ಬೆಂಗಳೂರು: ಬಿಡಿಎ ಕಮಿಷನರ್ ವರ್ಗಾವಣೆಗೆ ನಾನು ಒತ್ತಡ ಹೇರಿಲ್ಲ, ಬದಲಾಗಿ ಒಬ್ಬ ಖಾಯಂ ಆಯುಕ್ತರನ್ನು ಬಿಡಿಎಗೆ ನೇಮಿಸಲು ಮನವಿ ಮಾಡಿದ್ದೇನೆ ಎಂದು ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಟಿ. ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ರಾಮಲಿಂಗಮ್ ನಿರ್ಮಾಣ ಸಂಸ್ಥೆ ಪರ ಒತ್ತಡ ಹಾಕಿಲ್ಲ. ಈ ಹಿಂದೆ ಮಂಜೂರು ಆಗಿದ್ದ ಟೆಂಟರ್ಗೆ ವರ್ಕ್ ಆರ್ಡರ್ ಕೊಡಿ ಅಂತ ಮಾತ್ರ ಹೇಳಿದ್ದೆ. ರಾಮಲಿಂಗಮ್ ಕಂಪನಿ ಬ್ಲಾಕ್ ಲಿಸ್ಟ್ನಲ್ಲಿ ಇಲ್ಲ. ಬ್ಲಾಕ್ ಲಿಸ್ಟ್ನಲ್ಲಿದ್ದಿದ್ರೆ ಕಮಿಷನರ್ ನನಗೆ ಮಾಹಿತಿ ಕೊಡಬೇಕಾಗಿತ್ತು. ರಾಮಲಿಂಗಮ್ ಹಾಗೂ ನನಗೆ ಯಾವ ಆಪ್ತತೆಯೂ ಇಲ್ಲ. ನಾನು ಯಾರಿಗೂ ಟೆಂಡರ್ ಕೊಡಿ ಅಂತಾನು ಕೇಳಿಲ್ಲ ಎಂದರು.
ಆಯುಕ್ತರ ವಿರುದ್ಧ ಆರೋಪ...
ನಾನು ಇತ್ತೀಚೆಗೆ ಕಮಿಷನರ್ ರಾಕೇಶ್ ಸಿಂಗ್ ಮೇಲೆ ಬಂದ ಆರೋಪಕ್ಕೆ ದೂರು ಕೊಟ್ಟಿದ್ದೆ. ಅದಕ್ಕೆ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಯಾವ ಕೆಲಸವನ್ನು ಆಯುಕ್ತ ರಾಕೇಶ್ ಸಿಂಗ್ ಮಾಡುತ್ತಿಲ್ಲ. ಅವರ ವಿರುದ್ದ ಮಾತಾಡಿದ್ರೆ ಯಾವ ಕೆಲಸವನ್ನೂ ಮಾಡೋದಿಲ್ಲ. ಅವರು ಮಾಡೋದು ಚಿತ್ರನಟಿಯ ಕೆಲಸ ಮಾತ್ರ. ಖಾಸಗಿ ಹೋಟೆಲ್ಗೆ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತಾರೆ. ಬಾಲು ಎಂಬ ಏಜೆಂಟ್ ಮೂಲಕ ರಾಕೇಶ್ ಸಿಂಗ್ ಕೆಲಸ ಮಾಡುತ್ತಿದ್ದಾರೆ. 10 ಪೈಲನ್ನು ಕ್ಲಿಯರ್ ಮಾಡಲು ಅಶೋಕ್ ಹೋಟೆಲ್ನಲ್ಲಿ ರೂಮ್ ಮಾಡಿರೋದು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿದೆ ಎಂದು ಆಯುಕ್ತರ ವಿರುದ್ಧ ಎಸ್ ಟಿ ಸೋಮಶೇಖರ್ ಆರೋಪ ಮಾಡಿದರು.