ETV Bharat / city

ರಾತ್ರಿ ವೇಳೆ ಒಂಟಿಯಾಗಿ ಕಳ್ಳತನ; ಖದೀಮನ ಪ್ಲಾನ್ ವಿಫಲ

author img

By

Published : Jan 10, 2021, 10:18 AM IST

ಕತ್ತಲಾದರೆ ಸಾಕು ರಾಡ್ ಹಿಡಿದು ಮನೆಗಳಿಗೆ ಬೀಟ್ ಹಾಕುವ ಕಳ್ಳರು, ಮಾಸ್ಕ್ ಧರಿಸಿ ವಿದ್ಯಾರಣ್ಯಪುರ, ಹೆಚ್ಎಂಟಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳಲ್ಲಿ ಹೊಂಚು ಹಾಕುತ್ತಾರೆ‌.

Bangalore
ಬೆಂಗಳೂರು

ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಿಸಿದ್ದರೂ ಖದೀಮರು ಮಾತ್ರ ಯಾವುದೇ ಆತಂಕವಿಲ್ಲದೆ ಕಳ್ಳತನ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಕಳ್ಳತನ‌ ಮಾಡಲು ಮುಂದಾದ ಖದೀಮರ ಪ್ಲಾನ್ ಮಾತ್ರ ವಿಫಲವಾಗಿದೆ‌.

ಕತ್ತಲಾದರೆ ಸಾಕು ರಾಡ್ ಹಿಡಿದು ಮನೆಗಳಿಗೆ ಬೀಟ್ ಹಾಕುವ ಕಳ್ಳರು, ಮಾಸ್ಕ್ ಧರಿಸಿ ವಿದ್ಯಾರಣ್ಯಪುರ, ಹೆಚ್ಎಂಟಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳಲ್ಲಿ ಹೊಂಚು ಹಾಕುತ್ತಾರೆ‌. ಇದೇ ರೀತಿ‌ ಖದೀಮನೊಬ್ಬ ಮನೆಗಳ್ಳತನಕ್ಕೆ ಹಾಕಿದ್ದ ಸ್ಕೆಚ್ ವಿಫಲವಾಗಿದೆ‌.

ತಡರಾತ್ರಿ 12 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೂ ಕಳ್ಳ ಏರಿಯಾ ಪೂರ್ತಿ ಸುತ್ತಾಟ ನಡೆಸಿದ್ದಾನೆ.‌ ಈತನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲ ಅಂದುಕೊಂಡು ರಾಡ್​ನಿಂದ ಮನೆ ಬಾಗಿಲು ಒಡೆಯಲು ಪ್ರಯತ್ನಿಸಿದ್ದಾನೆ. ಬಾಗಿಲು ಬಡಿಯುವ ಶಬ್ಧ ಕೇಳಿಸುತ್ತಿದ್ದಂತೆ ಮನೆಯವರು ಎಚ್ಚೆತ್ತುಕೊಂಡು ತಕ್ಷಣ ಕೂಗಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ಎರಡು ದೈವಸ್ಥಾನಗಳಲ್ಲಿ ಲಕ್ಷಾಂತರ ಮೌಲ್ಯದ ಕಳ್ಳತನ

ಇದರಿಂದ ಆತಂಕಗೊಂಡ ಕಳ್ಳ ಕ್ಷಣಾರ್ಧದಲ್ಲಿ ಕಾಲಿಗೆ ಬುದ್ದಿ ಹೇಳಿದ್ದಾನೆ. ‌ಈ ಸಂಬಂಧ ವಿದ್ಯಾರಣ್ಯಪುರದ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.