ETV Bharat / city

ಡಿಸೆಂಬರ್ 2023ಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್​ನಿಂದ ಸಸ್ಪೆಂಡ್ ಆಗ್ತಾರೆ: ಸಚಿವ ಮುನಿರತ್ನ ಭವಿಷ್ಯ - ಸಚಿವ ಮುನಿರತ್ನ ಪ್ರತಿಕ್ರಿಯೆ

ಆಗ ರಾಮಕೃಷ್ಣ ಹೆಗಡೆ ಇದ್ದ ಜಾಗದಲ್ಲಿ ಇಂದು ಸಿದ್ದರಾಮಯ್ಯ ಇದ್ದಾರೆ. ನೋಡ್ತಾ ಇರಿ, ಡಿಸೆಂಬರ್ 2023ಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್​ನಿಂದ ಸಸ್ಪೆಂಡ್ ಆಗ್ತಾರೆ ಎಂದು ಸಚಿವ ಮುನಿರತ್ನ ಹೇಳಿದರು.

Siddaramaiah suspending from Congress next year  Minister Munirathna news  Minister Munirathna reaction  Bengaluru news  ಮುಂದಿನ ವರ್ಷ ಕಾಂಗ್ರೆಸ್​ನಿಂದ ಸಿದ್ದರಾಮಯ್ಯ ಅಮಾನತು  ಸಚಿವ ಮುನಿರತ್ನ ಸುದ್ದಿ  ಸಚಿವ ಮುನಿರತ್ನ ಪ್ರತಿಕ್ರಿಯೆ  ಬೆಂಗಳೂರು ಸುದ್ದಿ
ಸಚಿವ ಮುನಿರತ್ನ ಹೇಳಿಕೆ
author img

By

Published : May 5, 2022, 1:42 PM IST

ಬೆಂಗಳೂರು: ಡಿಸೆಂಬರ್ 2023ರ ಒಳಗೆ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷದಿಂದ ಸಸ್ಪೆಂಡ್ ಮಾಡುತ್ತಾರೆ ಎಂದು ಸಚಿವ ಭವಿಷ್ಯ ನುಡಿದಿದ್ದಾರೆ. ವಿಕಾಸಸೌಧಲ್ಲಿ ಮಾತನಾಡಿದ ಅವರು, 1994 ರಲ್ಲಿ ರಾಮಕೃಷ್ಣ ಹೆಗಡೆಯವರು ಇದ್ದ ಜಾಗದಲ್ಲಿ ಇಂದು ಸಿದ್ದರಾಮಯ್ಯ ಇದ್ದಾರೆ. ಅಂದು ಹೆಗಡೆಯವರನ್ನು ಸಿಎಂ ಇಬ್ರಾಹಿಂ ಹೊರ ಹಾಕಿದ್ರು. ಈಗ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಇಂದ ಹೊರ ಹಾಕಲು ಸಂಚು ನಡೀತಿದೆ ಎಂದು ಸಚಿವ ಮುನಿರತ್ನ ಆರೋಪಿಸಿದರು.

2023 ರ ಒಳಗೆ ಸಿದ್ದರಾಮಯ್ಯರನ್ನು ಕಾಂಗ್ರೆಸ್​ನಿಂದ ಹೊರಹಾಕ್ತಾರೆ. ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಇರಲ್ಲ. ಹಿಂದೆ ರಾಮಕೃಷ್ಣ ಹೆಗಡೆಯವರಿಗೆ ಆಗಿದ್ದ ಸ್ಥಿತಿಯೇ ಸಿದ್ದರಾಮಯ್ಯ ಅವರಿಗೆ ಆಗುತ್ತಿದೆ. ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಹೋಗಿರುವುದೇ ಅದೇ ಕಾರಣಕ್ಕೆ. ಸಿದ್ದರಾಮಯ್ಯನನ್ನು 2023ಕ್ಕೆ ಪಾರ್ಟಿಯಿಂದಲೇ ಸಸ್ಪೆಂಡ್ ಮಾಡಿಸ್ತಾರೆ ನೋಡಿ ಎಂದರು.

ಓದಿ: ಯಾರ ಬಳಿ ಹೆಚ್ಚು ದುಡ್ಡಿದೆ ಅಂತಾ ರಾಜ್ಯದಲ್ಲಿನ ಗೋಡೆಗಳು ಹೇಳುತ್ತವೆ: ಡಿಕೆಶಿಗೆ ಸಚಿವ ಮುನಿರತ್ನ ಟಾಂಗ್

ಸಂಸದೆ ಸುಮಲತಾರನ್ನು ಬಿಜೆಪಿಗೆ ಕರೆ ತರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ಜನ ಏನು ಹೇಳ್ತಾರೆ ಅದನ್ನ ಮಾಡ್ತೇನೆಂದು‌ ಸುಮಲತಾ ಈಗಾಗಲೇ ಹೇಳಿದ್ದಾರೆ. ಹಾಗಾಗಿ ಅವರು ನಮ್ಮ ಪಕ್ಷಕ್ಕೆ ಬರಲು ರೆಡಿ ಆಗಿದ್ರೆ ನಾನು ನಾಳೆಯೇ ಬರಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.