ETV Bharat / city

ಸರ್ಕಾರ ಅಭದ್ರ ಅನ್ನೋದು ನಾವಲ್ಲ, ಅದು ಆಡಳಿತ ಪಕ್ಷದ ಚಾಳಿ: ಆರ್. ಅಶೋಕ್ - jindal

ಮಧ್ಯಂತರ ಚುನಾವಣೆ ಬರೋದಾದ್ರೆ ಅದು ಆಡಳಿತ ಪಕ್ಷದವರಿಂದಲೇ ಬರಬಹುದು. ಕಾಂಗ್ರೆಸ್ - ಜೆಡಿಎಸ್ ನಾಯಕರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ಮಾತಾಡಿದ್ದಾರೆ. ಸಿದ್ದರಾಮಯ್ಯ ಅಹಿಂದ ಜಪ ಮಾಡ್ತಿದ್ದಾರೆ. ಮಧ್ಯಂತರ ಚುನಾವಣೆಯ ಮಾತುಗಳೆಲ್ಲಾ ಜೆಡಿಎಸ್-ಕಾಂಗ್ರೆಸ್​ನವರ ರಾಜಕೀಯ ದಾಳ ಅಷ್ಟೇ ಎಂದು ಬಿಜೆಪಿ ಮುಖಂಡ ಆರ್​.ಅಶೋಕ್​ ಕಿಡಿ ಕಾರಿದ್ದಾರೆ.

ಆರ್. ಆಶೋಕ್​
author img

By

Published : Jun 25, 2019, 5:13 PM IST

ಬೆಂಗಳೂರು: ಸರ್ಕಾರ ಅಭದ್ರ ಎಂದು ಹೇಳುವುದು ವಿಪಕ್ಷದವರ ಚಾಳಿ ಅಲ್ಲ. ಆಡಳಿತ ಪಕ್ಷದಲ್ಲಿರುವವರೇ ಸರ್ಕಾರ ಅಭದ್ರ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ದೋಸ್ತಿ ನಾಯಕರಿಗೆ ಟಾಂಗ್ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ‌ ಅವರು, ಮಧ್ಯಂತರ ಚುನಾವಣೆ ಬರೋದಾದ್ರೆ ಅದು ಆಡಳಿತ ಪಕ್ಷದವರಿಂದಲೇ ಬರಬಹುದು. ಕಾಂಗ್ರೆಸ್ - ಜೆಡಿಎಸ್ ನಾಯಕರು ಮಧ್ಯಂತರ ಚುನಾವಣೆ ಬಗ್ಗೆ ಮಾತಾನಾಡುತ್ತಿದ್ದಾರೆ. ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ಮಾತಾಡಿದ್ದಾರೆ. ಸಿದ್ದರಾಮಯ್ಯ ಅಹಿಂದ ಜಪ ಮಾಡ್ತಿದ್ದಾರೆ. ಮಧ್ಯಂತರ ಚುನಾವಣೆಯ ಮಾತುಗಳೆಲ್ಲಾ ಜೆಡಿಎಸ್-ಕಾಂಗ್ರೆಸ್​ನವರ ರಾಜಕೀಯದಾಳ ಅಷ್ಟೇ. ಒಬ್ಬರನ್ನೊಬ್ಬರು ಬೆದರಿಸಲು ಈ ತರದ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಬಿಜೆಪಿಗೆ ಮಧ್ಯಂತರ ಚುನಾವಣೆ ಬೇಕಿಲ್ಲ. ಇವೆಲ್ಲಾ ಬ್ಲಾಕ್ ಮೇಲ್‌ ತಂತ್ರಗಾರಿಕೆ ಎಂದು ಟೀಕೆ ಮಾಡಿದರು.

ಮಾತು ಮುಂದುವರೆಸಿದ ಆಶೋಕ್, ನಾವು 105 ಶಾಸಕರಿದ್ದೇವೆ. ಅವರು ಹೇಳಿದಾಕ್ಷಣ ಮಧ್ಯಂತರ ಚುನಾವಣೆ ಮಾಡಲು ಆಗುವುದಿಲ್ಲ. ಅವರ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಾಗದೆ ಇದ್ದಾಗ ರಾಜ್ಯಪಾಲರು ನಮ್ಮನ್ನ ಒಂದು ಬಾರಿ ಸರ್ಕಾರ ರಚಿಸುವುದರ ಬಗ್ಗೆ ಕೇಳಬೇಕಾಗುತ್ತೆ. ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಕೇಳಿದರೆ, ನಾವು ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಆರ್. ಆಶೋಕ್​ ಹೇಳಿಕೆ

ಜಿಂದಾಲ್ ಸಂಪುಟ ಉಪ ಸಮಿತಿ ಮೇಲೆ ನಂಬಿಕೆ ಇಲ್ಲ

ಇದೇ ವೇಳೆ ಜಿಂದಾಲ್ ಸಂಪುಟ ಉಪ ಸಮಿತಿ ರಚನೆ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಆರ್ .ಅಶೋಕ್, ಸಂಪುಟ ಉಪ ಸಮಿತಿ ಬಗ್ಗೆ ನಮಗೆ ನಂಬಿಕೆ ಇಲ್ಲ. ಅದು ಸರ್ಕಾರದ ಪರವಾಗಿಯೇ ವರದಿ ನೀಡುತ್ತದೆ. ಬೇಕಾದರೆ ಸರ್ಕಾರ ಮತ್ತೆ ಹತ್ತು ವರ್ಷಕ್ಕೆ ಲೀಸ್​ಗೆ ನೀಡಲಿ, ಆದರೆ ಮಾರಾಟ ಮಾಡಬಾರದು ಎಂದು ತಿಳಿಸಿದರು.

ಗ್ರಾಮ‌ ವಾಸ್ತವ್ಯ ಬಗ್ಗೆ ಸಿಎಂಗೆ ಆಶೋಕ್ ಸಾವಾಲ್

ಗ್ರಾಮ ವಾಸ್ತವ್ಯದ ಬಗ್ಗೆ ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಸಿಎಂ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಹಿಂದಿನ ಅವಧಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮಗಳಲ್ಲಿ ಅಭಿವೃದ್ಧಿ ಆಗಿಲ್ಲ. ಗ್ರಾಮವಾಸ್ತವ್ಯ ನಿಷ್ಪ್ರಯೋಜಕ. ಕಳೆದ ಅವಧಿಯ ಗ್ರಾಮವಾಸ್ತವ್ಯ ಬಗ್ಗೆ ಸಿಎಂ ನಿಖರ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

Intro:R. Ashok Body:KN_BNG_02_25_RASHOK_BYTE_SCRIPT_VENKAT_7201951

ಸರ್ಕಾರ ಅಭದ್ರ ಎಂದು ಹೇಳುವ ಚಾಳಿ ಇರುವುದು ಆಡಳಿತ ಪಕ್ಷಕ್ಕೆ, ನಮಗಲ್ಲ: ಆರ್.ಅಶೋಕ್

ಬೆಂಗಳೂರು: ಸರ್ಕಾರ ಅಭದ್ರ ಅಂತ ಹೇಳೋದು ವಿಪಕ್ಷದವರ ಚಾಳಿ ಅಲ್ಲ. ಆಡಳಿತ ಪಕ್ಷದಲ್ಲಿ ಇರೋರೇ ಸರ್ಕಾರ ಅಭದ್ರ ಅಂತಿದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ‌ ಅವರು, ಮಧ್ಯಂತರ ಚುನಾವಣೆ ಬರೋದಾದ್ರೆ ಅದು ಆಡಳಿತ ಪಕ್ಷದವರಿಂದಲೇ ಬರಬಹುದು. ಕಾಂಗ್ರೆಸ್ ಜೆಡಿಎಸ್ ನಾಯಕರು ಮಧ್ಯಂತರ ಚುನಾವಣೆ ಬಗ್ಗೆ ಮಾತಾಡ್ತಿದಾರೆ. ದೇವೇಗೌಡ್ರು ಮಧ್ಯಂತರ ಚುನಾವಣೆ ಬಗ್ಗೆ ಮಾತಾಡಿದ್ದಾರೆ. ಸಿದ್ದರಾಮಯ್ಯರ ಅಹಿಂದ ಜಪ ಮಾಡ್ತಿದ್ದಾರೆ. ಆದ್ರೆ ಬಿಜೆಪಿಗೆ ಮಧ್ಯಂತರ ಚುನಾವಣೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ನಾವು 105 ಶಾಸಕರಿದ್ದೇವೆ. ಅವರು ಹೇಳಿದಾಕ್ಷಣ ಮಧ್ಯಂತರ ಚುನಾವಣೆ ಮಾಡಲು ಆಗುವುದಿಲ್ಲ. ರಾಜ್ಯಪಾಲರು ನಮ್ಮ‌ ಮಾತನ್ನೂ ಕೇಳಬೇಕಾಗುತ್ತದೆ. ನಮಗೆ ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಕೇಳಿದರೆ, ನಾವು ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇದು ಜೆಡಿಎಸ್ ಮತ್ತು ಕಾಂಗ್ರೆಸ್ ನವರ ರಾಜಕೀಯದಾಳ ಅಷ್ಟೇ. ಒಬ್ಬರನ್ನೊಬ್ಬರು ಬೆದರಿಸಲು ಈ ತರದ ಹೇಳಿಕೆ ನೀಡುತ್ತಿದ್ದಾರೆ. ಇದೊಂದು ಬ್ಲಾಕ್ ಮೇಲ್‌ ತಂತ್ರಗಾರಿಕೆ. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಜಿಂದಾಲ್ ಸಂಪುಟ ಉಪಸಮಿತಿ ರಚನೆ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಆರ್ .ಅಶೋಕ್, ಸಂಪುಟ ಉಪ ಸಮಿತಿ ಬಗ್ಗೆ ನಮಗೆ ನಂಬಿಕೆ ಇಲ್ಲ‌. ಅದೂ ಸರ್ಕಾರದ ಪರವಾಗಿಯೇ ವರದಿ ನೀಡುತ್ತದೆ. ಸರ್ಕಾರ ಮತ್ತೆ ಹತ್ತು ವರ್ಷ ಬೇಕಾದರೆ ಲೀಸ್ ನೀಡಲಿ, ಆದರೆ ಮಾರಾಟ ಮಾಡಬಾರದು ಎಂದು ತಿಳಿಸಿದರು.

ಗ್ರಾಮ‌ ವಾಸ್ತವ್ಯ ಬಗ್ಗೆ ಸಿಎಂ ಹಾರಿಕೆ ಉತ್ತರ:

ಗ್ರಾಮ ವಾಸ್ತವ್ಯ ಬಗ್ಗೆ ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಸಿಎಂ ಹಾರಿಕೆ ಉತ್ತರ ಕೊಟ್ಟಿದ್ದಾರೆ ಎಂದು ‌ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.

ಹಿಂದಿನ ಅವಧಿಯಲ್ಲಿ ಗ್ರಾಮವಾಸ್ತವ್ಯ ಹೂಡಿದ್ದ ಗ್ರಾಮಗಳ ಅಭಿವೃದ್ಧಿ ಆಗಿಲ್ಲ. ಗ್ರಾಮವಾಸ್ತವ್ಯ ನಿಷ್ಪ್ರಯೋಜಕ. ಕಳೆದ ಅವಧಿಯ ಗ್ರಾಮವಾಸ್ತವ್ಯ ಬಗ್ಗೆ ಸಿಎಂ ನಿಖರ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.Conclusion:Venkat
ETV Bharat Logo

Copyright © 2025 Ushodaya Enterprises Pvt. Ltd., All Rights Reserved.