ETV Bharat / city

ರಾಜ್ಯಸಭೆ ಫಲಿತಾಂಶ: ಲಾಭ-ನಷ್ಟದ ಲೆಕ್ಕಾಚಾರ ಶುರು, ಮೂರು ಪಕ್ಷಗಳ ಮುಂದಿನ ನಡೆ ಏನು?

ರಾಜ್ಯದಲ್ಲಿ 4 ಸ್ಥಾನಗಳಿಗೆ ನಡೆದ ರಾಜ್ಯಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 3, ಕಾಂಗ್ರೆಸ್ 1 ಸ್ಥಾನ ಪಡೆದ್ರೆ ಜೆಡಿಎಸ್ ಮುಖಭಂಗ ಅನುಭವಿಸಿತು. ಆದ್ರೆ ಕಾಂಗ್ರೆಸ್-ಜೆಡಿಎಸ್ ಪ್ರತಿಷ್ಠೆಯಿಂದ ಬಿಜೆಪಿಯ ಮೂರನೇ ಅಭ್ಯರ್ಥಿ ಗೆದ್ದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯಸಭೆ ಫಲಿತಾಂಶ
ರಾಜ್ಯಸಭೆ ಫಲಿತಾಂಶ
author img

By

Published : Jun 12, 2022, 7:51 AM IST

ಬೆಂಗಳೂರು: ರಾಜ್ಯಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಇದೀಗ ಹಲವು ರಾಜಕೀಯ ಲೆಕ್ಕಾಚಾರ ಶುರುವಾಗಿದೆ. ಸೋಲು, ಗೆಲುವಿನ ಹಿಂದೆ ಪಕ್ಷಗಳ ಮುಂದಿನ ಕಾರ್ಯತಂತ್ರ, ರಾಜಕೀಯ ಲಾಭ-ನಷ್ಟದ ಚರ್ಚೆ ನಡೆಯುತ್ತಿದೆ. ರಾಜ್ಯಸಭೆ ಚುನಾವಣೆಯ ಗೆಲುವು ರಾಜ್ಯ ಬಿಜೆಪಿ ನಾಯಕರ ವಿಶ್ವಾಸ ಹೆಚ್ಚಿಸಿದೆ. ತಮ್ಮ ಕಾರ್ಯತಂತ್ರ ಸಫಲವಾಗಿರುವ ಕಾರಣ ಇನ್ನಷ್ಟು ಹೊಸ ಪ್ಲಾನ್​​ಗಳನ್ನು ರೂಪಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಬಿಜೆಪಿ ಲೆಕ್ಕಾಚಾರವೇನು?:

  • ಮತ್ತಷ್ಟು ಉತ್ಸಾಹ ತುಂಬಿಕೊಂಡ ಬಿಜೆಪಿ ಪಾಳಯ. ಮುಂಬರುವ ಬಿಬಿಎಂಪಿ, ಜಿ.ಪಂ/ತಾ‌.ಪಂ ಚುನಾವಣೆಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಕಚ್ಚಾಟದ ಲಾಭ ಪಡೆಯಲು ಸಿದ್ಧತೆ
  • ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಸಂಘರ್ಷದಿಂದಲೂ ಲಾಭದ ನಿರೀಕ್ಷೆ
  • ಬಿಜೆಪಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು. ಪಕ್ಷಕ್ಕೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚಳದ ನಿರೀಕ್ಷೆ
  • ಹೈಕಮಾಂಡ್ ಗಮನ ಸೆಳೆದ ಮೂರನೇ ಅಭ್ಯರ್ಥಿ ಗೆಲುವು. ರಾಜ್ಯ ನಾಯಕರ ಮೇಲೆ ಹೈಕಮಾಂಡ್ ವಿಶ್ವಾಸವೃದ್ಧಿ ನಿರೀಕ್ಷೆ
  • ಇನ್ನಷ್ಟು ಬಲವಾಯಿತು ಬಿಜೆಪಿಯ ಸಾಮೂಹಿಕ ಶ್ರಮ, ಸಾಮೂಹಿಕ‌ ನಾಯಕತ್ವದ ಮಂತ್ರ. ಜೊತೆಗೆ ಹೈಕಮಾಂಡ್​​ಗೆ ರಾಜ್ಯದ ಮೇಲೆ ಆದ್ಯತೆ, ಪರಿಗಣನೆ ಹೆಚ್ಚಾಗುವ ನಿರೀಕ್ಷೆ

ಕಾಂಗ್ರೆಸ್ ಮೇಲಿನ ಪರಿಣಾಮ:

  • ಜೆಡಿಎಸ್​ನಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನೆ
  • ಮೈನಾರಿಟಿ ಓಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವಲ್ಲಿ ಸಹಕಾರಿ
  • ಜೆಡಿಎಸ್ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲಿ ಪರ್ಯಾಯ ಶಕ್ತಿ‌ ಕಾಂಗ್ರೆಸ್ ಒಂದೇ ಎಂದು ಬಿಂಬಿಸಿಕೊಳ್ಳಲು ಸಹಕಾರಿ
  • ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದು ಸಾಬೀತು ಪಡಿಸಲು ಸಹಕಾರಿ. ಜೊತೆಗೆ ಜಾತ್ಯಾತೀತ ಹೆಸರಿನಲ್ಲಿ ಹೊಂದಾಣಿಕೆ ರಾಜಕಾರಣ ಅನಿವಾರ್ಯ ಅಲ್ಲ ಎಂಬ ಸಂದೇಶ
  • ಜೆಡಿಎಸ್ ಸೋಲಿನಿಂದ ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರಿನಲ್ಲಿ ಕಾಂಗ್ರೆಸ್​​ಗೆ ಕೊಂಚ ಹಿನ್ನಡೆಯಾಗುವ ಭೀತಿ
  • ಜೆಡಿಎಸ್​ನ ಅಸಮಾಧಾನಿತ ಶಾಸಕರೂ ಕಾಂಗ್ರೆಸ್​​ಗೆ ಬೆಂಬಲಿಸಲು ಹಿಂದೇಟು ಹಾಕುತ್ತಿರುವ ಸಂದೇಶ
  • ಜೆಡಿಎಸ್​​ನ ಆಯ್ದ ಶಾಸಕರು ಕಾಂಗ್ರೆಸ್​​ಗೆ ಬರುವ ನಿರೀಕ್ಷೆಗೆ ಹಿನ್ನಡೆ

ಜೆಡಿಎಸ್​​ಗೆ ಪಾಲಿಗೆ ಸಿಕ್ಕ ಸಂದೇಶ ಏನು?:

  • ಕಾಂಗ್ರೆಸ್ ಬೆಂಬಲದಿ‌ಂದ ಬಿಜೆಪಿ ಗೆದ್ದಿದೆ ಅಂತ ಪ್ರಚಾರ ಮಾಡೋದು
  • ಜಾತ್ಯಾತೀತ ಪಕ್ಷ ಅಂದುಕೊಂಡು ಕೋಮುವಾದಿ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಕೊಟ್ಟಿದೆ ಎಂದು ಆರೋಪಿಸುವುದು.
  • ಬಿಜೆಪಿ ಬಿ ಟೀಂ ಕಾಂಗ್ರೆಸ್ ಅಂತ ಚುನಾವಣೆಯಲ್ಲಿ ಪ್ರಚಾರ
  • ಅಲ್ಪಸಂಖ್ಯಾತರಿಗೆ ಅಪಮಾನ ಮಾಡಲೆಂದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿದೆ ಎಂದು ಪ್ರಚಾರ
  • ಸಿದ್ದರಾಮಯ್ಯಗೆ ಮನವಿ ಮಾಡಿದ್ರೂ ಪ್ರತಿಷ್ಠೆ ಇಟ್ಟುಕೊಂಡು ಅಲ್ಪಸಂಖ್ಯಾತ ಅಭ್ಯರ್ಥಿ ಸೋಲಿಸಿದರೆಂದು ಪ್ರಚಾರ
  • 2016ರಲ್ಲಿ ಸಿದ್ದರಾಮಯ್ಯ 8 ಜನರಿಂದ ಕ್ರಾಸ್ ‌ಓಟ್ ಹಾಕಿಸಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸಿದ್ರು. ಈಗ ಕೂಡಾ ಕ್ರಾಸ್ ಓಟ್ ಮಾಡಿಸಿ ಅಲ್ಪಸಂಖ್ಯಾತ ಅಭ್ಯರ್ಥಿ ಸೋಲಿಸಿದ್ದಾರೆ ಎಂದು ಪ್ರಚಾರ
  • ರಾಜ್ಯಸಭೆ ಚುನಾವಣೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ವಿಧಾನಸಭೆ ಚುನಾವಣೆಗೆ ಉತ್ಸಾಹ ಕಡಿಮೆ ಆಗಬಹುದು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯಲ್ಲಿ ನಿರ್ಮಲಾ, ಜಗ್ಗೇಶ್‌, ಲೆಹರ್‌ ಸಿಂಗ್‌, ಜೈರಾಂ ರಮೇಶ್‌ಗೆ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.