ETV Bharat / city

ವಿಧಾನಸಭೆ ಕಲಾಪ: ಮೈಸೂರು ಹಿಂದಿನ ಡಿಸಿ ವಿರುದ್ಧ ಸಾ.ರಾ.ಮಹೇಶ್‌ ರೋಷಾವೇಶ! - ವಿಧಾನಸಭೆ ಅಧಿವೇಶನ ನೇರ ಪ್ರಸಾರ

ಮೈಸೂರಿನ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ತಮ್ಮ ಅಧಿಕಾರಿವನ್ನು ಮೊಟಕುಗೊಳಿಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌ ವಿಧಾನಸಭೆ ಕಲಾಪದಲ್ಲಿಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

sa ra mahesh talking in assembly session
ವಿಧಾನಸಭೆ ಕಲಾಪ: ಮೈಸೂರು ಹಿಂದಿನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್‌ ರೋಷಾವೇಶ
author img

By

Published : Sep 21, 2021, 2:09 PM IST

Updated : Sep 21, 2021, 3:30 PM IST

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಇಂದು ಸಾ ರಾ ಮಹೇಶ್​ ಮೈಸೂರಿನ ಹಿಂದಿನ ಡಿಸಿ ವಿರುದ್ಧ ಹಕ್ಕುಚ್ಯುತಿಯ ಪ್ರಸ್ತಾಪ ಮಾಡಿ, ಕ್ರಮಕ್ಕೆ ಒತ್ತಾಯಿಸಿದರು. ಸರ್ಕಾರದ ಪರ ಸಾ ರಾ ಮಹೇಶ್‌ ಪ್ರಸ್ತಾಪಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಐಎಎಸ್ ಅಧಿಕಾರಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವಿಧಾನಸಭೆ ಕಲಾಪ: ಮೈಸೂರು ಹಿಂದಿನ ಡಿಸಿ ವಿರುದ್ಧ ಸಾ.ರಾ.ಮಹೇಶ್‌ ರೋಷಾವೇಶ

ವಿಧಾನಸಭೆಯಲ್ಲಿ ಸಾ.ರಾ.ಮಹೇಶ್ ಹಕ್ಕುಚ್ಯುತಿಯ ಬಗ್ಗೆ ವಿವರಣೆ ನೀಡುತ್ತಾ, ನಾನು ಒಂದು ಬಾರಿ ಬಿಟ್ಟರೆ, ಯಾವ ಅಧಿಕಾರಿಯ ವಿರುದ್ಧವೂ ಮಾತನಾಡಿಲ್ಲ. 15ನೇ ಹಣಕಾಸು ಯೋಜನೆಯಡಿ ನೀವು ಹಣ ಬಿಡುಗಡೆ ಮಾಡಿದ್ದೀರ. ಪುರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನ‌ ಮಾಡಿ. ಹಿಂದಿನ ಡಿಸಿಗೆ ಕ್ರಿಯಾ ಯೋಜನೆ ಸಲ್ಲಿಸಿದ್ದೇವೆ. ಆದರೆ ಅವರು ಅನುಮೋದನೆ ಕೊಟ್ಟಿಲ್ಲ. ಅದನ್ನು ಒಪ್ಪಿಲ್ಲ ಅಂದರೆ ವಾಪಸ್​ ಕಳುಹಿಸಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ಮೈಸೂರನ್ನು ಪ್ಲಾಸ್ಟಿಕ್ ರಹಿತ ಮಾಡಬೇಕು ಅಂಥ ಬ್ಯಾಗ್ ಖರೀದಿಗೆ ಆದೇಶ ಹೊರಡಿಸಿದರು. ಮೈಸೂರು ನಗರ ಪಾಲಿಕೆ, ಜಿಲ್ಲಾ ಪಂಚಾಯತ್​, ಪುರಸಭೆ ಎಲ್ಲಾ ಅಧಿಕಾರ ಮೊಟಕುಗೊಳಿಸಿ ತೀರ್ಮಾನ ಕೈಗೊಂಡರು ಎಂದು ಆರೋಪಿಸಿದರು.

ಅವರ ಹೆಸರು ಹೇಳಲು ನನಗೆ ಬೇಜಾರು ಆಗುತ್ತದೆ. ಅನುಮತಿ ನೀಡಿದರೆ ಹೆಸರು ಹೇಳುತ್ತೇನೆ. ಗ್ರಾ.ಪಂ.‌ ಸಿಇಒಗೆ ಸಂಬಂಧ ಏನು?. ಅವರಿಗೂ ಡಿಸಿಗೂ ಸಂಬಂಧ ಏನು?. ಗ್ರಾ.ಪಂ.ಗೆ ಎರಡು‌ ಲಕ್ಷ ರೂ. ಕೊಟ್ಟಿದ್ದಾರೆ. ಇಲ್ಲಿ ನನ್ನ ಹಾಗೂ ಜನಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಿದರು 14.50 ಲಕ್ಷ ಬ್ಯಾಗ್ ಖರೀದಿ ಸಂಬಂಧ ಇವರೇ ತೀರ್ಮಾನ‌ ಮಾಡಿದರು. ಅದರ ಹಣ ಡಿಸಿ ಖಾತೆಗೆ ವರ್ಗಾಯಿಸಲು ಸೂಚಿಸಿದರು. ಮೂರು ಮೂರು ದಿನಕ್ಕೊಮ್ಮೆ ಸಭೆ ನಡೆಸುತ್ತಾರೆ. ಯಾವುದೇ ಸರ್ಕಾರಿ ನೌಕರ ಕೇಂದ್ರ ಹಾಗೂ ರಾಜ್ಯ ಅಧಿಕಾರಿಗಳಾಗಲಿ ಪತ್ರಿಕಾ ಗೋಷ್ಠಿ ಮಾಡಬಾರದು. ಆದರೆ ಅವರು, ಸಂಚು ಮಾಡಿ ನನ್ನ ವರ್ಗಾವಣೆಯನ್ನು ಸಾ.ರಾ.ಮಹೇಶ್ ಮಾಡಿದ್ದಾರೆ: ರೋಹಿಣಿ ಸಿಂಧೂರಿ ಎಂಬ ಪತ್ರಿಕೆ ಸುದ್ದಿಯನ್ನು ಉಲ್ಲೇಖಿಸಿದರು.

ನಿಮ್ಮ ಮನೆಯಲ್ಲಿ ಈಜುಕೊಳ ಇದೆಯಾ?:

ಐಎಎಸ್ ಅಂದರೆ ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಎಂದು ಕೆಲಸ ಮಾಡುತ್ತಾರೆ. ಇನ್ನೂ ಕೆಲ ಪುಣ್ಯಾತ್ಮರು ಇದ್ದಾರೆ ಐ ಆ್ಯಮ್ ಆಲ್ ವೇಸ್ ಸೇಯ್ಸ್ ಅಂತ ವರ್ತಿಸುತ್ತಾರೆ. ನಾವು ಮಂತ್ರಿಯಾದರೆ ನೀವು ನಮಗೆ ನೀಡುವುದು ಮನೆಯ ನವೀಕರಣಕ್ಕಾಗಿ 4 ಲಕ್ಷ ರೂ. ಕೊಡುತ್ತಾರೆ. 30 ಲಕ್ಷ ಈಜುಕೊಳಕ್ಕೆ, 16.36 ಲಕ್ಷ ರೂ. ಕಟ್ಟಡ ನವೀಕರಣಕ್ಕಾಗಿ, 75,000 ವಿದ್ಯುತ್ ಬಿಲ್ ವೆಚ್ಚ ಮಾಡುತ್ತಾರೆ. ಸಿಎಂ ಮನೆಯಲ್ಲಿ ಈಜುಕೊಳ ಇದೆಯಾ, ರಾಜ್ಯಪಾಲರ ಮನೆಯಲ್ಲಿ ಈಜುಕೊಳ ಇದೆಯಾ, ನಿಮ್ಮ ಮನೆಯಲ್ಲಿ ಈಜುಕೊಳ ಇದೆಯಾ?. ಎಂದು ಫೋಟೋ ಪ್ರದರ್ಶನ ಮಾಡುವ ಮೂಲಕ ಸಾ.ರಾ. ಮಹೇಶ್ ಟೀಕಿಸಿದರು.

ದಸರಾ ವೇಳೆ ಸಿಎಂ ಪುಷ್ಪಾರ್ಚನೆ ಮಾಡಿದರು. ಅವರ ಹಿಂದೆ ಮಹಾರಾಜರು ಇರಬೇಕು, ಉಸ್ತುವಾರಿ ಸಚಿವರಿರುತ್ತಾರೆ. ಪೊಲೀಸ್ ಕಮಿಷನರ್ ಹಿಂದೆ ಡಿಸಿ ಇರಬೇಕು. ಆದರೆ ಮಹಾರಾಜರ ಮುಂಚೆಯೇ ಡಿಸಿ ಪುಷ್ಪಾರ್ಚನೆ ಮಾಡುತ್ತಾರೆ. ಕೋವಿಡ್ ಸಂಬಂಧ ತಪ್ಪು ಲೆಕ್ಕ ಕೊಟ್ಟರು. ಸಾವಿನ ಸಂಖ್ಯೆ ಹೇಗೆ ಇಳಿಮುಖ ಎಂದು ಲೆಕ್ಕನೇ ಕೊಟ್ಟಿಲ್ಲ ಎಂದು ಪರೋಕ್ಷವಾಗಿ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದರು.

ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ನಾವು, ಡಿಸಿಗಳು, ಎಲ್ಲಾ ಶಾಸಕರು ಇರಬೇಕು. ವಾಲ್ಮಿಕಿ‌ ಜಯಂತಿ ಬಂದಾಗ ಅವರು ರೆಸಾರ್ಟ್ ಗೆ ಹೋಗ್ತಾರೆ. ಇದು ಜಿಲ್ಲಾಡಳಿತದ ಆಡಳಿತದ ಪರಿ ಎಂದು ಕಿಡಿ ಕಾರಿದರು.

ಇದು ಶಿಷ್ಟಾಚಾರ ಉಲ್ಲಂಘನೆಯಾದಂತಿದೆ:
ಈ ವೇಳೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಹಕ್ಕು ಚ್ಯುತಿ ಸ್ಪಷ್ಟವಾಗಿರಬೇಕು.‌ ಶಾಸಕನಾಗಿ ಕೆಲಸ‌ ಮಾಡಲು ಅಡಚಣೆ ಮಾಡುವುದು ಹಕ್ಕುಚ್ಯುತಿಯಾಗುತ್ತದೆ. ಸಾ.ರಾ. ಮಹೆಶ್ ಹೇಳುವಂಥದ್ದು ನನ್ನ ಪ್ರಕಾರ ಶಿಷ್ಟಾಚಾರ ಉಲ್ಲಂಘನೆಯಾಗಿರಬಹುದು. ಇದಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲು ಡಿಪಿಆರ್ ಮೂಲಕ ಸರ್ಕಾರ ಸೂಚಿಸುತ್ತದೆ ಎಂದರು.

ಅಧಿಕಾರಿ ಅಧಿಕಾರಿಯೇ ಹೊರತು ಸರ್ವಾಧಿಕಾರಿ ಆಗಬಾರದು. ಶಾಸಕರಿಗೆ ಶಿಷ್ಟಾಚಾರ ಉಲ್ಲಂಘನೆ ಆಗ್ತಿದೆ. ಇದನ್ನ ನಾನು ಒಪ್ಪುತ್ತೇನೆ. ಸಾ.ರಾ ಮಹೇಶ್ ಪ್ರಕರಣದಲ್ಲೂ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಹಕ್ಕು ಚ್ಯುತಿ ಆಗಿಲ್ಲ‌. ಯಾವುದೇ ಶಾಸಕರಿಗೆ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಸೂಕ್ತ ಆದೇಶ ನೀಡುತ್ತೇವೆ. ಸಾ.ರಾ.ಮಹೇಶ್ ಹೇಳುವುದು ಸತ್ಯವಾಗಿದ್ದರೆ, ನಾವು ಜಿಲ್ಲಾಧಿಕಾರಿಯಾಗಿದ್ದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ನಿಮ್ಮ ಜೊತೆ ಇದೆ. ಆ ಭರವಸೆಯನ್ನು ನೀಡುತ್ತೇನೆ ಎಂದರು. ಇಷ್ಟಾದರೂ ಸುಮ್ಮನಾಗದ ಸಾ ರಾ ಮಹೇಶ್​ ಧರಣಿಗೆ ಮುಂದಾದರು.

Last Updated : Sep 21, 2021, 3:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.