ಬೆಂಗಳೂರು: ಉಪಚುನಾವಣೆ ಟಿಕೆಟ್ ಸಂಬಂಧ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಒಂದಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಹೇಳಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಮುಖಂಡರ ಜೊತೆ ನಿನ್ನೆ ಸಭೆ ನಡೆಸಿದ್ದೇವೆ. ಶ್ರೀನಿವಾಸ್ ಮಾನೆ, ಮನೋಹರ ತಹಶೀಲ್ದಾರ್ ಇಬ್ಬರ ಜೊತೆಯೂ ಮಾತುಕತೆ ನಡೆಸಿದ್ದೇವೆ. ನಾವು ಯಾರಿಗೆ ಟಿಕೆಟ್ ಅಂತಾ ಘೋಷಣೆ ಮಾಡಿಲ್ಲ. ಶ್ರೀನಿವಾಸ್ ಮಾನೆಗೆ ಟಿಕೆಟ್ ಸಿಕ್ಕರೆ, ಮನೋಹರ ತಹಶೀಲ್ದಾರ್ ಅವರು ಮಾನೆ ಪರ ಕೆಲಸ ಮಾಡಬೇಕು. ತಹಶೀಲ್ದಾರ್ಗೆ ಟಿಕೆಟ್ ಸಿಕ್ಕರೆ ಶ್ರೀನಿವಾಸ್ ಮಾನೆ ಬೆಂಬಲಿಸಬೇಕು. ಈ ಸಂಧಾನಕ್ಕೆ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ ಎಂದರು.
ಸಿಂದಗಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇವತ್ತು ಕೆಪಿಸಿಸಿಯಲ್ಲಿ ಮೀಟಿಂಗ್ ಇದೆ. ಅಲ್ಲಿ ಒಮ್ಮತದ ನಿರ್ಧಾರ ಮಾಡುತ್ತೇವೆ ಎಂದರು. ಸುಣಗಾರ ಟಿಕೆಟ್ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸುಣಗಾರ ಸೀನಿಯರ್ ಲೀಡರ್. ಹನ್ನೆರಡು ವರ್ಷ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರು ಕೂಡ ಟಿಕೆಟ್ ಆಕಾಂಕ್ಷಿ. ಅವರ ಜೊತೆ ನಾನು ಮಾತನಾಡಿದ್ದೇನೆ. ಹಾಗಾಗಿ ಇವತ್ತಿನ ಮೀಟಿಂಗ್ನಲ್ಲಿ ನಿರ್ಧಾರವಾಗುತ್ತದೆ ಎಂದರು.
ಇದನ್ನೂ ಓದಿ: ದಸರಾ ವೆಬ್ಸೈಟ್ಗೆ ಚಾಲನೆ ನೀಡಿದ ಸಚಿವ ಸೋಮಶೇಖರ್
ಸಿದ್ದರಾಮಯ್ಯ ಆರ್ಎಸ್ಎಸ್ ಸೇರುವಂತೆ ಸಚಿವ ಸೋಮಶೇಖರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸೋಮಶೇಖರ್ ಆರ್ಎಸ್ಎಸ್ ನಿಂದ ಬಂದವರಾ? ಅದಕ್ಕೆ ಹಂಗೆ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು. ಇನ್ನು ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ವಿಚಾರವಾಗಿ ಮಾತನಾಡಿ, ಐ ಡೋಂಟ್ ಅಪ್ರೂವ್ ದಟ್ ಅಟ್ಯಾಕ್ ಎಂದು ತಿಳಿಸಿದರು.