ಬೆಂಗಳೂರು: ಸಾಮ್ರಾಟ್ ಜ್ಯುವೆಲ್ಲರ್ಸ್ ದರೋಡೆ ಯತ್ನ ಪ್ರಕರಣ ಸಂಬಂಧ ವೈಯಾಲಿಕಾವಲ್ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಚಿನ್ನದ ವ್ಯಾಪಾರಿ ಶಂಕರ್ ಎಂಬಾತ ಬಂಧಿತ ಆರೋಪಿ.
ಚಿಕ್ಕಪೇಟೆ ನಿವಾಸಿಯಾಗಿರುವ ಶಂಕರ್, ಸಾಮ್ರಾಟ್ ಜ್ಯುವೆಲ್ಲರ್ಸ್ ದರೋಡೆ ಯತ್ನ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಬಾಲಾಜಿ ಗಾಯಕ್ವಾಡ್ ಸಂಬಂಧಿಯಾಗಿದ್ದಾನೆ. ವ್ಯಾಪಾರದಲ್ಲಿ ಶಂಕರ್ಗೆ ನಷ್ಟವಾಗಿದ್ದರಿಂದ ಸಾಲ ಜಾಸ್ತಿಯಾಗಿತ್ತು. ಹೇಗಾದರೂ ಹಣ ಸಂಪಾದನೆಗಾಗಿ ಡರೋಡೆಗೆ ಪ್ಲ್ಯಾನ್ ರೂಪಿಸಿದ್ದ. ಇದಕ್ಕೆ ಪರಿಚಿತ ಪ್ರಹ್ಲಾದ್ ಚೌಧರಿ ಕೈ ಜೋಡಿಸಿದ್ದ. ಈ ಇಬ್ಬರು ದರೋಡೆ ಯಶಸ್ಸುಗೊಳಿಸುವ ಜವಾಬ್ದಾರಿಯನ್ನು ಆರೋಪಿ ಬಾಲಾಜಿ ಗಾಯಕ್ವಾಡ್ಗೆ ವಹಿಸಿದ್ದರು.
ಈ ಹಿಂದೆ ಬಾಲಾಜಿ ಮಹಾರಾಷ್ಟ್ರದ ಸತಾರ್‌ದಲ್ಲಿಯೂ 20 ಲಕ್ಷ ದರೋಡೆ ಪ್ರಕರಣದಲ್ಲಿ ತಪ್ಪಿಸಿಕೊಂಡು, ಬೆಂಗಳೂರಿನಲ್ಲಿ ಅವಿತುಕೊಂಡಿದ್ದ. ಸದ್ಯ ಸಾಮ್ರಾಟ್ ಜುವೆಲ್ಲರಿ ದರೋಡೆ ಯತ್ನ ಪ್ರಕರಣದಲ್ಲಿ ಶಂಕರ್ ಸೇರಿ ಈವರೆಗೂ ಬಾಲಾಜಿ ಗಾಯಕ್ವಾಡ್, ಜೆ.ಬಲವಾನ್ ಸಿಂಗ್, ಶ್ರೀರಾಮ್ ಬಿಷ್ನೋಯಿ, ಜೆ. ಓಂಪ್ರಕಾಶ್ ಸಿಂಗ್, ಪ್ರಹ್ಲಾದ್ ಚೌಧರಿ ಆರು ಆರೋಪಿಗಳನ್ನು ಬಂಧಿಸಲಾಗಿದೆ.