ETV Bharat / city

ರಾಜಾಹುಲಿ ರಾಜೀನಾಮೆಗೆ ಹೆಚ್ಚು ಸಮಯ ನೀಡದ ಹೈಕಮಾಂಡ್: ತರಾತುರಿ ನಿರ್ಧಾರಕ್ಕೆ ಕಾರಣ?

ಬಿಜೆಪಿ ಪಾಳಯದಲ್ಲಿ ನಾಯಕತ್ವ ಬದಲಾವಣೆಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ. ಸಿಎಂ ಯಡಿಯೂರಪ್ಪಗೆ ಸಮಯಾವಕಾಶ ನೀಡದಿರಲು ಪ್ರಮುಖ ಕಾರಣ ಕೊರೊನಾ ಮೂರನೇ ಅಲೆ ಎನ್ನಲಾಗ್ತಿದೆ. ಕೆಲ ಸಮಯದಲ್ಲಿ ದೇಶದಲ್ಲಿ ಮೂರನೇ ಅಲೆ ಎದುರಾಗುವ ವರದಿ ಇದೆ. ಒಂದು ವೇಳೆ ಯಡಿಯೂರಪ್ಪನವರಿಗೆ ಕಾಲಾವಕಾಶ ನೀಡಿದಲ್ಲಿ ಕೋವಿಡ್​ ಭೀತಿಗೆ ಬದಲಾವಣೆ ಸಾಧ್ಯವಿಲ್ಲ. ಇದರಿಂದ ಸಿಎಂ ಬದಲಾವಣೆ ಕನಿಷ್ಠ ಆರು ತಿಂಗಳ ಕಾಲ ಮುಂದೂಡಿಕೆಯಾಗಲಿದೆ. ಆಗ ಮತ್ತೆ ಬಜೆಟ್, ಮೂರನೇ ವರ್ಷ ಎನ್ನುವ ಕಾರಣಗಳು ಎದುರಾಗಲಿವೆ.

reason-for-leadership-changing-in-karnataka-bjp-party
ಯಡಿಯೂರಪ್ಪ
author img

By

Published : Jul 22, 2021, 5:17 PM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲೇ ನಾಯಕತ್ವ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಕೊರೊನಾ ಮೂರನೇ ಅಲೆಯ ಭೀತಿ, ಹಿಂದಿನ ಕಹಿ ಅನುಭವ ಹಾಗು ಬೆಂಬಲಿಗ‌ ಶಾಸಕರ ಶಕ್ತಿ ಪ್ರದರ್ಶನದಂತಹ ಚಟುವಟಿಕೆ ಮೂಲಕ ಹೈಕಮಾಂಡ್​ಗೆ ಯಡಿಯೂರಪ್ಪ ಬಿಸಿತುಪ್ಪವಾಗಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಕಾಲಾವಕಾಶ ನೀಡದೇ ತರಾತುರಿಯಲ್ಲಿ ರಾಜೀನಾಮೆ ಸಂದೇಶವನ್ನು ರವಾನಿಸಿದೆ ಎಂದು ಹೇಳಲಾಗ್ತಿದೆ.

ಜುಲೈ 26ಕ್ಕೆ ಬಿಜೆಪಿ ಸರ್ಕಾರ ಎರಡು ವರ್ಷ ಪೂರ್ಣಗೊಳಿಸುತ್ತಿದ್ದು, ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಮುಂದಿನ ಚುನಾವಣೆಯನ್ನು ಎದುರಿಸಲು ಸಮರ್ಥ ನಾಯಕತ್ವದ ಹುಡುಕಾಟದಲ್ಲಿದ್ದ ಹೈಕಮಾಂಡ್ ಈಗ ಬಿಎಸ್​​ವೈ ಉತ್ತರಾಧಿಕಾರಿ ಆಯ್ಕೆಗೆ ನಿರ್ಧರಿಸಿದೆ. ಈಗಿನಿಂದಲೇ ಹೊಸ ನಾಯಕನಿಗೆ ಅವಕಾಶ ನೀಡಿದರೆ ಚುನಾವಣೆ ವೇಳೆಗೆ ಯಡಿಯೂರಪ್ಪ ಪರ್ಯಾಯ ನಾಯಕತ್ವ ಪಕ್ವವಾಗಬಹುದು ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಅದಕ್ಕಾಗಿಯೇ ನಾಯಕತ್ವ ಬದಲಾವಣೆ ಪ್ರಹಸನಕ್ಕೆ ಕೈಹಾಕಿದೆ.

ದೆಹಲಿಗೆ ಕರೆಸಿಕೊಂಡಿದ್ದ ಕೇಂದ್ರದ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ.‌ ತಕ್ಷಣವೇ ಹುದ್ದೆಯಿಂದ ನಿರ್ಗಮಿಸಬೇಕು ಎನ್ನುವ ಸಂದೇಶ ನೀಡಿದ್ದಾರೆ. ಆದರೆ ಇದಕ್ಕೆ ಆಷಾಢದ ಕಾರಣ ನೀಡಿದ ಯಡಿಯೂರಪ್ಪ ಸಮಯಾವಕಾಶ ಕೋರಿದ್ದರು. ಅದಕ್ಕೆ ಸಮ್ಮತಿಸಿದ್ದ ವರಿಷ್ಠರು ದಿನಾಂಕ ನಿಗದಿಪಡಿಸದೇ ಅದನ್ನು ಅವರ ವಿವೇಚನೆಗೆ ಬಿಟ್ಟಿದ್ದು, ತಿಂಗಳಾಂತ್ಯದ ಗಡುವು ನೀಡಿ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

ತರಾತುರಿಗೆ ಕಾರಣಗಳು: ಯಡಿಯೂರಪ್ಪಗೆ ಸಮಯಾವಕಾಶ ನೀಡದಿರಲು ಪ್ರಮುಖ ಕಾರಣ ಕೊರೊನಾ ಮೂರನೇ ಅಲೆ. ಕೆಲ ಸಮಯದಲ್ಲಿ ದೇಶದಲ್ಲಿ ಮೂರನೇ ಅಲೆ ಎದುರಾಗುವ ವರದಿ ಇದೆ. ಒಂದು ವೇಳೆ ಯಡಿಯೂರಪ್ಪನವರಿಗೆ ಕಾಲಾವಕಾಶ ನೀಡಿದಲ್ಲಿ ಕೋವಿಡ್​ ಭೀತಿಗೆ ಬದಲಾವಣೆ ಸಾಧ್ಯವಿಲ್ಲ. ಇದರಿಂದ ಸಿಎಂ ಬದಲಾವಣೆ ಕನಿಷ್ಠ ಆರು ತಿಂಗಳ ಕಾಲ ಮುಂದೂಡಿಕೆಯಾಗಲಿದೆ.

ಆಗ ಮತ್ತೆ ಬಜೆಟ್, ಮೂರನೇ ವರ್ಷ ಎನ್ನುವ ಕಾರಣಗಳು ಎದುರಾಗಲಿವೆ. ಅಲ್ಲದೇ ಇದಕ್ಕೆಲ್ಲಾ ಅವಕಾಶ ನೀಡಿದರೆ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರ ಇರಲಿದೆ. ಚುನಾವಣಾ ವರ್ಷದಲ್ಲಿ ಆರು ತಿಂಗಳು ಮಾತ್ರ ಆಡಳಿತಕ್ಕೆ ಅವಕಾಶ ಸಿಗಲಿದ್ದು, ಅಷ್ಟರಲ್ಲಿ ಹೊಸ ಸಿಎಂ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು, ಜನರ ಮನಗೆಲ್ಲಲು, ಪಕ್ಷದ ನಾಯಕರನ್ನು‌ ವಿಶ್ವಾಸಕ್ಕೆ ಪಡೆದು ಒಟ್ಟಾಗಿ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾದಲ್ಲಿ ಮುಂಬರಲಿರುವ ಚುನಾವಣೆ ದೃಷ್ಟಿಯಲ್ಲಿನ ನಮ್ಮ ಯೋಜನೆಗೆ ಹಿನ್ನೆಡೆಯಾಗಲಿದೆ ಎನ್ನುವ ಆತಂಕ ವರಿಷ್ಠರನ್ನು ಕಾಡಿದೆ. ಹಾಗಾಗಿ ಯಡಿಯೂರಪ್ಪಗೆ ಬೇರೆ ಯಾವುದೇ ಯೋಚನೆ ಮಾಡಲು ಅವಕಾಶ ನೀಡದೇ ರಾಜೀನಾಮೆಗೆ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಮುನ್ನವೇ ಎರಡು ವರ್ಷ ಆಡಳಿತ ನಡೆಸಿ ನಿರ್ಗಮಿಸಬೇಕು ಎಂದು ಮಾತುಕತೆ ಆಗಿತ್ತು. ಇಡೀ ದೇಶದಲ್ಲಿ 75 ವರ್ಷದ ಮಿತಿ ಹಾಕಿಕೊಂಡಿರುವ ಬಿಜೆಪಿ ಗಡಿಯ ವಿಚಾರದಲ್ಲಿ ಮಾತ್ರ ವಿನಾಯಿತಿ ನೀಡಿದ್ದು‌, ಎರಡು ವರ್ಷ ಅಧಿಕಾರ ನಡೆಸಲು ಸಮ್ಮತಿಸಿತ್ತು. ಅದರಂತೆ ಈಗ ಎರಡು ವರ್ಷ ಪೂರ್ಣಗೊಂಡಿದ್ದು, ರಾಜೀನಾಮೆಗೆ ಸೂಚಿಸಿದೆ. ವಿಳಂಬವಾದಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಕಾಲಾವಕಾಶ ನೀಡದೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ 2011 ರಲ್ಲಿ ಭ್ರಷ್ಟಾಚಾರದ ಆರೋಪ ಬಂದಾಗ ರಾಜೀನಾಮೆ ನೀಡಲು ಸಿಎಂ ನಿರಾಕರಿಸಿದ್ದರು. ಹೈಕಮಾಂಡ್ ವಿರುದ್ಧವೇ ತೊಡೆತಟ್ಟಿದ್ದರು. ನಂತರ ಲಾಲ್ ಕೃಷ್ಣ ಅಡ್ವಾಣಿ ಸೂಚನೆ ಧಿಕ್ಕರಿಸಲು ಸಾಧ್ಯವಾಗದೆ ರಾಜೀನಾಮೆ ನೀಡಿದ್ದರು. ಆದರೆ ತಾವು ಸೂಚಿಸುವ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವ ಷರತ್ತು ವಿಧಿಸಿದ್ದರು. ನಂತರ ಬೇರೆ ಪಕ್ಷ ಕಟ್ಟಿ ಬಿಜೆಪಿ ರಾಜಕೀಯ ಹಿನ್ನೆಡೆ ಅನುಭವಿಸುವಂತೆ ಮಾಡಿದ್ದರು.

ಈ ಹಿಂದೆ ಬಂದಿದ್ದಂತಹ ಗುರುತರ ಭ್ರಷ್ಟಾಚಾರದ ಆರೋಪ ಬಂದಿಲ್ಲ, ಕೇವಲ ವಯಸ್ಸಿನ ಆಧಾರದಲ್ಲಿ ರಾಜೀನಾಮೆ ಪಡೆಯಲಾಗುತ್ತಿದೆ. ಅಂದು ಆರೋಪವಿದ್ದಾಗಲೇ ರಾಜಕೀಯ ದಾಳ ಉರುಳಿಸಿದ್ದ ಯಡಿಯೂರಪ್ಪ ಈಗ ಸುಮ್ಮನಿರಲು ಸಾಧ್ಯವಿಲ್ಲ. ಬೆಂಬಲಿಗ ಶಾಸಕರ ಶಕ್ತಿ ಪ್ರದರ್ಶನ ಮಾಡಿ ರಾಜೀನಾಮೆ ನೀಡುವುದನ್ನು ವಿಳಂಬವಾಗುವಂತೆ ಮಾಡಬಹುದು. ಇದರಿಂದ ಭವಿಷ್ಯದ ನಾಯಕತ್ವ ರೂಪಿಸಲು ಕಷ್ಟವಾಗಲಿದೆ ಎಂದು ತರಾತುರಿಯಲ್ಲಿ ಸಿಎಂ ಯಡಿಯೂರಪ್ಪಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ರಾಜ್ಯ ಬಿಜೆಪಿಯನ್ನು ಇತರ ರಾಜ್ಯಗಳ ರೀತಿ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಹೈಕಮಾಂಡ್ ಭವಿಷ್ಯದ ನಾಯಕನ‌ ಸೃಷ್ಟಿ ಮತ್ತು ಮುಂಬರಲಿರುವ ಸಾರ್ವತ್ರಿಕ ಚುನಾವಣೆಗೆ ನಾಯಕತ್ವ ಕೊರತೆ ಎದುರಾಗದಿರಲಿ ಎಂದು ತರಾತುರಿಯಲ್ಲಿ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.