ಬೆಂಗಳೂರು: ನಗರದಲ್ಲಿ ಹೆಲ್ಮೆಟ್ ಧರಿಸದೇ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದ ಕೆ.ಆರ್.ಪುರ ಸಾರಿಗೆ ಪ್ರಾದೇಶಿಕ ಅಧಿಕಾರಿಗಳು 40 ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಹೆಲ್ಮೆಟ್ ಧರಿಸದೇ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ವಾಹನ ಚಾಲಕರ ಚಾಲನಾ ಪರವಾನಗಿಯನ್ನು ಕೆ.ಆರ್.ಪುರ ಭಟ್ಟರಹಳ್ಳಿ ಸಾರಿಗೆ ಪ್ರಾದೇಶಿಕ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಭಟ್ಟರಹಳ್ಳಿ ಜಂಕ್ಷನ್ನಲ್ಲಿ ಭಟ್ಟರಹಳ್ಳಿ ಸಾರಿಗೆ ಪ್ರಾದೇಶಿಕ ಅಧಿಕಾರಿ (RTO) ಭೀರೆಗೌಡ ನೇತೃತ್ವದಲ್ಲಿ ARTO ಸುರೇಶ್, ಇನ್ಸ್ಪೆಕ್ಟರ್ಗಳಾದ ಕೇಶವಪ್ಪ, ಸುಂದರ್, ಯೋಗೇಶ್ ವಿಶೇಷ ಕಾರ್ಯಾಚರಣೆ ನಡೆಸಿದರು.

ಹೆಲ್ಮೆಟ್ ಧರಿಸದೇ ಸಂಚರಿಸುತ್ತಿದ್ದ 47 ದ್ವಿಚಕ್ರ ವಾಹನ ಸವಾರರ ಚಾಲನಾ ಪರವಾನಗಿಯನ್ನು ರದ್ದು ಹಾಗೂ ಮೂಲ ಚಾಲನಾ ಪರವಾನಗಿಯ ಪ್ರತಿ ಹೊಂದಿರದ 46 ವಾಹನಗಳನ್ನು ಜಪ್ತಿ ಮಾಡುವ ಮೂಲಕ ಹೆಲ್ಮೆಟ್ ಧರಿಸದೇ ರಾಜಾರೋಷವಾಗಿ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ವಾಹನ ಸವಾರರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದೇವೆ. ಮೂಲ ಚಾಲನಾ ಪರವಾನಗಿ ಹೊಂದಿಲ್ಲದ ವಾಹನಗಳನ್ನು ಒರಿಜಿನಲ್ ಪರವಾನಗಿ ನೀಡಿದ ಬಳಿಕ ಮಾಲೀಕರಿಗೆ ವಾಹನಗಳನ್ನು ನೀಡುತ್ತೇವೆ ಎಂದರು.