ಬೆಂಗಳೂರು: ಸಿಸಿಬಿ ಪೊಲೀಸರಿಂದ ದಾಳಿ ಮುಂದುವರೆದಿದ್ದು, ಕಾಳೆಸಂತೆಯಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಮಾರಾಟ ಪ್ರಕರಣ ಸಂಬಂಧ ಮತ್ತೆ 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಧಿತರಿಂದ 17 ರೆಮ್ಡಿಸಿವರ್ ಇಂಜೆಕ್ಷನ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳು 25-30 ಸಾವಿರ ರೂ.ಗೆ ಮಾರುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ತಲೆಮರೆಸಿಕೊಂಡಿರುವ ಕೆಲ ಆರೋಪಿಗಳಿಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. (ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟಕ್ಕೆ ಸಿಎಂ ಗರಂ: ತನಿಖೆ ನಡೆಸಿ ಕ್ರಮದ ಎಚ್ಚರಿಕೆ)