ETV Bharat / city

ರೈಲ್ವೆ ಟಿಕೆಟ್ ಕಲೆಕ್ಟರ್​ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ.. - ರೈಲ್ವೆ ಟಿಕೆಟ್ ಕಲೆಕ್ಟರ್​ ನ್ಯೂಸ್​

ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಸಮಾಜದಲ್ಲಿ‌ ನಾವಿದ್ದೇವೆ. ಆದರೆ, ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಚಿನ್ನದ ಸರ ಹಾಗೂ ಸಾವಿರಾರು ರೂ. ಹಣವನ್ನು ಪುನಃ ಅವರಿಗೆ ಹಿಂದಿರುಗಿಸಿ ರೈಲ್ವೆ ಟಿಕೆಟ್ ಕಲೆಕ್ಟರ್​ವೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

Railway Ticket Collector honesty appreciated by the public
ರೈಲ್ವೆ ಟಿಕೆಟ್ ಕಲೆಕ್ಟರ್​ ಪ್ರಾಮಾಣಿಕತೆ ಸಾರ್ವಜಕರಿಂದ ಮೆಚ್ಚುಗೆ
author img

By

Published : Jan 20, 2020, 9:40 PM IST

ಬೆಂಗಳೂರು: ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಚಿನ್ನದ ಸರ ಹಾಗೂ ಸಾವಿರಾರು ರೂ. ಹಣವನ್ನು ಪುನಃ ಅವರಿಗೆ ಹಿಂದಿರುಗಿಸಿ ರೈಲ್ವೆ ಟಿಕೆಟ್ ಕಲೆಕ್ಟರ್​ವೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

ಟಿಕೆಟ್ ಕೌಂಟರ್ ಚೀಫ್ ನಾಗರಾಜ್ ಪ್ರಾಮಾಣಿಕತೆ ಮೆರೆದ ಅಧಿಕಾರಿ. ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಹೇಮಲತಾ ಎಂಬುವರು ಪ್ರಯಾಣಿಸುತ್ತಿದ್ದರು.‌ ರೈಲು ಇಳಿಯುವ ಅವಸರದಲ್ಲಿ ಚಿನ್ನದ‌‌ ಸರ ಹಾಗೂ 13,400 ರೂ. ನಗದು ಇರುವ ಪರ್ಸ್‌ನ ರೈಲಿನಲ್ಲಿಯೇ ಮರೆತು ಹೋಗಿದ್ದಾರೆ.

ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಟಿಕೆಟ್ ಕಲೆಕ್ಟರ್‌ ನಾಗರಾಜ್, ಮಹಿಳೆ ಉಳಿದುಕೊಂಡಿದ್ದ ಸೀಟಿನ ಬಳಿ‌ ಬಂದಾಗ ಪರ್ಸ್ ಇರುವುದು ಗೊತ್ತಾಗಿದೆ.‌ ತಕ್ಷಣ ಪ್ಯಾಸೆಂಜರ್ ಲಿಸ್ಟ್​ನಲ್ಲಿ ಹೇಮಲತಾ ಅವರು ಮಾಹಿತಿ ತಿಳಿದುಕೊಂಡು ಅವರಿಗೆ ಕಳೆದುಹೋಗಿದ್ದ ಸರ ಹಾಗೂ‌ ಹಣ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Intro:Body:ಮರೆತುಹೋಗಿದ್ದ ಚಿನ್ನದ ಸರ ಹಾಗೂ ಸಾವಿರಾರು ರೂ.ಹಣವನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮರೆದ ರೈಲ್ವೇ ಟಿಕೆಟ್ ಕಲೆಕ್ಟರ್

ಬೆಂಗಳೂರು: ಬಿಡಿಗಾಸಿಗಾಗಿ ಕೊಲೆ‌‌ ಮಾಡುವ‌ ಸಮಾಜದಲ್ಲಿ‌ ನಾವಿದ್ದೇವೆ. ಇಂತಹದರಲ್ಲಿ ಸಾವಿರಾರು ರೂಪಾಯಿ ಸಿಕ್ಕರೆ ಜೇಬಿಗಿಳಿಸಿಕೊಂಡು ಸುಮ್ಮನಾಗುವ‌ ಜನಗಳ ಮಧ್ಯೆ ಇಲ್ಲೊಬ್ಬರು ಸಾವಿರಾರು ರೂಪಾಯಿ ಸಿಕ್ಕಿದರೂ ಅದನ್ನ ವಾರಸುದಾರರಿಗೆ ಒಪ್ಪಿಸುವ ಮೂಲಕ ರೈಲ್ವೇ ಟಿಕೆಟ್ ಕಲೆಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ..
ರೈಲ್ವೈ ಇಲಾಖೆಯ ಟಿಕೆಟ್ ಕೌಂಟರ್ ಚೀಫ್ ನಾಗರಾಜ್ ಪ್ರಾಮಾಣಿಕತೆ ಮೆರೆದ ಅಧಿಕಾರಿ.. ಮೈಲಾಡುತುರೈ- ಮೈಸೂರು ಎಕ್ಸ್ ಪ್ರೆಸ್ ರೈಲು ಇಂದು ಬೆಂಗಳೂರಿಗೆ ಬರುವಾಗ ಮಹಿಳಾ‌ ಪ್ರಯಾಣಿಕರಾದ ಹೇಮಲತಾ ಎಂಬುವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.‌ ಈ ವೇಳೆ ತಮ್ಮ ಸ್ಟಾಪ್ ಬಂದು ಅಂತಾ ಹೇಳಿ ಇಳಿದು ಹೋಗಿದ್ದಾರೆ. ‌ಇಳಿಯುವ ಮುನ್ನ‌ ಚಿನ್ನದ‌‌ ಸರ ಹಾಗೂ 13,400 ರೂಪಾಯಿ ನಗದು ಇರುವ ಪರ್ಸ್ ಮರೆತು ಹೋಗಿದ್ದಾರೆ. ಇದೇ ವೇಳೆ ಕಾರ್ಯನಿರ್ವಹಿಸುತ್ತಿದ್ದ ಟಿಕೆಟ್ ಕಲೆಕ್ಟರ್ ನಾಗರಾಜ್ ಮಹಿಳೆ ಉಳಿದುಕೊಂಡಿದ್ದ‌‌ ಸೀಟು ಬಳಿ‌ ಬಂದಾಗ ಪರ್ಸ್ ಇರುವುದು ಗೊತ್ತಾಗಿದೆ.‌ ಸಿಕ್ಕಿರುವ ಜಾಗದ ಸೀಟಿನಲ್ಲಿ ಪ್ರಯಾಣಿಸಿರುವ ಪ್ಯಾಸೆಂಜರ್ ಲಿಸ್ಟ್ ನಲ್ಲಿ ಹೇಮಲತಾ ಪ್ರಯಾಣಿಸಿರುವುದು ಗೊತ್ತಾಗಿದೆ.. ಆಕೆಯ ಬಗ್ಗೆಗಿನ ಮಾಹಿತಿ ತಿಳಿದುಕೊಂಡು ಅವರನ್ನು ಕರೆಯಿಸಿಕೊಂಡು ಇಂದು ಕಳೆದುಹೋಗಿದ್ದ ಸರ ಹಾಗೂ‌ ಹಣವನ್ನು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.