ETV Bharat / city

ಆರ್.ಟಿ.ನಗರ ಬಡಾವಣೆಯಲ್ಲಿ ರವೀಂದ್ರನಾಥ ಠಾಗೋರ್ ಪ್ರತಿಮೆ ಅನಾವರಣ ಸಿಎಂ - ನಗರದಲ್ಲಿ ರವೀಂಧ್ರನಾಥ್ ಟ್ಯಾಗೊರ್​

ಬೆಂಗಳೂರಿನ ಆರ್.ಟಿ.ನಗರ ಬಡಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವೀಂದ್ರನಾಥ ಠಾಗೋರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು.

Rabindranath nath tagore statue inauguration by cm bommai
ಆರ್.ಟಿ.ನಗರ ಬಡಾವಣೆಯಲ್ಲಿ ರವೀಂದ್ರನಾಥ ಠಾಗೋರ್ ಪ್ರತಿಮೆ ಉದ್ಘಾಟಿಸಿದ ಸಿಎಂ
author img

By

Published : Sep 22, 2021, 2:50 AM IST

ಬೆಂಗಳೂರು: ನಗರದ ಆರ್.ಟಿ.ನಗರ ಬಡಾವಣೆಯಲ್ಲಿ ರವೀಂದ್ರನಾಥ ಠಾಗೋರ್ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಬೈರತಿ ಸುರೇಶ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸಿಎಂ ಮಾತನಾಡಿ, ಸುರೇಶ್ ಬೈರತಿ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಯಾರ ಸರ್ಕಾರದಲ್ಲಿ, ಹೇಗೆ ಕೆಲಸ ಮಾಡಬೇಕೆಂದು ಗೊತ್ತಿದೆ. ಸರ್ಕಾರದಲ್ಲಿ ಸಿದ್ದರಾಮಣ್ಣ ಇದ್ದಾಗ ಜೇಬಿಗೆ ಕೈ ಹಾಕಿ ತೆಗೆಯುತ್ತಿದ್ದರು. ಈಗ ಜೇಬಿಗೆ ಕೈಹಾಕುವುದು, ಗೊತ್ತಾಗದಂತೆ ತೆಗೆಯುತ್ತಿದ್ದಾರೆ ಎಂದರು.

ರವೀಂದ್ರನಾಥ ಟ್ಯಾಗೋರ್ ಅವರು, ಗಾಂಧೀಜಿಯವರ ಜೊತೆಗೆ ಒಡನಾಟದಲ್ಲಿದ್ದರು ಎಂದ ಅವರು ನಗರಗಳ ಅಭಿವೃದ್ಧಿ ಕೆಲಸವಾಗಲಿದೆ. ರಸ್ತೆ ಮತ್ತು ಸ್ಲಂಗಳ ಅಭಿವೃದ್ಧಿಯೂ ಆಗಲಿದೆ ಎಂದು ಭರವಸೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.