ETV Bharat / city

ಯಾವುದೇ ದೇಶದ್ರೋಹಿಗಳನ್ನು ಬಿಡುವುದಿಲ್ಲ, ಮಟ್ಟ ಹಾಕುತ್ತೇವೆ: ಸಚಿವ ಆರ್.ಅಶೋಕ್

ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತೀಯ ಸಂಘಟನೆಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ. ಜೊತೆಗೆ, ಗಲಭೆಯಲ್ಲಿ ತೊಡಗಿರುವ ದೇಶದ್ರೋಹಿಗಳನ್ನು ಮಟ್ಟ ಹಾಕುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

r-ashok-statement-about-shivamogga-murder-case
ಸಚಿವ ಆರ್.ಅಶೋಕ್
author img

By

Published : Feb 22, 2022, 1:07 PM IST

ಬೆಂಗಳೂರು: ಶಿವಮೊಗ್ಗದ ಘಟನೆ ಬಹಳ ನೋವಿನ ಸಂಗತಿ. ಈ ಗಲಭೆಯಲ್ಲಿ ತೊಡಗಿಕೊಂಡಿರುವ ದೇಶದ್ರೋಹಿಗಳನ್ನು ಬಿಡುವುದಿಲ್ಲ, ಅವರನ್ನು ಮಟ್ಟ ಹಾಕುವುದಾಗಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಗಲಭೆ ಆಗಿರುವುದು ಅಲ್ಲಿನ ಮುಸ್ಲಿಂ ಗೂಂಡಾಗಿರಿಯಿಂದ. ಇಲ್ಲಿ SDPI, PFI ಸಂಘಟನೆಗಳು ಕಾರ್ಯಾಚರಿಸುತ್ತಿರುವುದಕ್ಕೆ ಇದೊಂದು ನಿದರ್ಶನ. ಹಿಜಾಬ್ ಗಲಾಟೆ ಶುರುವಾಯಿತು. ಈ ಗಲಭೆಗೂ ಹಿಜಾಬ್ ಕಾರಣ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಈಗಾಗಲೇ ಹಲವರನ್ನು ಬಂಧಿಸಲಾಗಿದೆ.

ಹಿಜಾಬ್ ವಿಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡ ಇದ್ದು, ಹಿಜಾಬ್ ವಿವಾದ ಕುರಿತ ಆ ಹೆಣ್ಣು ಮಕ್ಕಳ ಪ್ರತಿಭಟನೆ, ನಮ್ಮ ಮಾಧ್ಯಮಗಳಲ್ಲಿ ಬರುವ ಮೊದಲು, ವಿದೇಶಿ ಮಾಧ್ಯಮದಲ್ಲಿ ಬಂದಿದೆ. ಇನ್ನೂ ತನಿಖೆ ನಡೆಯುತ್ತಿದೆ. ಇದರಲ್ಲಿ PFI ಸಂಘಟನೆ ಭಾಗಿಯಾಗಿದೆಯಾ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ. ಈ ಬಗ್ಗೆ ಸಿಎಂ ಜೊತೆ ಇಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಈಶ್ವರಪ್ಪ ಕೊಲೆ ಮಾಡಿಸಿದ್ದಾರೆ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್‌, ನಾನು ಹೋಮ್ ಮಿನಿಸ್ಟರ್ ಆಗಿ ಈ ಹಿಂದೆ ಕೆಲಸ ಮಾಡಿದ್ದೇನೆ. ಪೊಲೀಸ್ ಇಲಾಖೆ ಒಂದು ಸ್ವತಂತ್ರ ಸಂಸ್ಥೆ. ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ. ಅಂತಿಮವಾಗಿ ಸಿಎಂ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸದನದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಈಶ್ವರಪ್ಪ ನಡುವೆ ವೈಯಕ್ತಿಕ ಜಗಳ ನಡೆದಿದೆ. ಅಧಿವೇಶನ ಕೂಡ ಇದೇ ವಿಚಾರಕ್ಕೆ ನಿಂತಿರೋದು. ವೈಯಕ್ತಿಕ ಟೀಕೆಗೆ ಸದನ ಗುರಿಯಾಗಿದೆ. ಶಿವಮೊಗ್ಗ ಪ್ರಕರಣದಲ್ಲಿ ಕೂಡ ಹೀಗೆ ಮುಂದುವರೆದಿದೆ. ಜೆಡಿಎಸ್ ಸದನ ನಡೆಸಲು ಧರಣಿ ಮಾಡಿದ್ದು,ಈ ಬಗ್ಗೆ ಸ್ಪೀಕರ್ ಜೊತೆ ಸಂಧಾನ ಮಾಡಲು ಯಡಿಯೂರಪ್ಪ ಅವರ ಜೊತೆ ನಾನೂ ಹೋಗಿದ್ದೆ. ಆದರೆ ಕಾಂಗ್ರೆಸ್ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ :ಶಿವಮೊಗ್ಗ ನಗರಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.