ಬೆಂಗಳೂರು: ಕೇಂದ್ರದಿಂದ ಗುಜರಿ ನೀತಿ ಜಾರಿಯಾಗಿರುವ ಬೆನ್ನಲ್ಲೇ ರಾಜ್ಯದಲ್ಲೂ ಗುಜರಿಗೆ ಸೇರಬೇಕಾದ ವಾಹನಗಳ ಪತ್ತೆಗೆ ಕ್ಯುಆರ್ ಕೋಡ್ ಅಳವಡಿಸಲು ಸಾರಿಗೆ ಇಲಾಖೆ ಯೋಜನೆ ರೂಪಿಸಿದೆ.
ರಾಜ್ಯದಲ್ಲಿ 40 ಲಕ್ಷ ಗುಜರಿ ಸೇರಬೇಕಾದ ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಇಂತಹ ವಾಹನಗಳ ಶೋಧಕ್ಕೆ ಸಾರಿಗೆ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದೆ. ಇದಕ್ಕಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ, ಪ್ರತ್ಯೇಕ ಕ್ಯೂಆರ್ ಕೋಡ್ ರೂಪಿಸಲಾಗುತ್ತಿದೆ. ಬಳಿಕ ಅದಕ್ಕೆ ವಾಹನಗಳ ಆರ್ಸಿ ನಂಬರ್ ಲಿಂಕ್ ಮಾಡಲಾಗುತ್ತದೆ. ಅದರ ಸ್ಟಿಕ್ಕರ್ಗಳನ್ನು ವಾಹನಗಳ ಮೇಲೆ ಅಂಟಿಸಲಾಗುತ್ತದೆ. ವಿವಿಧ ಪ್ರಕಾರದ ವಾಹನಗಳಿಗೆ ವಿವಿಧ ಬಣ್ಣದ ಸ್ಟಿಕ್ಕರ್ ಹಾಕಲಾಗುವುದು.
ಇದನ್ನು ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿದರೆ ವಾಹನ ಎಷ್ಟು ವರ್ಷ ಹಳೆಯದು, ಯಾರ ಹೆಸರಿನಲ್ಲಿ ಇದೆ ಎನ್ನುವ ಮಾಹಿತಿ ಲಭ್ಯವಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯ ಈ ನಿಯಮ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ ಎಂಬ ಮಾಹಿತಿ ದೊರೆತಿದೆ.
ಓದಿ: ಯಲಹಂಕ: ಸಕಾಲಕ್ಕೆ ಆಕ್ಸಿಜನ್ ಪೂರೈಸಿ ಸೋಂಕಿತರ ಜೀವ ಉಳಿಸಿದ ಸೋನು ಸೂದ್ ಟ್ರಸ್ಟ್