ಬೆಂಗಳೂರು : ರಾಜ್ಯಾದ್ಯಂತ ವಾರಾಂತ್ಯದಲ್ಲಿ ಮಳೆ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಹೇಳಿದ್ದಾರೆ. ಮೇಲ್ಮೈ ಸುಳಿಗಾಳಿ ದಕ್ಷಿಣ ತಮಿಳುನಾಡು ಪ್ರದೇಶದಲ್ಲಿದೆ. ಟ್ರಫ್ ತೆಲಂಗಾಣದಿಂದ ದಕ್ಷಿಣ ತಮಿಳುನಾಡು ಕಡೆಗೆ ಸಾಗಿದೆ. ನಿನ್ನೆವರೆಗೂ ಇದ್ದ ಅರಬ್ಬೀ ಸಮುದ್ರದ ಮೇಲ್ಮೈ ಸುಳಿಗಾಳಿ ದುರ್ಬಲಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಕರಾವಳಿಯಲ್ಲಿ ಏಪ್ರಿಲ್ 21ರವರೆಗೂ ಮಳೆ ಇರಲಿದೆ. 22, 23ರಂದು ಮಳೆ ಪ್ರಮಾಣದಲ್ಲಿ ಏರಿಕೆ ಕಂಡು ಬರಲಿದೆ. ಇಂದು ಮತ್ತು ನಾಳೆಗೆ ಸಿಡಿಲು, ಗುಡುಗಿನ ಮುನ್ನೆಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಮುಂದಿನ ಐದು ದಿನ ಕೆಲವೆಡೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿಯೂ ಮಳೆ ಮುಂದುವರಿಯಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ಮುಂದೆ 24/7 ಹೋಟೆಲ್ಗಳು ಓಪನ್
ಇಂದು ಬೆಂಗಳೂರಲ್ಲಿ ಗುಡುಗು ಸಹಿತ ಮಳೆಯಾರ್ಭಟ ಮುಂದುವರಿಯಲಿದೆ. ನಾಳೆ ಮೋಡ ಕವಿದ ವಾತಾವರಣವಿದ್ದು, ಮಳೆ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ.