ಬೆಂಗಳೂರು: ನಗರದ ಗವಿಪುರಂನಲ್ಲಿರೋ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆ ನಡೆಸಲಾಯ್ತು. ಇದಕ್ಕೆ ಸಾವಿರಾರು ಭಕ್ತಾರು ಸಾಕ್ಷಿಯಾಗಿದ್ದಾರೆ.
ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ತನ್ನ ಪಥ ಬದಲಾಯಿಸುವ ಪುಣ್ಯಕಾಲವಿದು. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಿನ್ನೆಲೆ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮಕರ ಸಂಕ್ರಾಂತಿ ಹಿನ್ನೆಲೆ ಬೆಳ್ಳಗ್ಗೆ 8 ಘಂಟೆ ನಂತರ ವಿಶೇಷ ಸಂಕ್ರಮಣ ಅಭಿಷೇಕ ಮಾಡಲಾಯಿತು. ಶಿವನಿಗೆ ಪುಷ್ಪಗಳಿಂದ ಅಲಂಕಾರ ಮಾಡಲಾಯ್ತು.
ಪ್ರತಿ ವರ್ಷ ಸೂರ್ಯ ರಶ್ಮಿ ಈಶ್ವರನ ಮೇಲೆ ಹಲವು ಸೆಕೆಂಡ್‌ಗಳು ಮಾತ್ರ ಇರುತ್ತಿತ್ತು. ಆದರೆ, ಕಳೆದ ಬಾರಿ 1 ನಿಮಿಷಕ್ಕೂ ಹೆಚ್ಚು ಕಾಲ ಸೂರ್ಯ ರಶ್ಮಿಯ ಸ್ಪರ್ಶ ಈಶ್ವರನಿಗೆ ಆಗಿತ್ತು. ಹಾಗಾಗಿ ಸಾಕಷ್ಟು ಅನಾಹುತಗಳನ್ನು ನಾವು ನೋಡಿದ್ದೇವೆ.
ಇಂದು ಸಂಜೆ 5:30 ರಿಂದ 5:37ರ ಸಮಯದಲ್ಲಿ ಎಷ್ಟು ನಿಮಿಷಗಳ ಕಾಲ ಸೂರ್ಯ ರಶ್ಮಿ ಅಭಿಷೇಕ ನಡೆಯುತ್ತೆ ಅನ್ನೋದನ್ನು ನೋಡಿ ಮುಂದಿನ ಭವಿಷ್ಯ ಹೇಳುತ್ತೇನೆ ಎಂದು ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪ್ರದಾನ ಅರ್ಚಕರಾದ ಸೋಮಸುಂದರ ದೀಕ್ಷಿತರು ತಿಳಿಸಿದರು.