿನಂದಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.