ETV Bharat / city

ನೀರಾ ರುಚಿಗೆ ಮನಸೋತ ಸಿದ್ದರಾಮಯ್ಯ, ಉಗ್ರಪ್ಪ!

ಬಜೆಟ್ ಮುಕ್ತಾಯದ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀರಾ ಪಾನೀಯ ಸೇವಿಸುವ ಮೂಲಕ ಸಂತಸ ವ್ಯಕ್ತಪಡಿಸಿದ ಘಟನೆ ಸದನದ ಹೊರಭಾಗದಲ್ಲಿ ನಡೆದಿದೆ.

KN_BNG_09_SIDDARAMAIAH_NEERA_DRINK_SCRIPT_9021933
ವಿಧಾನಸೌಧದಲ್ಲಿ ನೀರಾ ಕಂಪು, ರುಚಿಗೆ ಮನಸೋತ ಸಿದ್ದರಾಮಯ್ಯ, ಉಗ್ರಪ್ಪ..!
author img

By

Published : Mar 5, 2020, 6:53 PM IST

ಬೆಂಗಳೂರು: ಬಜೆಟ್ ಮುಕ್ತಾಯದ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀರಾ ಪಾನೀಯ ಸೇವಿಸುವ ಮೂಲಕ ಸಂತಸ ವ್ಯಕ್ತಪಡಿಸಿದ ಘಟನೆ ಸದನದ ಹೊರಭಾಗದಲ್ಲಿ ನಡೆದಿದೆ.

ನೀರಾ ರುಚಿಗೆ ಮನಸೋತ ಸಿದ್ದರಾಮಯ್ಯ, ಉಗ್ರಪ್ಪ!

ನೀರಾ ಉತ್ಪಾದನೆಗೆ ಆದ್ಯತೆ ನೀಡಿರುವ ಸರ್ಕಾರ ಹಾಪ್‌ಕಾಮ್ಸ್ ಮೂಲಕ ನೀರಾ ಮಾರಾಟ ಮಾಡುತ್ತಿದ್ದು, ವಿಧಾನಸೌಧದಲ್ಲಿ ಮಾರಾಟ ಮಾಡುವ ಮೂಲಕ ನೀರಾ ಪೇಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಬಜೆಟ್ ಮಂಡ‌ನೆ ನಂತರ ಸದನದಿಂದ ಹೊರ ಬಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲಾಂಜ್ ಮುಂಭಾಗದಲ್ಲಿ ತೆರೆಯಲಾಗಿದ್ದ ನೀರಾ ಸ್ಟಾಲ್ ಬಳಿ ತೆರಳಿ ಅಧಿಕಾರಿಗಳ ಒತ್ತಾಯಕ್ಕೆ ಮಣಿದು ಗಂಟಲು ಕೆಟ್ಟಿದೆ ಕಣ್ರಯ್ಯ ಅನ್ನುತ್ತಲೇ ಒಂದು ಬಾಟಲ್ ನೀರಾ ಸೇವಿಸಿದರು. ಆರೋಗ್ಯಕ್ಕೆ‌ ಇದು ಒಳ್ಳೆಯದು ಸರ್ ಎಂದ ಅಧಿಕಾರಿ ಕಡೆ ತಿರುಗಿದ ಸಿದ್ದರಾಮಯ್ಯ, ಹೇ ನಾನೇ ಅಲ್ವೇನಯ್ಯ ಬಜೆಟ್​​ನಲ್ಲಿ ನೀರಾ ಬಗ್ಗೆ ಘೋಷಣೆ ಮಾಡಿದ್ದು ಎಂದರು.

ಅಷ್ಟರಲ್ಲಿ ಅಲ್ಲಿಗೆ‌ ಬಂದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಶುಗರ್ ಇರುವವರೂ ಇದನ್ನು ಕುಡಿಯಬಹುದಲ್ವೇನ್ರಪ್ಪ ಎನ್ನುತ್ತಾ ಒಂದು ಬಾಟಲ್ ನೀರಾ ಪೇಯ ಕೈಗೆತ್ತಿಕೊಂಡರು. ರಾಗಿ ಮುದ್ದೆಯಲ್ಲಿರುವ ಶುಗರ್​ಗೂ ಕಡಿಮೆ ಪ್ರಮಾಣದಲ್ಲಿ ಇರುತ್ತೆ ಎಂದು ಅಧಿಕಾರಿಗಳು‌ ಹೇಳುತ್ತಿದ್ದಂತೆ ನೀರಾ ಸೇವಿಸಿ ಬಾಟಲ್ ಖಾಲಿ ಮಾಡಿದರು. 240 ಎಂಎಲ್​​ನ ಒಂದು ಬಾಟಲ್ ನೀರಾಗೆ 50 ರೂ. ದರ ನಿಗದಿ ಪಡಿಸಿದ್ದು, ರಾಜಕಾರಣಿಗಳು, ಅಧಿಕಾರಿಗಳ ಜೊತೆಗೆ ಮಾರ್ಷಲ್​​ಗಳು ಕೂಡ ನೀರಾ ರುಚಿ ನೋಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.