ETV Bharat / city

ಸದ್ಯಕ್ಕೆ ಲಾಕ್​ಡೌನ್ ಇಲ್ಲ, ಒಮಿಕ್ರೋನ್‌ ಬಗ್ಗೆ ಆತಂಕ ಬೇಡ.. ಬೆಳಗಾವಿ ಅಧಿವೇಶನ ನಡೆಯಲಿದೆ.. ಆರ್. ಅಶೋಕ್ - Kengal Hanumanthaiah death anniversary

ಬೆಳಗಾವಿ ಅಧಿವೇಶನಕ್ಕೆ ಶಾಸಕರ ಅಪಸ್ವರ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ 2 ವರ್ಷಗಳಿಂದ‌ ಬೆಳಗಾವಿ ಅಧಿವೇಶನವನ್ನು ಮುಂದೂಡುತ್ತಾ ಬರ್ತಿದ್ದೇವೆ. ಈಗ ಇದ್ದಕ್ಕಿದ್ದಂತೆ ಅಧಿವೇಶನ ರದ್ದು ಮಾಡಿದ್ರೆ ಅಲ್ಲಿನ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ..

lockdown
ಆರ್. ಅಶೋಕ್
author img

By

Published : Dec 1, 2021, 1:02 PM IST

Updated : Dec 1, 2021, 1:33 PM IST

ಬೆಂಗಳೂರು : ಇದುವರೆಗೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಮಿಕ್ರೋನ್ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಕ್ಕೆ ಒಮಿಕ್ರೋನ್ ಆತಂಕ ಇಲ್ಲ. ನಾವು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲು ಚಿಂತನೆ ನಡೆಸಿದೆ. ಸದ್ಯಕ್ಕೆ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ ಎಂದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಆರ್. ಅಶೋಕ್

ಪ್ರತಿ ಜಿಲ್ಲೆಗಳ ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇವೆ. ವಿಶೇಷವಾಗಿ ಕೇರಳ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಆದರೆ, ಸದ್ಯಕ್ಕಂತೂ ಎಲ್ಲಿಯೂ ಈ ರೀತಿಯ ಹೊಸ ತಳಿ ಪತ್ತೆಯಾಗಿಲ್ಲ.

ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಿಗದಿತ ದಿನಾಂಕದಂತೆಯೇ ಬೆಳಗಾವಿಯಲ್ಲಿ ಈ ಸಾರಿಯ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಓದಿ: ಸಂಸದರ ಅಮಾನತು ಹಿಂಪಡೆಯಲು ಪಟ್ಟು : ಗಾಂಧಿ ಪ್ರತಿಮೆಯ ಮುಂದೆ ವಿಪಕ್ಷಗಳಿಂದ ಪ್ರತಿಭಟನೆ

ಬೆಳಗಾವಿ ಅಧಿವೇಶನಕ್ಕೆ ಶಾಸಕರ ಅಪಸ್ವರ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ 2 ವರ್ಷಗಳಿಂದ‌ ಬೆಳಗಾವಿ ಅಧಿವೇಶನವನ್ನು ಮುಂದೂಡುತ್ತಾ ಬರ್ತಿದ್ದೇವೆ. ಈಗ ಇದ್ದಕ್ಕಿದ್ದಂತೆ ಅಧಿವೇಶನ ರದ್ದು ಮಾಡಿದ್ರೆ ಅಲ್ಲಿನ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ.

ಜನರು ಕೂಡ ಭಯ ಭೀತರಾಗ್ತಾರೆ. ಆದ್ದರಿಂದ ಇದು ಒಳ್ಳೆಯ ಸಂದೇಶವಲ್ಲ. ಅಧಿವೇಶನ ಅಲ್ಲಿ ನಡೆಸಲೇಬೇಕಾಗಿದೆ. ಅದಕ್ಕಾಗಿ ಈ ಬಾರಿ ಅಲ್ಲಿ ಅಧಿವೇಶನ ನಡೆಸುತ್ತೇವೆ ಎಂದು ವಿವರಿಸಿದರು.

ಓದಿ: ಶಾಸಕ ಎಸ್​​​.ಆರ್ ವಿಶ್ವನಾಥ್ ಹತ್ಯೆ ಸಂಚು ಬಗ್ಗೆ ನನಗೆ ಮಾಹಿತಿ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದ ಜನರ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಆ ದೃಷ್ಟಿಯಿಂದ ಎಲ್ಲಾ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷನಾಗಿ ನಮಗೆ ಆ ಜವಾಬ್ದಾರಿ ಇದೆ. ಒಂದು ವೇಳೆ ಆ ತಳಿ ಪತ್ತೆಯಾದ್ರೆ ಬಿಗಿ ಕ್ರಮಕೈಗೊಳ್ಳುತ್ತೇವೆ ಎಂದರು.

ಕೆಂಗಲ್ ಪ್ರತಿಮೆಗೆ ಮಾಲಾರ್ಪಣೆ : ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ರೂವಾರಿ, ವಿಧಾನಸೌಧದ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ 41 ನೇಪುಣ್ಯತಿಥಿಯಂದು ವಿಧಾನಸೌಧದಲ್ಲಿ ಸರ್ಕಾರದ ಪರವಾಗಿ ಅವರ ಪುತ್ಥಳಿಗೆ ಕಂದಾಯ ಸಚಿವರಾದ ಆರ್ ಅಶೋಕ್​ ಮಾಲಾರ್ಪಣೆ ಮಾಡಿ ಅವರ ಸಾಧನೆಗಳನ್ನು ಸ್ಮರಿಸಿದರು.

ನಂತರ ಮಾತನಾಡಿದ ಅವರು, ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ಸ್ವಾತಂತ್ರ್ಯ ಚಳವಳಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಕೆಂಗಲ್ ಹನುಮಂತಯ್ಯ. ಕೇಂದ್ರದ ಸಚಿವರಾಗಿಯೂ ಸೇವೆ ಸಲ್ಲಿಸಿದ ಹನುಮಂತಯ್ಯನವರ ಪುಣ್ಯತಿಥಿ ಇಂದು. ಅವರ ಅವಧಿಯಲ್ಲೇ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣ ಆಗಿದೆ.

ರಾಮಾಯಣ ಪುಸ್ತಕವನ್ನು ಮನೆ ಮನೆಗೆ ತಲುಪಿಸುವ ಅಭಿಯಾನ ಶುರು ಮಾಡಿದವರು. ವಿಧಾನಸೌಧ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಹನುಮಂತಯ್ಯ ಹೆಸರು ಶಾಶ್ವತ ಎಂದರು. ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ವೆಂಕಟವರ್ಧನ್ ಉಪಸ್ಥಿತರಿದ್ದರು.

Last Updated : Dec 1, 2021, 1:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.