ಆನೇಕಲ್(ಬೆಂಗಳೂರು): ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು ಯುವಿ ರೇಸ್ನಿಂದ ಎನ್-95 ರೆಸ್ಪಿರೇಟರ್ ಮಾಸ್ಕ್ಗಳನ್ನ ವೈಜ್ಞಾನಿಕವಾದ ರೀತಿಯಲ್ಲಿ ಶುದ್ಧೀಕರಣ ಮಾಡುವ ವಿನೂತನವಾದ ವ್ಯವಸ್ಥೆ ಅಳವಡಿಸಿಕೊಂಡಿದೆ.
ಸಮರ್ಪಕವಾಗಿ ಪಿಪಿಇ ಕಿಟ್‍ಗಳ ಪೂರೈಕೆ ಮಾಡಲು ಸಹಕಾರಿಯಾಗಲೆಂದು ಈ ಕ್ರಮವನ್ನ ಅಳವಡಿಸಿಕೊಳ್ಳಲಾಗಿದೆ. ಇದು ಸಂಪೂರ್ಣವಾಗಿ ದೇಶೀಯವಾಗಿದ್ದು, ಫ್ಯಾಬ್ರಿಕೇಟೆಡ್ ಆಗಿದೆ. ಎನ್-95 ರೆಸ್ಪಿರೇಟರ್ ಮಾಸ್ಕ್ಗಳನ್ನ ಅತ್ಯಂತ ಸರಳವಾಗಿ ಶುದ್ಧೀಕರಣ ಮಾಡುವ ಡಿವೈಸ್ ಇದಾಗಿದೆ. ಫೋರ್ಟಿಸ್ ಹಾಸ್ಪಿಟಲ್ಸ್ನ ದಕ್ಷಿಣ ವಲಯದ ವೈದ್ಯಕೀಯ ಕಾರ್ಯಾಚರಣೆಗಳ ನಿರ್ದೇಶಕ ಡಾ. ವಸುಂಧರ ಅತ್ರೆ ಮತ್ತು ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್ನ ಸೆಂಟ್ರಲ್ ಇನ್‍ಫೆಕ್ಷನ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಕಮಿಟಿಯ ಅಧ್ಯಕ್ಷ ಡಾ. ಮುರಳಿ ಚಕ್ರವರ್ತಿ ಅವರ ಮಾರ್ಗದರ್ಶನದಲ್ಲಿ ಯುವಿ ರೇಸ್ ಬಳಸಿ ರೆಸ್ಪಿರೇಟರ್ಗಳನ್ನ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಎನ್-95 ರೆಸ್ಪಿರೇಟರ್ ಮಾಸ್ಕ್ಗಳನ್ನ ಸೈಂಟಿಫಿಕ್ ಲಿಟರೇಚರ್ನಲ್ಲಿ ನೀಡಿರುವ ನಾಲ್ಕು ಪ್ರಮುಖ ಸಾಧ್ಯವಾದ ತಾಂತ್ರಿಕತೆಗಳನ್ನ ಬಳಸಿ ಶುದ್ಧೀಕರಣ ಮಾಡಲಾಗುತ್ತಿದೆ. ಆ ತಾಂತ್ರಿಕತೆಗಳೆಂದರೆ: ಹಾಟ್ ಏರ್ ಓವನ್, ಅಲ್ಟ್ರಾವೈಲೆಟ್ ಜರ್ಮಿಸಿಡಲ್ ಇರಾಡಿಯೇಶನ್ (ಯುವಿಜಿಐ), ಲೇ ಆಫ್ ಮೆಥಡ್, ಪ್ಲಾಸ್ಮಾ ಸ್ಟರಿಲೈಸೇಷನ್, ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ). ಈ ನಾಲ್ಕು ವಿಧಾನಗಳಲ್ಲಿ ಯಾವುದಾದರೂ ಒಂದು ವಿಧಾನದಲ್ಲಿ ಮಾಸ್ಕ್ ಶುದ್ಧೀಕರಣ ಮಾಡಿದ ನಂತರ ಮತ್ತೆ ಧರಿಸಬಹುದಾಗಿದೆ.