ಬೆಂಗಳೂರು: ಮೊದಲು ನೀವು ಮಾಡಿದ ಪಾಪವನ್ನು ಜ್ಞಾಪಕ ಮಾಡಿಕೊಳ್ಳಿ, ನಂತರ ಬಿಜೆಪಿ ಮೇಲೆ ಅಟ್ಯಾಕ್ ಮಾಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಎಂಎಲ್ಸಿ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೇಲ್ ಮೇಲೆ ಇರೋ ಮಹಾನಾಯಕ ಸಿಡಿ ಹಿಂದೆ ಇದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಬಿಟ್ಟರೆ ಎಲ್ಲರೂ ಬೇಲ್ ಮೇಲೆ ಇದ್ದಾರಲ್ಲ. ಎಲ್ಲಾ ಪಾರ್ಟಿಲೂ ಬೇಲ್ ಮೇಲೆ ಇದ್ದಾರೆ, ಯಾರೂ ಅಂತ ಹೇಳ್ತೀರಾ?. ಆ ತರ ಟ್ವೀಟ್ ಮಾಡಬಾರದು ಎಂದು ಬಿಜೆಪಿ ಟ್ವೀಟ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸದನದಲ್ಲಿ ಒಬ್ಬ ಮಂತ್ರಿ ಉತ್ತರಿಸೋ ಸಂದರ್ಭದಲ್ಲಿ ನೀನು ಕೋರ್ಟ್ಗೆ ಹೋಗಿದ್ದಿ? ನೀನು ಕಳಂಕಿತ ಅನ್ನೋದು ತಪ್ಪು. ಅವರ ಉತ್ತರಕ್ಕೆ ತಡೆ ಮಾಡೋದು ತಪ್ಪು. ಹಿಂದೆ ಮೇಟಿ ಕೂಡ ಕೋರ್ಟ್ಗೆ ಹೋಗಿರಲಿಲ್ಲವಾ?. ನೀವು ಮಾಡಿದ ಪಾಪವನ್ನು ಮೊದಲು ಜ್ಞಾಪಕ ಮಾಡಿಕೊಳ್ಳಿ, ಆ ಮೇಲೆ ಬಿಜೆಪಿ ಮೇಲೆ ಅಟ್ಯಾಕ್ ಮಾಡಿ. ಇದು ಸಾರ್ವಭೌಮ ಸದನ. ಇಲ್ಲಿ ಪ್ರಶ್ನೆ ಕೇಳಿ ಉತ್ತರ ತೆಗೆದುಕೊಳ್ಳಲೇಬೇಕು ಎಂದರು.