ETV Bharat / city

ಆಯುಷ್ ಹಾಗೂ ಯುನಾನಿ ವೈದ್ಯರು, ನರ್ಸ್​​​​​ಗಳಿಗೆ ಸರ್ಕಾರದಿಂದ ಬಂಪರ್ ಉಡುಗೊರೆ

ಕೊರೊನಾ ನಿಯಂತ್ರಣದಲ್ಲಿ ತೊಡಗಿರುವ ಆಯುಷ್ ಹಾಗೂ ಯುನಾನಿ ವೈದ್ಯರ ಹಾಗೂ ನರ್ಸ್​​ಗಳ ಸಂಬಳ ಹೆಚ್ಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Dr K Sudhakar, Minister of Medical Education
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
author img

By

Published : Jul 21, 2020, 4:41 PM IST

ಬೆಂಗಳೂರು: ವೇತನ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಆಯುಷ್ ಹಾಗೂ ಯುನಾನಿ ವೈದ್ಯರ ಹಾಗೂ ನರ್ಸ್​​​ಗಳಿಗೆ ಬಂಪರ್ ಉಡುಗೊರೆ ನೀಡಿದೆ.

ವಿಧಾನಸೌಧದಲ್ಲಿ ಇಂದು ನಡೆದ ಸಭೆ ಬಳಿಕ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಆಯುಷ್ ಮತ್ತು ಯುನಾನಿ ವೈದ್ಯರ ತಿಂಗಳ ವೇತನವನ್ನು ₹48 ಸಾವಿರಕ್ಕೆ, ನರ್ಸ್​​ಗಳ ವೇತನವನ್ನು ₹30 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ಆಯುಷ್ ವೈದ್ಯರಿಗೆ ನೀಡಲಾಗುವ ವೇತನವನ್ನು ₹25 ರಿಂದ ₹48 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ತಾತ್ಕಾಲಿಕವಾಗಿ ಕಾರ್ಯನಿರ್ವಹಣೆಗೆ ನೇಮಿಸಿಕೊಳ್ಳುವ ಎಂಬಿಬಿಎಸ್ ವೈದ್ಯರಿಗೆ ₹80 ಸಾವಿರ ವೇತನ ನೀಡಲಾಗುವುದು. ಈವರೆಗೂ ₹15 ಸಾವಿರ ಪಡೆಯುತ್ತಿದ್ದ ನರ್ಸ್​​ಗಳು ಇನ್ಮುಂದೆ ₹30 ಸಾವಿರ ಪಡೆಯಲಿದ್ದಾರೆ. ಬಿಬಿಎಂಪಿ, ಆರೋಗ್ಯ, ಆಯುಷ್ ಎಲ್ಲಾ ನರ್ಸ್​​ಗಳಿಗೂ ಹೊಸ ವೇತನ ಅನ್ವಯವಾಗಲಿದೆ ಎಂದು ತಿಳಿಸಿದರು.

ದುಬಾರಿ ಹಣ ವಸೂಲಿ ಮಾಡಿದರೆ ಕ್ರಮ:

ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡಿದರೆ ಎನ್​​ಡಿಆರ್​​​ಎಫ್, ಕೆಪಿಎಂಇ, ಎಪಿಡಮಿಕ್ ಕಾಯ್ದೆಗಳಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಕರ್ನಾಟಕ ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ ಯೋಜನೆಯಡಿ ದರ ಪಡೆಯಬೇಕು. ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್​​ ಆಸ್ಪತ್ರೆ ಮಾಡಲು ನಿರ್ಣಯ ಮಾಡಲಾಗಿದೆ ಎಂದರು.

ಉನ್ನತಮಟ್ಟದ ಸಮಿತಿಗೆ:

ರೋಗಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲು ಇಲಾಖೆಯಿಂದ ಪ್ರಸ್ತಾವನೆ ಬಂದಿತ್ತು‌‌. ಈ ಪ್ರಸ್ತಾವನೆಯನ್ನು ಉನ್ನತ ಮಟ್ಟದ ಸಮಿತಿಗೆ ನೀಡಲಾಗಿದೆ. ಮುಂದಿನವಾರ ಸಮಿತಿ ವರದಿ ನೀಡಲಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.