ETV Bharat / city

ರಾಜ್ಯದಲ್ಲಿ ಪೊಲೀಸ್ ಠಾಣೆಗಳ ಮರುಸಂಘಟನೆಗೆ ಸರ್ಕಾರ ನಿರ್ಧಾರ - ಪೊಲೀಸ್ ಠಾಣೆಗಳ ಬಗ್ಗೆ ಲೇಟೆಸ್ಟ್​ ಸುದ್ದಿ

ರಾಜ್ಯದಲ್ಲಿ ಆಯ್ದ 62 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ಈ ಮೂಲಕ ಪೊಲೀಸ್ ಇಲಾಖೆಯನ್ನು ಮರುಸಂಘಟನೆಗೊಳಿಸಲಾಗುತ್ತದೆ.

state govt
ರಾಜ್ಯ ಸರ್ಕಾರ
author img

By

Published : Jan 1, 2021, 4:01 AM IST

ಬೆಂಗಳೂರು: ರಾಜ್ಯದ ಅಪರಾಧ ಪ್ರಕರಣಗಳ ತನಿಖೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೊಲೀಸ್ ಠಾಣೆಗಳನ್ನು ಮರು ಸಂಘಟನೆಗೊಳಿಸುವ ಕುರಿತು ಆದೇಶ ಹೊರಡಿಸಿದ್ದು, ಈ ಮೂಲಕ ರಾಜ್ಯದ ಕೆಲ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ.

ಹಾಗೆಯೇ ಹೊಸ ಪಿಎಸ್‌ಐ ಹುದ್ದೆಗಳನ್ನು ಅಪರಾಧ ಅಂಕಿ-ಅಂಶಗಳ ಆಧಾರದ ಮೇಲೆ ವಿವಿಧ ಠಾಣೆಗಳಿಗೆ ನಿಯೋಜಿಸಲಾಗಿದ್ದು, ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಪೊಲೀಸ್ ಇನ್ಸ್​​ಸ್ಪೆಕ್ಟರ್​ಗಳೇ ಎಸ್‌ಎಚ್‌ಓಗಳಾಗಿದ್ದಾರೆ. ಅದೇ ರೀತಿ ಜಿಲ್ಲಾ ಘಟಕಗಳ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗಳನ್ನು ಪಿಐ, ಎಸ್‌ಎಚ್‌ಓ ಠಾಣೆಗಳನ್ನಾಗಿ ಪರಿವರ್ತಿಸುವ ಅಗತ್ಯವಿದೆ. ಈ ಹಿನ್ನೆೆಲೆಯಲ್ಲಿ ಆಯ್ದ 62 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದೆ.

ಇದನ್ನೂ ಓದಿ: ಕಳೆದ ವರ್ಷ ಕವಿದಿದ್ದ ಕೊರೊನಾ ಕಳೆಯಲಿ: ಸಿಎಂ ಬಿಎಸ್​ವೈ ವಿಡಿಯೋ ಸಂದೇಶ

ರಾಜ್ಯದ ಎಸ್‌ಸಿಆರ್‌ಬಿ ವಿಭಾಗದಲ್ಲಿ 12 ಮಂದಿ ಪಿಐಗಳ ಪೈಕಿ ಐದು, ಚನ್ನಪಟ್ಟಣದ ಪೊಲೀಸ್ ತರಬೇತಿ ಕೇಂದ್ರದ 14 ಮಂದಿ ಪಿಐ ಪೈಕಿ ನಾಲ್ವರು, ಖಾನಾಪುರದಲ್ಲಿನ 12 ಮಂದಿ ಪೈಕಿ ನಾಲ್ವರು ಪಿಐಗಳನ್ನು ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಲು ಪೊಲೀಸ್ ಮಹಾನಿರ್ದೇಶಕರು ಒಪ್ಪಿಗೆ ನೀಡಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಹಾಗೂ ಮೈಸೂರು ಕಮಿಷನರೇಟ್ ವ್ಯಾಪ್ತಿಯ ಡಿಸಿಐಬಿಯ ಪಿಐಗಳನ್ನು ಸಹ ಇಲ್ಲಿ ಬಳಸಿಕೊಳ್ಳಲಾಗುವುದು.

ಮೇಲ್ದರ್ಜೇಗೇರಿಸಲಿರುವ ಪೊಲೀಸ್ ಠಾಣೆಗಳು

ಬೆಂಗಳೂರು(ನೆಲಮಂಗಲ), ತುಮಕೂರು(2), ರಾಮನಗರ(3), ಚಿಕ್ಕಬಳ್ಳಾಪುರ(2), ಕೋಲಾರ(1), ಮೈಸೂರು(5), ಮಂಡ್ಯ(1), ಹಾಸನ(1), ಚಾಮರಾಜನಗರ(2), ಕೊಡಗು(1), ದಾವಣಗೆರೆ(4), ಶಿವಮೊಗ್ಗ(9), ಚಿತ್ರದುರ್ಗ(3), ಹಾವೇರಿ(1), ದಕ್ಷಿಣ ಕನ್ನಡ(1), ಉತ್ತರ ಕನ್ನಡ(2), ಚಿಕ್ಕಮಗಳೂರು(3), ಉಡುಪಿ(1), ಬೆಳಗಾವಿ(5), ಧಾರವಾಡ(1), ವಿಜಯಪುರ(3), ಬಾಗಲಕೋಟೆ(1), ಗದಗ(1), ಬಳ್ಳಾರಿ(1), ರಾಯಚೂರು(4) ಮತ್ತು ಬೀದರ್ (2) ಸೇರಿ ಒಟ್ಟು 62 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.