ETV Bharat / city

ಕಾನೂನಿನಡಿ ಪಾಲಿಕೆ ಮೀಸಲಾತಿ ನೀಡಲಾಗಿದೆ: ಡಿಸಿಎಂ ಅಶ್ವತ್ಥ ನಾರಾಯಣ

ಪಾಲಿಕೆ ಚುನಾವಣೆಗೆ ಮೀಸಲಾತಿ ಪ್ರಕಟ ಮಾಡಿರುವ ಕುರಿತು ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಶೇಕಡಾ 50% ಮಹಿಳೆಯರಿಗೆ, ಶೇ.50% ಪುರುಷರಿಗೆ ಮೀಸಲಾತಿ ಕೊಡಲಾಗಿದೆ ಎಂದರು.

reservation granted by law DCM Ashwath Narayan Said
ಕಾನೂನಿನಡಿ ಪಾಲಿಕೆ ಮೀಸಲಾತಿ ನೀಡಲಾಗಿದೆ: ಡಿಸಿಎಂ ಅಶ್ವಥ್ ನಾರಾಯಣ್
author img

By

Published : Sep 15, 2020, 8:38 AM IST

Updated : Sep 15, 2020, 9:13 AM IST

ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿ ಸ್ಥಾಪಿಸಿರುವ ಕೋವಿಡ್ ಪರೀಕ್ಷಾ ಕೇಂದ್ರವನ್ನು ಡಿಸಿಎಂ ಅಶ್ವತ್ಥ ನಾರಾಯಣ ಉದ್ಘಾಟಿಸಿದ್ದು, ಮಾಜಿ ಸಚಿವ ದಿನೇಶ್ ಗುಂಡೂರಾವ್ ಸಾಥ್ ನೀಡಿದರು.

ಕಾನೂನಿನಡಿ ಪಾಲಿಕೆ ಮೀಸಲಾತಿ ನೀಡಲಾಗಿದೆ: ಡಿಸಿಎಂ ಅಶ್ವತ್ಥ ನಾರಾಯಣ

ಬಳಿಕ ಪಾಲಿಕೆ ಚುನಾವಣೆಗೆ ಮೀಸಲಾತಿ ಪ್ರಕಟ ಮಾಡಿರುವ ಕುರಿತು ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಶೇಕಡಾ 50% ಮಹಿಳೆಯರಿಗೆ, ಶೇ. 50% ಪುರುಷರಿಗೆ ಮೀಸಲಾತಿ ಕೊಡಲಾಗಿದೆ.

ಮೊದಲು ಮಹಿಳೆಯರಿಗೆ 33% ಇತ್ತು. ಈ ಚುನಾವಣೆಯಲ್ಲಿ 50% ಆಗುತ್ತಿದೆ. ಕಾನೂನಿನಡಿಯಲ್ಲಿ ಮೀಸಲಾತಿ ಏನಿದೆ ಆ ಪ್ರಕಾರ ಮಾಡಲಾಗಿದೆ. ಯಾರಿಗಾದರೂ ಆಕ್ಷೇಪಣೆ ಇದ್ದರೂ ಸಲ್ಲಿಕೆಗೆ ಅವಕಾಶ ಇದೆ ಎಂದರು.

ದಿನೇಶ್ ಗುಂಡೂರಾವ್ ಮಾತನಾಡಿ, ನಿಯಮ ಪ್ರಕಾರ ಮೀಸಲಾತಿ ಮಾಡಬೇಕಿದೆ. ಕಾನೂನು ಉಲ್ಲಂಘಿಸಿ ಮಾಡುವ ಹಾಗಿಲ್ಲ. ಈ ಡ್ರಾಫ್ಟ್ ನೋಡಿಲ್ಲ ಎಂದು ಪ್ರತಿಕ್ರಿಯಿಸಿದರು.

Last Updated : Sep 15, 2020, 9:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.