ಬೆಂಗಳೂರು : ದೊಡ್ಮನೆ ಮಗ ಹಾಗು ಅಭಿಮಾನಿಗಳ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಅಗಲಿ ಐದು ತಿಂಗಳು ಆಗುತ್ತಾ ಬರುತ್ತಿದೆ. ಆದರೆ ಈ ಯುವರತ್ನನ ಬಗ್ಗೆ, ಒಂದಲ್ಲಾ ಒಂದು ಅಚ್ಚರಿ ವಿಷಯಗಳು ನಡೆಯುತ್ತಿವೆ. ಕಳೆದ ವಾರ ಪವರ್ ಸ್ಟಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನದ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಸೇರುವ ಮೂಲಕ ರೆಕಾರ್ಡ್ ಮಾಡಿದೆ.
ಇದರ ಜೊತೆಗೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರತನಕ ಅಪ್ಪು ಸಮಾಧಿಗೆ ದಿನಕ್ಕೆ ಕಮ್ಮಿ ಅಂದರೂ, ಎರಡರಿಂದ ಐದು ಸಾವಿರ ಜನ ಭೇಟಿ ಕೊಡುತ್ತಾ ಇದ್ದಾರೆ. ಅಪ್ಪು ಬಗ್ಗೆ ರ್ಯಾಲಿಗಳು, ನೇತ್ರದಾನ ಮಾಡುವುದು, ಅಪ್ಪು ಹೆಸರಲ್ಲಿ ಗಿಡಗಳನ್ನು ನೆಡುವುದು ಹೀಗೆ ಸಾಕಷ್ಟು ಕೆಲಸಗಳು ಆಗುತ್ತಿವೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕುರಿತಾಗಿ ಪ್ರಶ್ನೆ ಪತ್ರಿಕೆ ರೆಡಿ ಮಾಡಿ ಪರೀಕ್ಷೆ ನಡೆಸಲಾಗಿದೆ.
ಹೌದು, ಬೆಂಗಳೂರಿನ ವಿಜಯನಗರ ಬಳಿಯ ಆರ್ ಪಿ ಸಿ ಲೇಔಟ್ ನಲ್ಲಿರುವ, ದಿ ನ್ಯೂ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆಯಲ್ಲಿ ಈ ರಾಜಕುಮಾನ ಬಗ್ಗೆ ಪ್ರಶ್ನೆ ಪತ್ರಿಕೆಯನ್ನು ತಯಾರಿಸಲಾಗಿದೆ. ಇತ್ತೀಚೆಗೆ 4ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಮಕ್ಕಳಿಗೆ ನೀಡಲಾಗಿದ್ದ ವಾರ್ಷಿಕ ಪರೀಕ್ಷೆಯಲ್ಲಿ ಪುನೀತ್ ರಾಜ್ ಕುಮಾರ್ ಕುರಿತಂತೆ ಪ್ರಶ್ನೆ ಕೇಳಲಾಗಿದೆ.
ಐಸಿಎಸ್‌ಇ ಪಠ್ಯಕ್ರಮದ 4ನೇ ತರಗತಿ ವಿದ್ಯಾರ್ಥಿಗಳ ಕನ್ನಡ ಭಾಷಾ ಪರೀಕ್ಷೆಯಲ್ಲಿ ಪುನೀತ್ ರಾಜ್ ಕುಮಾರ್ ಕುರಿತಂತೆ ಗದ್ಯ ಭಾಗವನ್ನು ನೀಡಿ ಪ್ರಶ್ನೆ ಕೇಳಲಾಗಿದೆ. ಗದ್ಯ ಭಾಗವನ್ನು ಓದಿ, ಉತ್ತರಿಸುವಂತೆ ಸೂಚಿಸಿದ್ದಾಗಿ ತಿಳಿದು ಬಂದಿದೆ. ಗದ್ಯಭಾಗದಲ್ಲಿ ತಿಳಿಸಿದ್ದಂತೆ ಪುನೀತ್ ರಾಜ್ ಕುಮಾರ್ ಬಗೆಗೆ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಾ ಇದ್ದರು.? ಅವರು ಯಾವಾಗ ಜನಿಸಿದ್ರು..? ಅವರ ತಂದೆ ಹೆಸರೇನು.? ಎಂದು ಪ್ರಶ್ನೆಗಳನ್ನು ಕೇಳಲಾಗಿದೆ.ಇದಲ್ಲದೇ ಬಿಟ್ಟ ಸ್ಥಳಗಳನ್ನು ತುಂಬಿ ಎನ್ನುವಂತ ಪ್ರಶ್ನೆಗಳನ್ನ ಕೇಳಲಾಗಿದೆ ಎಂದು ಹೇಳಲಾಗಿದೆ.
ಪುನೀತ್ ರಾಜ್ ಕುಮಾರ್_ _ಎಂದು ಖ್ಯಾತರಾಗಿದ್ದರು ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಪುನೀತ್ ರಾಜ್ ಕುಮಾರ್ ತಾಯಿಯ ಹೆಸರು ಎಂದು ಪ್ರಶ್ನೆಗಳನ್ನು ಕೇಳಲಾಗಿದೆ. ಹೀಗೆ ಹಲವು ಪ್ರಶ್ನೆಗಳನ್ನು, ಈ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದೆ. ಸದ್ಯ ಪುನೀತ್ ರಾಜ್‍ಕುಮಾರ್ ಬಗ್ಗೆ ಕುರಿತಾದ ಈ ಪ್ರಶ್ನೆ ಪತ್ರಿಕೆ ಎಲ್ಲೆಡೆ ಸದ್ದು ಮಾಡುತ್ತಿದೆ.
ಓದಿ : ಅಭಿಮಾನಿಗಳ ಜೊತೆ ಜೇಮ್ಸ್ ಸಿನಿಮಾ ವೀಕ್ಷಿಸಿದ ಸೆಂಚುರಿ ಸ್ಟಾರ್ ಹಾಗು ರಿಯಲ್ ಸ್ಟಾರ್